ಸಾಮಾಜಿಕ ನ್ಯಾಯಕ್ಕಾಗಿ ಕಾಂಗ್ರೆಸ್ ಪಕ್ಷ ಬೆಂಬಲಿಸಿ

23

Get real time updates directly on you device, subscribe now.


ತುಮಕೂರು: ಶೋಷಿತ ವರ್ಗಗಳಲ್ಲಿ ಬಹಳಷ್ಟು ಹಿಂದುಳಿದ ಜಾತಿಗಳಲ್ಲಿ ತಿಗಳ ಸಮುದಾಯ ಒಂದಾಗಿದ್ದು, ಹಿಂದುಳಿದ ವರ್ಗಗಳಲ್ಲಿ ಒಂದಾಗಿರುವ ಈ ಸಮುದಾಯವರು ಬೇರೆಯ ಸುಖಕ್ಕಾಗಿ ದುಡಿಯುವ ವರ್ಗವಾಗಿದ್ದು ಸ್ವಾಭಿಮಾನ ನಿಷ್ಠೆ ಪ್ರಾಮಾಣಿಕತೆಯಿಂದ ಸಮಾಜದಲ್ಲಿ ಗೌರವಿತವಾಗಿ ಬದುಕುತ್ತಿದ್ದು, ಇಂತಹ ಸಮಾಜವನ್ನು ಅಂದಿನಿಂದ ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಾ ಬಂದಿದೆ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಕಾಂಗ್ರೆಸ್ ಪಕ್ಷದ ಘೋಷವಾಕ್ಯವನ್ನ ತಿಗಳ ಸಮುದಾಯ ಮೆಚ್ಚಿದ್ದು, ಸಾಮಾಜಿಕ ನ್ಯಾಯಕ್ಕಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ಆರ್.ರಮೇಶ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಈ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾಭಿಮಾನ ಪ್ರಾಮಾಣಿಕತೆಯಿಂದ ಬದುಕುವ ತಿಗಳ ಸಮುದಾಯದವರು ಬೇರೆಯವರ ಹಿತಕ್ಕಾಗಿ ಯಶಸ್ವಿಯಾಗಿದ್ದು ತುಮಕೂರಿನ ತ್ರಿವಿಧ ದಾಸೋಹ ಕೇಂದ್ರ ಸಿದ್ದಗಂಗಾ ಮಠಕ್ಕೂ ಭೂದಾನ ಮಾಡಿರುವ ಉದಾಹರಣೆಗಳು ಇವೆ, ಜನಾಂಗವು ಯಾವುದೇ ಅಪೇಕ್ಷೆ ಪಡದೇ ದುಡಿಯುವ ವರ್ಗವಾಗಿದ್ದು ಜಿಲ್ಲೆಯಲ್ಲಿ ಸುಮಾರು 50 ರಿಂದ 1 ಲಕ್ಷಕ್ಕೂ ಹೆಚ್ಚು ಸಂಖ್ಯೆ ಹೊಂದಿದ್ದು ಯಾವುದೇ ಪ್ರಾತಿನಿಧ್ಯ ಪಡೆದಿರಲಿಲ್ಲ, ಹೀಗಾಗಿ ಕಾಂಗ್ರೆಸ್ ಸರ್ಕಾರ ಇಂಥ ಸಮುದಾಯವನ್ನು ಗುರುತಿಸಿ ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ಇತರೆ ಅವಕಾಶ ಕಲ್ಪಿಸಿದ್ದು ಮುಖ್ಯಮಂತ್ರಿಗಳು, ವಿಧಾನಪರಿಷತ್ ಸದಸ್ಯರಾದ ನನ್ನ ಅನುದಾನ ಸೇರಿದಂತೆ ಸುಮಾರು ನಾಲ್ಕು ಕೋಟಿ ರೂ. ಹೆಚ್ಚು ತುಮಕೂರು ಜಿಲ್ಲೆಯ ಅಭಿವೃದ್ಧಿಗಾಗಿ ನೀಡಿದ್ದಾರೆ ಎಂದು ತಿಳಿಸಿದರು.

ತುಮಕೂರಿನ ತಿಗಳ ಸಮುದಾಯದ ಮುಖಂಡ ರೇವಣಸಿದ್ದಯ್ಯ ಮಾತನಾಡಿ, ಅನೇಕ ಅವಕಾಶಗಳನ್ನು ಕಾಂಗ್ರೆಸ್ ಪಕ್ಷ ತಿಗಳ ಜನಾಂಗಕ್ಕೆ ನೀಡಿದ್ದು ರಾಜಕೀಯದಲ್ಲಿ ಯಾವ ಪಕ್ಷ ಮನ್ನಣೆ ನೀಡಲಿಲ್ಲ, ಸಣ್ಣ ಪ್ರಮಾಣದ ಜನಾಂಗ ಹತ್ತು ಜಿಲ್ಲೆಗಳಲ್ಲಿ ರಾಜಕೀಯ ಅಧಿಕಾರ ಹಿಡಿದಿದ್ದು ಈ ಹಿಂದೆ ಯಾವುದೇ ಪ್ರತಿನಿಧ್ಯ ಪಡೆಯುವಲ್ಲಿ ಹಿಂದುಳಿದಿತ್ತು, ಇದೀಗ ಕಾಂಗ್ರೆಸ್ ಪಕ್ಷ ಇಂತಹ ಅವಕಾಶ ನೀಡಿದೆ, ಕಳೆದ ಎರಡು ವರ್ಷಗಳ ಹಿಂದೆ ಬೊಮ್ಮಯಿ ಯವರು ಅವರ ಸರ್ಕಾರದ ಮುಂದೆ ಇಟ್ಟ ಕೆಲ ಪ್ರಸ್ತಾವನೆಗಳನ್ನು ಕಸದ ಬುಟ್ಟಿಗೆ ಹಾಕಿ ನಮ್ಮ ಸಮುದಾಯವನ್ನು ಕೀಳಾಗಿ ನಡೆಸಿಕೊಂಡಿದ್ದು ಬೆಂಗಳೂರಿನಲ್ಲಿ ತಿಗಳರ ನಡೆ ಕಾಂಗ್ರೆಸ್ ಸಮಾವೇಶ ನಡೆದಾಗ ನೆಪ ಮಾತ್ರಕ್ಕೆ ನಿಗಮ ಮಂಡಳಿ ಘೋಷಣೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಕೀಡಿ ಕಾರಿದರು.

ಸಂದರ್ಭದಲ್ಲಿ ಅಗ್ನಿವಂಶ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ನರಸಿಂಹ ಮೂರ್ತಿ, ಕಾರ್ಯದರ್ಶಿ ಕೆಂಪಯ್ಯ, ಗೌರವಾಧ್ಯಕ್ಷ ಸಿದ್ದಯ್ಯ, ಜಂಟಿ ಕಾರ್ಯದರ್ಶಿ ಕೃಷ್ಣಯ್ಯ, ತುಮಕೂರು ಜಿಲ್ಲಾ ತಿಗಳರ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಹನುಮದಾಸ್, ಕಾರ್ಯದರ್ಶಿ ಬಿ.ಎಂ.ಗಂಗರಾಜು, ಖಜಾಂಚಿ ಟಿ.ವಿ.ರಾಮಯ್ಯ, ನಿರ್ದೇಶಕ ಚೆಲುವರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!