ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

27

Get real time updates directly on you device, subscribe now.


ತುಮಕೂರು: ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಸ್ಲಂ ಮಹಿಳಾ ಘಟಕದಿಂದ ಬೆಳಗುಂಬ ರಸ್ತೆಯ ಸ್ಲಂ ಭವನದಲ್ಲಿ ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್ ಐಟಿ ರಚಿಸಿದ್ದು ಕೂಡಲೇ ಬಂಧಿಸಿ ದೌರ್ಜನ್ಯಕ್ಕೆ ಒಳಗಾದ ಹಾಗೂ ಸಾವಿರಾರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಹಿನ್ನಲೆಯಲ್ಲಿ ಮಹಿಳಾ ಆಯೋಗದ ಶಿಫಾರಸಿನ ಮೇಲೆ ರಾಜ್ಯ ಸರ್ಕಾರ ಕ್ರಮ ವಹಿಸಿರುವುದನ್ನು ಸಂಘಟನೆ ಸ್ವಾಗತಿಸುತ್ತದೆ, ಆದರೆ ಆರೋಪಿಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಮುಖ ರಾಜಕಾರಣಿಗಳ ಬೆಂಬಲ ಇರುವುದರಿಂದ ಈಗಾಗಲೇ ವಿದೇಶಕ್ಕೆ ಪಲಾಯನಗೊಂಡಿದ್ದು ತಕ್ಷಣವೇ ಬಂಧಿಸಿ ನೊಂದ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಸ್ಲಂ ಮಹಿಳಾ ಸಮಿತಿ ಆಗ್ರಹಿಸಿದೆ.

ಪ್ರತಿಭಟನೆ ನೇತೃತ್ವ ವಹಿಸಿದ್ದ ಮಹಿಳಾ ಘಟಕದ ಸಂಚಾಲಕಿ ಅನುಪಮ ಮಾತನಾಡಿ ಪ್ರಜ್ವಲ್ ಕರ್ಮಕಾಂಡ ಮೊದಲೇ ಗೊತ್ತಿದ್ದರು ಹಾಸನದಿಂದ ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡಿದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೆಣ್ಣು ಮಕ್ಕಳಿಗೆ ದ್ರೋಹ ಬಗೆದಿವೆ, ತಾಳಿ ಬಗ್ಗೆ ಮಾತನಾಡುವ ಪ್ರಧಾನಿಗಳು ಈ ಪ್ರಕರಣದ ಬಗ್ಗೆ ಮೌನ ವಹಿಸಿರುವುದು ಏಕೆ? ಮಂಗಳ ಸೂತ್ರ ಬರಿ ಮಾತಿಗಾಗಿ ಅಥವಾ ರಾಜಕಾರಣಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ, ರಾಜಕಾರಣಿಗಳಿಗೆ ಒಂದು ನ್ಯಾಯ, ಬೇರೆಯವರಿಗೆ ಇನ್ನೊಂದು ನ್ಯಾಯನಾ ? ತಕ್ಷಣ ಚುನಾವಣಾ ಆಯೋಗ ಈ ಪ್ರಕರಣದ ಬಗ್ಗೆ ಮಧ್ಯ ಪ್ರವೇಶ ಮಾಡಬೇಕೆಂದರು. ಪ್ರತಿಭಟನೆಯಲ್ಲಿ ಸ್ಲಂ ಸಮಿತಿಯ ಕಾರ್ಯದರ್ಶಿ ಅರುಣ್, ತಿರುಮಲಯ್ಯ, ಪದಾಧಿಕಾರಿಗಳಾದ ಮಂಗಳಮ್ಮ, ಪೂರ್ಣಿಮಾ, ಸಂದ್ಯಾ ಯಾದವ್, ಹನುಮಕ್ಕ, ಶಾರದಮ್ಮ, ಗಂಗಾ, ಸುಧಾ, ಪಾರ್ವತಮ್ಮ, ವಸಂತಮ್ಮ, ದೇವಿಕಾ, ಶಾಂತಮ್ಮ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!