ಕುಣಿಗಲ್: 2019ರ ಪುರಸಭೆ ಚುನಾವಣೆಯಲ್ಲಿ ಶಾಸಕ, ಸಂಸದರು ಚುನವಣಾಧಿಕಾರಿಯಾಗಿದ್ದ ತಹಶೀಲ್ದಾರ್ ದುರ್ಬಳಕೆ ಮಾಡಿಕೊಂಡು ಜೆಡಿಎಸ್ ಅಭ್ಯರ್ಥಿಗೆ ಮಾಡಿದ್ದ ಅನ್ಯಾಯಕ್ಕೆ ಘನ ನ್ಯಾಯಾಲಯ ನ್ಯಾಯ ನೀಡಿದ್ದು ಇದರಿಂದ ಶಾಸಕ, ಸಂಸದರಿಗೆ ಮುಖಭಂಗವಾಗಿದೆ ಎಂದು ತಾಲೂಕು ಜೆಡಿಎಸ್ ಅಧಕ್ಷ ಜಗದೀಶ್ ಹೇಳಿದರು.
ಸೋಮವಾರ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 2019ರ ಪುರಸಭೆ ಚುನಾವಣೆಯಲ್ಲಿ ಏಳನೆ ವಾರ್ಡ್ಗೆ ಜೆಡಿಎಸ್ ಅಭ್ಯರ್ಥಿಯಾಗಿ ಅನ್ಸರ್ ಪಾಶ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸಮೀವುಲ್ಲಾ ನಾಮಪತ್ರ ಸಲ್ಲಿಸಿದ್ದರು, ನಾಮಪತ್ರ ಪರಿಶೀಲನೆ ವೇಳೆ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರದಲ್ಲಿ ಫೋಷಣೆ ಪತ್ರದಲ್ಲಿ ಶಬನಾ ತಬಸ್ಸುಮ್ ಎಂದು ಇದ್ದು, ಅಭ್ಯರ್ಥಿ ತಮ್ಮ ಮೇಲಿದ್ದ ಕ್ರಿಮಿನಲ್ ಪ್ರಕರಣ ಘೋಷಣೆ ಮಾಡಿಕೊಂಡಿಲ್ಲದ ಕಾರಣ ನಾಮಪತ್ರ ಕ್ರಮಬದ್ದವಾಗಿಲ್ಲ ಎಂದು ಅಂದಿನ ಚುನಾವಣಾಧಿಕಾರಿ ತಹಶೀಲ್ದಾರ್ ವಿಶ್ವನಾಥ್ ಮುಂದೆ ಆಕ್ಷೇಪಣೆ ಸಲ್ಲಿಸಿದ್ದರೂ ಚುನಾವಣಾಧಿಕಾರಿ ಶಾಸಕರ, ಸಂಸದರ ಕೈಗೊಂಬೆಯಂತೆ ಕೆಲಸ ಮಾಡಿ ಆಕ್ಷೇಪಣೆ ಆಲಿಸದ ಜೆಡಿಎಸ್ ಅಭ್ಯರ್ಥಿಗೆ ಅನ್ಯಾಯ ಮಾಡಿದ್ದರು, ಜೆಡಿಎಸ್ ಅಭ್ಯರ್ಥಿ ಅನ್ಸರ್ ಪಾಶ ಸತತ ನಾಲ್ಕು ವರ್ಷ ನ್ಯಾಯಾಲಯದಲ್ಲಿ ಹೋರಾಟ ಮಾಡಿದ ಪರಿಣಾಮ ಘನ ನ್ಯಾಯಾಲಯವು ಕಾಂಗ್ರೆಸ್ ಅಭ್ಯರ್ಥಿ ಸಮೀವುಲ್ಲಾ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ, ಅರ್ಜಿದಾರ ಅನ್ಸರ್ ಪಾಶ ಅವರನ್ನೆ ಪುರಸಭೆಯ ಸದಸ್ಯರನ್ನಾಗಿ ಸಿಂಧುಗೊಳಿಸಿ ಆದೇಶಿಸಿದೆ.
ಇದು ತಾಲೂಕಿನಲ್ಲಿ ಕೆಲ ಅಧಿಕಾರಿಗಳು ಶಾಸಕರ, ಸಂಸದರ ಕೈಗೊಂಬೆಯಂತೆ ಕಾನೂನು ಉಲ್ಲಂಸಿ ಕೆಲಸ ಮಾಡುತ್ತಿರುವವರಿಗೆ ಎಚ್ಚರಿಕೆ ಗಂಟೆಯಾಗಿದೆ, ಅಂದು ಚುನಾವಣಾಧಿಕಾರಿಯಾಗಿ ಕೆಲಸ ಮಾಡಿ, ನಮ್ಮ ಪಕ್ಷದ ಕಾರ್ಯಕರ್ತನಿಗೆ ಅನ್ಯಾಯ ಮಾಡಿದ್ದ ತಹಶೀಲ್ದಾರ್ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಹೋರಾಟ ನಡೆಸಲಾಗುವುದು, ಪುರಸಭೆ ಸದಸ್ಯನ ಅಸಿಂಧುಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಅನ್ಸರ್ ಪಾಶ ಕಡೆಯವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಕೊಲೆ ಬೆದರಿಕೆ ಹಾಕಿದ್ದು, ದೂರು ನೀಡಲು ಕುಣಿಗಲ್ ಠಾಣೆಗೆ ಆಗಮಿಸಿದರೆ ಠಾಣಾ ಆವರಣದಲ್ಲೂ ಧಮಕಿ ಹಾಕಿದ್ದಾರೆ, ಘಟನೆ ಸಂಬಂಧ ಕುಣಿಗಲ್ ಪೊಲೀಸರಿಗೆ ದೂರು ನೀಡಿದರೆ ಅಧಿಕಾರಿಗಳು ಏಕಪಕ್ಷಿಯವಾಗಿ ವರ್ತಿಸಿ, ಬೆದರಿಕೆ ಹಾಕಿಸಿಕೊಂಡವನಿಗೆ ಹೆದರಿಸಿ ಕಳಿಸಿದ್ದಾರೆ, ಕುಣಿಗಲ್ ಪೊಲೀಸರು ಕಾಂಗ್ರೆಸ್ ಪಕ್ಷದವರ ಪರ ನಡೆದುಕೊಳ್ಳುತ್ತಿರುವುದು ಖಂಡನೀಯ, ಪೊಲೀಸರು ತಮ್ಮ ನಡಾವಳಿಕೆ ಸರಿಪಡಿಸಿಕೊಳ್ಳದೆ ಇದ್ದಲ್ಲಿ ಎಸ್ಪಿ, ಡಿಐಜಿ, ಗೃಹ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಿ ನ್ಯಾಯ ಕೇಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಭ್ಯರ್ಥಿ ಅನ್ಸರ್ ಪಾಶ ಮಾತನಾಡಿ, ನಾಮಪತ್ರ ಪರಿಶೀಲನೆ ವೇಳೆ ನಾವು ನಿಯಮಬದ್ದ ಆಕ್ಷೇಪಣೆ ಸಲ್ಲಿಸಿದ್ದರೂ ಅಂದು ಚುನಾವಣಾಧಿಕಾರಿ ಯಾಗಿದ್ದವರು ಪರಿಗಣಿಸಲಿಲ್ಲ, ಇಬ್ಬರೆ ನಾಮಪತ್ರ ಸಲ್ಲಿಸಿದ್ದು, ಒಂದು ವೇಳೆ ಅವರು ಪರಿಗಣಿಸಿದ್ದಲ್ಲಿ ತಾವು ಪುರಸಭೆ ಸದಸ್ಯರಾಗಿ ಮೂರುವರೆ ವರ್ಷ ಕಳೆಯುತ್ತಿತ್ತು, ಅಧಿಕಾರಿಯ ನಡೆ ನನ್ನ ಸಾರ್ವಜನಿಕ ಜೀವನದ ಏಳಿಗೆ ಕುಂಠಿತವಾಗುವಂತೆ ಮಾಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ವಕೀಲ ಅಬ್ದುಲ್ ತನ್ವೀರ್ ಅಹಮದ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಎಲ್.ಹರೀಶ್, ಅಯಿಶಾಬಿ, ಮಾಜಿ ಸದಸ್ಯರಾದ ಇ.ಮಂಜು, ಮುಖಂಡರಾದ ರಂಗಸ್ವಾಮಿ, ಪ್ರಕಾಶ್, ರಾಮೇಗೌಡ ಇತರರು ಇದ್ದರು.
Comments are closed.