ಹುಳಿಯಾರು: ಹುಳಿಯಾರು ಸಮೀಪದ ಚಿಕ್ಕಬಿದರೆ ಗ್ರಾಮದ ಏಳುಹಳ್ಳಿ ಕರಿಯಮ್ಮದೇವಿಯ ವೈಭವಯುತ ರಥೋತ್ಸವ ಸೋಮವಾರ ಶ್ರೀ ರಂಗನಾಥ ಸ್ವಾಮಿಯ ಸಮ್ಮುಖದಲ್ಲಿ ಸಕಲ ವಾದ್ಯ ಮೇಳ ಹಾಗೂ ಭಕ್ತರ ಹರ್ಷೋದ್ಘಾರದಲ್ಲಿ ವಿಜೃಂಭಣೆಯಿಂದ ಜರುಗಿತು.
ರಥೋತ್ಸವದ ಅಂಗವಾಗಿ ಮುಂಜಾನೆಯೇ ರಥಕ್ಕೆ ಪುಣ್ಯಾಹ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಗಿತ್ತು, ಚಿಕ್ಕಬಿದರೆ ಕರಿಯಮ್ಮ ಸೇರಿದಂತೆ ದೊಡ್ಡಬಿದರೆ ಕರಿಯಮ್ಮ, ಪೋಚಕಟ್ಟೆ ಕರಿಯಮ್ಮ, ಕೋಡಿಹಳ್ಳಿ ಕೋಲ್ಲಾಪುರದಮ್ಮ ದೇವರನ್ನು ಊರಿನಿಂದ ಗುಡಿಯ ವರೆವಿಗೂ ಭವ್ಯವಾದ ಉತ್ಸವದಲ್ಲಿ ಕರೆ ತರಲಾಯಿತು, ನಂತರ ದೇವರುಗಳನ್ನು ರಥದಲ್ಲಿ ಕುಳ್ಳಿರಿಸಿದ ಭಕ್ತರು ಜೈಕಾರ ಹಾಕುತ್ತಾ ರಥವನ್ನೆಳೆದು ಭಕ್ತಿಭಾವ ಮೆರೆದರು.
ಮಹಾ ಮಂಗಳಾರತಿ, ಅನ್ನ ಸಂತರ್ಪಣೆ ನಡೆದ ನಂತರ ಕಂಕಣ ವಿಸರ್ಜನೆ, ಓಕಳಿಸೇವೆ ನಡೆಯಿತು, ಇದೇ ದಿನ ಸಂಜೆ ಗಂಡು ಗತ್ತರಿ ಸೇವೆ, ಧ್ವಜ ಅವರೋಹಣ ನಡೆಸಲಾಯಿತು, ಅಕ್ಕಪಕ್ಕದ ಹಳ್ಳಿಗಳಿಂದ ಆಗಮಿಸಿದ್ದ ಭಕ್ತಾದಿಗಳು ಅಮ್ಮನವರಿಗೆ ಹಣ್ಣುಕಾಯಿ ಮಾಡಿಸಿ, ದರ್ಶನ ಪಡೆದು ಕೃತಾರ್ಥರಾದರು.
ಏಳುಹಳ್ಳಿ ಕರಿಯಮ್ಮನ ಅದ್ದೂರಿ ರಥೋತ್ಸವ
Get real time updates directly on you device, subscribe now.
Prev Post
Comments are closed.