ತುಮಕೂರು: ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣವನ್ನು ಸಿಓಡಿಯಿಂದ ತನಿಖೆಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಲೆ ಮಾಡಿದ ವ್ಯಕ್ತಿಯನ್ನು ಒಂದು ಗಂಟೆಯಲ್ಲಿ ಬಂಧನ ಮಾಡಲಾಗಿದೆ, ಕಾನೂನಿನ ಅಡಿ ತನಿಖೆ ನಡೆಯುತ್ತಿದೆ, ಸರ್ಕಾರ ತೀರ್ಮಾನ ಮಾಡಿ ಘಟನೆಯನ್ನ ಸಿಓಡಿಗೆ ಕೋಡಲು ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ, ಸಿಓಡಿ ತಂಡ ಇಂದೇ ಹುಬ್ಬಳ್ಳಿಗೆ ಭೇಟಿ ಮಾಡಿ ಟೇಕ್ ಓವರ್ ಮಾಡ್ತಾರೆ ಎಂದರು.
ಕೊಲೆ ಹಿಂದೆ ನಾಲ್ಕೈದು ಜನರು ಇದ್ದಾರೆ ಎಂದು ನೇಹಾ ತಂದೆ ಹೇಳಿದ್ದಾರೆ, ಸಿಓಡಿ ತಂಡಕ್ಕೆ 10-12 ದಿನದಲ್ಲಿ ವರದಿ ಸರ್ಕಾರಕ್ಕೆ ಸಲ್ಲಿಸಲು ಸೂಚನೆ ನೀಡಲಾಗಿದೆ, ಆ ತಂದೆ ತಾಯಿಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದರು.
ಬಿಜೆಪಿ ಇನ್ವಾಲ್ ಆಗಿ ಈ ಪ್ರಕರಣವನ್ನು ರಾಜಕೀಯವಾಗಿ ತಿರುಗಿಸುತ್ತಿದ್ದಾರೆ, ಅನೇಕ ಟ್ವಿಟ್ ಗಳ ಹೇಳಿಕೆ ಗಮನಿಸಿದಾಗ ರಾಜಕೀಯಕ್ಕೆ ತಿರುಗಿಸಿದ್ದಾರೆ, ನಾನು ಮೊನ್ನೆಯೇ ತಂದೆ ತಾಯಿಗೆ ನೋವಾಗಿದ್ದರೆ ವಿಷಾದ ಅಂತಾ ಹೇಳಿದ್ದೇನೆ, ಸಿಎಂ ಹೇಳಿಕೆ ಹಾಗೂ ನನ್ನ ಹೇಳಿಕೆಯನ್ನು ಕೀಳಾಗಿ, ಕಟುವಾಗಿ ಮಾತಾಡುತ್ತಿದ್ದಾರೆ, ಇದು ಅವರ ಸಂಸ್ಕೃತಿ ತೋರಿಸುತ್ತೆ ಎಂದರು.
ಅಮಿತ್ ಷಾ ಟ್ವೀಟ್ ಗೆ ಆಕ್ರೋಶ
ನಾವು ಅಧಿಕಾರಕ್ಕೆ ಬಂದ್ರೆ 4% ಮುಸ್ಲಿಂ ಮೀಸಲಾತಿ ನಿಲ್ಲಿಸುತ್ತೆವೆ, ಅದನ್ನ ಬೇರೆಯವರಿಗೆ ಕಡುತ್ತೇವೆ ಅಂತಾ ಅಮಿತ್ ಷಾ ಟ್ವೀಟ್ ಮೂಲಕ ಹೇಳಿದ್ದಾರೆ, ಸಬ್ ಕಾ ಸಾಥ್ ಅಂದ್ರೆ ಏನರ್ಥ ಅಂತಾ ಗೊತ್ತಿಲ್ಲ ನನಗೆ, ಸಬ್ ಕಾ ಸಾಥ್ ಅಂದರೆ ಏನು, ನೀವು ಅವರನ್ನ ಬಿಟ್ಟು ಬೇರೆಯವರಿಗೆ ಮಾಡ್ತೀವಿ ಅಂದ್ರೆ ಏನು ಎಂದು ಪ್ರಶ್ನಿಸಿದರು.
Comments are closed.