ಕುಣಿಗಲ್: ರಾಜ್ಯ ಒಕ್ಕಲಿಗರ ಸಂಘವು ಕೇವಲ ಬೆಂಗಳೂರಿಗೆ ಸೀಮಿತವಾಗದೆ ರಾಜ್ಯದ ವಿವಿಧೆಡೆ ಇರುವ ಗ್ರಾಮಾಂತರ ಪ್ರದೇಶದ ಮತದಾರ ಒಕ್ಕಲಿಗರ ನೆರವಿಗೆ ನಿಲ್ಲುವಂತಾಗಬೇಕು, ಕೇವಲ ವ್ಯವಹಾರ ಮಾಡುವ ತಾಣವಾಗಬಾರದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಒಕ್ಕಲಿಗ ಮುಖಂಡ ರಂಗಣ್ಣಗೌಡ ಆಗ್ರಹಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಕೆಲವಾರು ವರ್ಷಗಳಿಂದಲೂ ರಾಜ್ಯಒಕ್ಕಲಿಗ ಸಂಘ ಅಸ್ತಿತ್ವದಲ್ಲಿದೆ. ಇದರ ಅಡಿಯಲ್ಲಿ ಸಾಕಷ್ಟು ವಿದ್ಯಾಸಂಸ್ಥೆಗಳು, ಮೆಡಿಕಲ್ ಕಾಲೇಜು ಇವೆ, ರಾಜ್ಯದ ವಿವಿಧೆಡೆಯ ಗ್ರಾಮಾಂತರ ಪ್ರದೇಶದಿಂದ ಜಿಲ್ಲೆಯ ಮೂಲಕ ಆಯ್ಕೆಯಾಗುವ ನಿರ್ದೇಶಕರು ಸಂಘವನ್ನು ಕೇವಲ ವ್ಯವಹಾರಿಕ ತಾಣವನ್ನಾಗಿಸಿದ್ದಾರೆ ಹೊರತು ಗ್ರಾಮಾಂತರ ಪ್ರದೇಶದ ಒಕ್ಕಲಿಗ ಸಮುದಾಯದ ನೆರವಿಗೆ ನಿಂತಿಲ್ಲ. ರಾಜ್ಯ ಸಂಘವು ಸಾವಿರಾರು ಕೋಟಿ ರೂ. ಮೌಲ್ಯದ ಆಸ್ತಿ ಇದ್ದರೂ ಜನಾಂಗದ ಕಡುಬಡವರ ನೆರವಿಗೆ ಪ್ರಯೋಜನವಾಗುತ್ತಿಲ್ಲ, ಇದೀಗ ಚುನಾವಣೆ ಘೋಷಣೆಯಾಗಿದೆ, ಕೆಲವಾರು ಮಂದಿ ಕೋಟಿಗಟ್ಟಲೆ ಖರ್ಚು ಮಾಡಿ ಸಂಘದ ನಿರ್ದೇಶಕ ಸ್ಥಾನಕ್ಕೆ ನಿಲ್ಲಲು ಮುಂದಾಗಿದ್ದಾರೆ. ಇವರನ್ನು ಚುನಾಯಿಸುವ ಮತದಾರರ ಒಕ್ಕಲಿಗರ ಸಹಾಯಕ್ಕೆ ನಿಲ್ಲುವವರಿಗೆ ಮಾತ್ರ ಮತ ಹಾಕಬೇಕು. ಚುನಾಯಿತರಾದವರು ಸಹ ಒಕ್ಕಲಿಗರ ನೆರವಿಗೆ ನಿಲ್ಲಬೇಕು, ಇಂತಹ ವ್ಯವಸ್ಥೆ ಜಾರಿಯಾಗುವ ನಿಟ್ಟಿನಲ್ಲಿ ಮತದಾರರು ಮುಂದಾಗಬೇಕು ಎಂದರು.
ಮುಖಂಡ ಸ್ವಾಮಿ ಮಾತನಾಡಿ, ಜಿಲ್ಲೆಯಿಂದ ಆಯ್ಕೆಯಾಗಿ ಹೋದ ವ್ಯಕ್ತಿ ಐದು ವರ್ಷವಾದರೂ ಈಕಡೆ ಪತ್ತೆ ಇಲ್ಲ, ಇಂದು ಮತದಾರರು ಜಾಗೃತರಾಗುವ ಜೊತೆಯಲ್ಲಿ ಅಭ್ಯರ್ಥಿಗಳು ಮತದಾರರಿಗೆ ಜನಾಂಗದವರು ಆಸ್ಪತ್ರೆಗೆ ದಾಖಲಾದರೆ ಚಿಕಿತ್ಸೆಯಲ್ಲಿ ರಿಯಾಯಿತಿ, ಜನಾಂಗದ ಮಕ್ಕಳಿಗೆ ಉಚಿತ ಶಿಕ್ಷಣ, ಗ್ರಾಮಾಂತರ ಪ್ರದೇಶದಲ್ಲಿ ಉತ್ತಮ ಸಾಧನೆ ತೋರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಸಹಕಾರ ನೀಡುವುದು ಸೇರಿದಂತೆ ಸೂಕ್ತ ಭರವಸೆ ನೀಡಬೇಕು, ಮತದಾರರು ಸಹ ಯಾವುದೇ ಆಸೆ ಆಮೀಶಕ್ಕೆ ಬಲಿಯಾಗಿ ಅನರ್ಹರನ್ನು ಆಯ್ಕೆ ಮಾಡಿ ನಾಳೆ ಸಂಘ ಇದ್ದರೂ ಜನಾಂಗದ ನೆರವಿಗೆ ಬಾರದೆ ಇರುವಂತಹ ಸ್ಥಿತಿ ಆಗಬಾರದು, ಈ ನಿಟ್ಟಿನಲ್ಲಿ ಮತದಾರರು ಚಿಂತನೆ ನಡೆಸಬೇಕು ಎಂದರು.
ಅಮೃತೂರು ಮುಖಂಡ ಹರೀಶ್, ಬೋರೇಗೌಡ,ನಾಗೇಶ್, ತಾಪಂ ಸದಸ್ಯ ರಾಜು ಇತರರು ಇದ್ದರು.
ರಾಜ್ಯ ಒಕ್ಕಲಿಗರ ಸಂಘ ಎಲ್ಲರ ಪರವಿರಬೇಕು: ರಂಗಣ್ಣಗೌಡ
Get real time updates directly on you device, subscribe now.
Prev Post
Next Post
Comments are closed.