ಕೊರಟಗೆರೆ: ಜನ ನಾಯಕರೇ, ಅಧಿಕಾರಿಗಳೇ ನಮ್ಮ ಓಟು ಮಾತ್ರ ನಿಮಗೆ ಸಾಕಾ, ನಮಗೇ ಸೌಲಭ್ಯ ಬೇಡವೇ? ನಮ್ಮ ಕುಟುಂಬಕ್ಕೆ ಮೂಲಭೂತ ಸೌಲಭ್ಯ ನೀಡದಿದ್ದರೆ ನಮ್ಮ ಓಟು ನಿಮಗೆ ನೀಡೆವು, ಪ್ರತಿ ಗುಡಿಸಲುಗಳ ಬಾಗಿಲು ಮುಂದೆ ನಾಮಫಲಕ ಅಳವಡಿಕೆ, ಈ ದೃಶ್ಯ ಕಂಡು ಬಂದಿದ್ದು ಐ.ಕೆ.ಕಾಲೋನಿಯಲ್ಲಿ..
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಐ.ಕೆ.ಕಾಲೋನಿಯಲ್ಲಿ ಕಳೆದ 25 ವರ್ಷದಿಂದ ವಾಸವಿರುವ 20ಕ್ಕೂ ಅಧಿಕ ಅಲೆಮಾರಿ ಕೂಲಿ ಕಾರ್ಮಿಕ ಕುಟುಂಬಗಳಿಗೆ ಮೂಲಭೂತ ಸೌಲಭ್ಯವೇ ಮರೀಚಿಕೆಯಾಗಿ ಹಗಲಿನಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ಸಮಸ್ಯೆ, ರಾತ್ರಿ ವೇಳೆ ಬೆಳಕಿಲ್ಲದೆ ಕಾಡು ಪ್ರಾಣಿಗಳಿಂದ ಭಯದ ವಾತಾವರಣ ಸೃಷ್ಟಿಯಾಗಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಐ.ಕೆ.ಕಾಲೋನಿಯಲ್ಲಿ ಕಳೆದ 25 ವರ್ಷದಿಂದ ವಾಸವಿರುವ ಅಲೆಮಾರಿ ಕೂಲಿ ಕಾರ್ಮಿಕ ಕುಟುಂಬಗಳಿಗೆ ಮೂಲಭೂತ ಸೌಲಭ್ಯವೇ ಮರೀಚಿಕೆಯಾಗಿ ಹಗಲಿನಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ಸಮಸ್ಯೆ, ರಾತ್ರಿ ವೇಳೆ ಬೆಳಕಿಲ್ಲದೆ ಕಾಡುಪ್ರಾಣಿಗಳಿಂದ ಭಯದ ವಾತಾವರಣ ಸೃಷ್ಟಿಯಾಗಿದೆ.
ಐ.ಕೆ.ಕಾಲೋನಿಯ ಪಿಡ್ಲ್ಯೂಡಿ ಕಚೇರಿ ಆವರಣದಲ್ಲೇ 25 ವರ್ಷದಿಂದ ಅಲೆಮಾರಿ ಕಾರ್ಮಿಕರು ವಾಸವಿದ್ರು, ಆದರೆ ಕಳೆದ 4 ತಿಂಗಳ ಹಿಂದೇ ಪಿಡ್ಲ್ಯೂಡಿ ಅಧಿಕಾರಿ ವರ್ಗ ಮತ್ತು ಸ್ಥಳೀಯ ಗ್ರಾಪಂ ಸದಸ್ಯರ ತಂಡ 20 ಕುಟುಂಬವನ್ನು ಮನವೊಲಿಸಿ ಬೆಟ್ಟದಲ್ಲಿ ನಿವೇಶನ ಮಂಜೂರಾಗಿದೆ ಎಂದು ನಂಬಿಸಿದ್ರು, ಅಲ್ಲೇ ಸೌಲಭ್ಯ ಬರುತ್ತೆ ಅಂತ ಹೇಳಿ ರಾತ್ರೋರಾತ್ರಿ ಜಾಗ ಖಾಲಿ ಮಾಡಿಸಿದ್ರು, ಈಗ ಇಲ್ಲಿಂದ ಮತ್ತೆ ಜಾಗ ಖಾಲಿ ಮಾಡಿ ಅಂತಾರೆ ಎಂಬುದು ಅಲೆಮಾರಿ ಕಾರ್ಮಿಕರ ನೋವಿನ ಮಾತಾಗಿದೆ.
ಕರ್ನಾಟಕ ಅಲೆಮಾರಿ ಕಾರ್ಮಿಕ ಆಯೋಗ ಮತ್ತು ತುಮಕೂರು ಜಿಲ್ಲಾ ನ್ಯಾಯಾಧೀಶರು ಬಂದು 3 ವರ್ಷ ಕಳೆದ್ರು ಕಾರ್ಮಿಕರ ಕತ್ತಲೆಯ ಬದುಕಿಗೆ ಇನ್ನೂ ಬೆಳಕು ಬಂದಿಲ್ಲ, ಅಕ್ಷರ ಜ್ಞಾನವಿಲ್ಲದ ಗುಡಿಸಲು ಕುಟುಂಬದಲ್ಲಿ 15ಕ್ಕೂ ಅಧಿಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಮುನ್ನಾ ಕೊರಟಗೆರೆ ತಹಶೀಲ್ದಾರ್, ತಾಪಂ ಇಓ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ತಕ್ಷಣ ಭೇಟಿ ನೀಡಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ನೀಡಬೇಕಾಗಿದೆ.
ಗ್ರಾಪಂ ಮತ್ತು ತಾಪಂ ಅಧಿಕಾರಿಗಳ ನಿರ್ಲಕ್ಷ..
ಅಲೆಮಾರಿ ಕಾರ್ಮಿಕರ ಬಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಗುರುತಿನ ಚೀಟಿ, ಪಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಎಲ್ಲವೂ ಇದೆ, ಆದರೆ ಇವರಿಗೆ ನಿವೇಶನ ನೀಡುವಲ್ಲಿ ಕಂದಾಯ ಇಲಾಖೆ ವಿಫಲವಾದ್ರೆ ಮೂಲಸೌಲಭ್ಯ ಕಲ್ಪಿಸುವಲ್ಲಿ ಸ್ಥಳೀಯ ಗ್ರಾಪಂ ನಿರ್ಲಕ್ಷ ವಹಿಸಿದೆ, ಗ್ರಾಪಂ ಪಿಡಿಓ ಮತ್ತು ತಾಪಂ ಇಓಗೆ ಇವರ ಸಮಸ್ಯೆಯ ಅರಿವಿದ್ರು ಮುಗ್ದ ಜನರಿಗೆ ಉಡಾಫೆ ಉತ್ತರ ನೀಡೋದು ಸರ್ವೇ ಸಾಮಾನ್ಯವಾಗಿದೆ.
25 ವರ್ಷದಿಂದ ಸೌಲಭ್ಯವೇ ಮರೀಚಿಕೆ
ಐ.ಕೆ.ಕಾಲೋನಿಯ 20 ಕುಟುಂಬದ 75ಕ್ಕೂ ಅಧಿಕ ಅಲೆಮಾರಿ ಕಾರ್ಮಿಕರು ತಮ್ಮ ವಿಳಾಸದ ಗುರುತಿನ ಚೀಟಿ ಪಡೆದು 20 ವರ್ಷಗಳೇ ಕಳೆದಿವೆ, ಗ್ರಾಪಂ, ತಾಪಂ, ಜಿಪಂ, ಎಂಎಲ್ ಎ , ಎಂಪಿ ಚುನಾವಣೆ ವೇಳೆ ಮಾತ್ರ ರಾಜಕೀಯ ನಾಯಕರು ಬರ್ತಾರೆ, ಸರಕಾರಿ ಅಧಿಕಾರಿ ವರ್ಗವು ಕಾಟಚಾರಕ್ಕೆ ಭೇಟಿ ಕೋಡ್ತಾರೆ, ರಾಜಕೀಯ ನಾಯಕರಂತೆ ಭರವಸೆ ನೀಡ್ತಾರೆ, ಕಾರ್ಮಿಕರಿಗೆ ಮೂಲಸೌಲಭ್ಯ ಕಲ್ಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡದಿರೋದೇ ವಿಷಾದನೀಯ.
ವಿದ್ಯುತ್ ಇಲ್ಲದೆ ನಮ್ಮ ವ್ಯಾಸಂಗಕ್ಕೆ ಸಮಸ್ಯೆ ಆಗಿದೆ, ಶೌಚಾಲಯ ಮತ್ತು ಸ್ನಾನ ಇರ್ಲಿ ಕುಡಿಯಲು ನೀರಿಲ್ಲ, ಕಾಲುವೆಯ ನೀರಿನಲ್ಲಿ 15 ದಿನಕ್ಕೊಮ್ಮೆ ಸ್ನಾನ ಮಾಡಬೇಕಿದೆ, ಚುನಾವಣೆ ಬಂದಾಗ ಅಧಿಕಾರಿಗಳು ಬರ್ತಾರೆ, ಸಾಂತ್ವನ ಹೇಳಿ ಹೋಗ್ತಾರೆ, ರಾತ್ರಿ ವೇಳೆ ಕಾಡು ಪ್ರಾಣಿಗಳ ಭಯದ ನಡುವೆಯೇ ನಮ್ಮ ಜೀವನ ಸಾಗಿಸಬೇಕಿದೆ, ನಾವೇನು ತಪ್ಪು ಮಾಡಿದ್ದೇವೆ ಎಂಬುದೇ ಯಕ್ಷಪ್ರಶ್ನೆ.
ಹರ್ಷಿತಾ, ವಿದ್ಯಾರ್ಥಿನಿ, ಐ.ಕೆ.ಕಾಲೋನಿ.
ನಾವು ಮತದಾನ ಮಾಡೋದಕ್ಕೆ ಮಾತ್ರ ಸಿಮೀತ, ನಮ್ಮ ಕುಟುಂಬಗಳಿಗೆ 25 ವರ್ಷದಿಂದ ಸೌಲಭ್ಯವೇ ಮರೀಚಿಕೆ, ನಮಗೆ ಸೌಲಭ್ಯ ನೀಡದಿದ್ದರೆ ಮತದಾನ ಮಾಡೋದಿಲ್ಲ, 20ಗುಡಿಸಲು ಮುಂದೆಯೇ ಚುನಾವಣೆ ಬಹಿಷ್ಕಾರದ ನಾಮಫಲಕ ಹಾಕಲಾಗಿದೆ, ನಮ್ಮ ಗುಡಿಸಲುಗಳಿಗೆ ಬೆಳಕು, ನೀರು, ನಿವೇಶನ ಮತ್ತು ಶೌಚಾಲಯ ನೀಡದ ಹೊರತು ನಮ್ಮ ಬಳಿಗೆ ದಯವಿಟ್ಟು ಯಾರು ಬರಬೇಡಿ.
ಮಾರಪ್ಪ, ಸ್ಥಳೀಯ, ಐ.ಕೆ.ಕಾಲೋನಿ.
Comments are closed.