ಇಂಡಿಯಾ ಒಕ್ಕೂಟದಲ್ಲಿ ಪಿಎಂ ಅಭ್ಯರ್ಥಿಯೇ ಇಲ್ಲ

ಮಮತಾ ಬ್ಯಾನರ್ಜಿ ಕಾಂಗ್ರೆಸ್ ಗೆ ಮತ ಹಾಕಬೇಡಿ ಎನ್ನುತ್ತಿದ್ದಾರೆ: ಹೆಚ್ ಡಿ ಡಿ

17

Get real time updates directly on you device, subscribe now.


ಕುಣಿಗಲ್: ಎನ್ ಡಿಎ ಒಕ್ಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾಗಿದ್ದು, ಇಂಡಿಯಾ ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿಯೆ ಇಲ್ಲ, ಅಲ್ಲದೆ ಇಂಡಿಯಾ ಒಕ್ಕೂಟದ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಗೆ ಮತ ಹಾಕಬೇಡಿ ಎನ್ನುತ್ತಿದ್ದಾರೆ, ಇದು ಇಂಡಿಯಾ ಒಕ್ಕೂಟದ ದುಸ್ಥಿತಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು.

ತಾಲೂಕಿನ ಜೋಡಿಹೊಸಹಳ್ಳಿ ಗ್ರಾಮದಲ್ಲಿ ಎನ್ ಡಿ ಎ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ ಪರ ಮತಯಾಚನೆ ಮಾಡಿ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಮೂರು ರಾಜ್ಯದಲ್ಲಿದ್ದರೆ ಬಿಜೆಪಿ 18 ರಾಜ್ಯದಲ್ಲಿದೆ, ಇಂತಹ ಸ್ಥಿತಿಯಲ್ಲಿ ಇಂಡಿಯಾ ಒಕ್ಕೂಟ ಎನ್ ಡಿಎ ವಿರುದ್ಧ ಮಾತನಾಡುತ್ತಾರೆ, ದೇಶವನ್ನು ಕಾಂಗ್ರೆಸ್ ನವರು ಐವತ್ತು ವರ್ಷ ಆಡಳಿತ ನಡೆಸಿದ್ದು ಕೊನೆ ಬಾರಿ ಕಾಂಗ್ರೆಸ್ ಪ್ರಧಾನಿ ಯಾಗಿದ್ದ ಮನಮೋಹನ್ ಸಿಂಗ್ ನೋಟು ಗಿಡದಲ್ಲಿ ಬೆಳೆಯಲ್ಲ, ಹೀಗಾಗಿ ಉಚಿತ ಯೋಜನೆಗಳು ದೇಶಕ್ಕೆ ಮಾರಕ ಎಂದಿದ್ದರು, ಅಲ್ಲದೆ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟ ಸ್ಥಿತಿಯಲ್ಲಿ 2014ರಲ್ಲಿ ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು ಕೇವಲ ಹತ್ತು ವರ್ಷದಲ್ಲಿ ದೇಶದ ಆರ್ಥಿಕ ವ್ಯವಸ್ಥೆಯನ್ನು ಜಗತ್ತಿನ ಐದನೆ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಶ್ರಮಿಸಿದ್ದಾರೆ, ಇದು ದೇಶದ ಮತದಾರರು ಅರ್ಥ ಮಾಡಿಕೊಳ್ಳಬೇಕು ಎಂದರು.

ರಾಜ್ಯ ಸರ್ಕಾರಿ ಗ್ಯಾರಂಟಿ ಜಾರಿಗಾಗಿ ಹರಿಜನ ಗಿರಿ ಜನರ ಮನೆ ಕಟ್ಟುವ ಹನ್ನೊಂದು ಸಾವಿರ ಕೋಟಿ ಕಬಳಿಸಿ ಆ ವರ್ಗದ ಜನರಿಗೆ ಅನ್ಯಾಯ ಮಾಡಿದ್ದಲ್ಲದೆ, ಹಿಂದೆ ನಾನು ಅಧಿಕಾರದಲ್ಲಿದ್ದಾಗ ನೀಡಿದ್ದ ಶೇ.4 ರ ಮೀಸಲಾತಿಯನ್ನು ಪುನಹ ನೀಡುವುದಾಗಿ ವಿಧಾನಸಭೆ ಚುನಾವಣೆಯಲ್ಲಿ ಹೇಳಿ ಮುಸ್ಲಿಂಜನರ ಮತ ಪಡೆದು ಅಧಿಕಾರಕ್ಕೆ ಬಂದು ಇದೀಗ ಆ ಬಗ್ಗೆ ಚಕಾರ ಎತ್ತುತ್ತಿಲ್ಲ, ಈ ಬಗ್ಗೆ ಮುಸ್ಲಿಂರು ಎಚ್ಚರದಿಂದ ಇರಬೇಕು, ಸಿಎಂ, ಡಿಸಿಎಂ ರಾಜ್ಯದ ಜನರ ತೆರಿಗೆ ಹಣವನ್ನು ಬಾಚಿಕೊಂಡು ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್ ಗಡ ಚುನಾವಣೆಗೆ ಬಳಸಿದ್ದಾರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಮಹಾನುಭಾವ ನೇರವಾಗಿ ಡಾ.ಮಂಜುನಾಥ ಅವರನ್ನು ಎದುರಿಸಲಾಗದೆ ಮೂವರು ಮಂಜುನಾಥರನ್ನು ಕಣಕ್ಕಿಳಿಸಿದ್ದಾರೆ, ಡಾ.ಮಂಜುನಾಥರವರು ಜಯದೇವ ಸಂಸ್ಥೆಯಲ್ಲಿ ಮಾಡಿದ ಕಾರ್ಯ ವೈಖರಿ ಮೆಚ್ಚಿ ಪ್ರಧಾನಿ ಮೋದಿಯವರೆ ಲೋಕಸಭೆ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು, ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಒಂದನೆ ನಂಬರ್ ಗೆ ಮತ ಹಾಕುವ ಮೂಲಕ ಕ್ಷೇತ್ರದ ಮತದಾರರು ಆಶೀರ್ವಾದ ಮಾಡಿದಲ್ಲಿ ಕೇಂದ್ರ ಆರೋಗ್ಯ ಸಚಿವರಾಗುವ ಎಲ್ಲಾ ಅವಕಾಶ ಇದೆ, ಹುತ್ರಿದುರ್ಗ ಬೆಟ್ಟವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸುವ ನಿಟ್ಟಿನಲ್ಲಿ ಪ್ರಧಾನಿಯವರೊಂದಿಗೆ ಚರ್ಚಿಸಿ ಘೋಷಣೆ ಮಾಡುವ ಭರವಸೆ ನೀಡಿದರು.

ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಮಾತನಾಡಿ ಸೋಲಿನ ಹತಾಷೆಯಲ್ಲಿರುವ ಕಾಂಗ್ರೆಸ್ ನವರು ತಮ್ಮ ಬಗ್ಗೆ ಎಂ ಎಲ್ ಸಿ ಮಾಡುವುದಾಗಿ ಹಾಗೂ ಡಿ.ನಾಗರಾಜಯ್ಯ ಅವರನ್ನು ಗಮನಿಸಿರುವುದಾಗಿ ಇಲ್ಲಸಲ್ಲದ ವದಂತಿ ಹಬ್ಬಿಸುತ್ತಿದ್ದು ಜನರು ಈ ಬಗ್ಗೆ ಕಿವಿಗೊಡಬಾರದು, ತಾವಾಗಲಿ ತಮ್ಮ ಕುಟುಂಬದವರಾಗಲಿ ಯಾರೂ ಕಾಂಗ್ರೆಸ್ ಗೆ ಹೋಗುವುದಿಲ್ಲ ಎಂದರು.

ಜಿಪಂ ಮಾಜಿ ಅಧ್ಯಕ್ಷ ಡಾ.ರವಿ, ಮುಖಂಡರಾದ ಮಹಾರಾಷ್ಟ್ರ ಶಿವಣ್ಣ, ಕೆಂಪೇಗೌಡ, ಹರೀಶ್, ಶಿವಣ್ಣ, ಮಂಜುನಾಥ್, ವೈ.ಎಚ್.ಹುಚ್ಚಯ್ಯ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!