ಪೋಷಣ್ ಟ್ರ್ಯಾಕ್ ಆಪ್ಗೆ ಕಾರ್ಯಕರ್ತೆಯರ ವಿರೋಧ

127

Get real time updates directly on you device, subscribe now.

ಕೊಡಿಗೇನಹಳ್ಳಿ: ಸರಕಾರದ ಪೋಷಣ್ ಟ್ರಾಕರ್ ಆಪ್ ವ್ಯವಸ್ಥೆ ಅಳವಡಿಸಿ ಫಲಾನುಭವಿಗಳ ದತ್ತಾಂಶ ಆಧರಿಸಿ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗುವ ಆಹಾರ ಧಾನ್ಯ ಹಾಗೂ ನಿಧಿಗಳ ತೈಮಾಸಿಕ ಹಂಚಿಕೆ ಮೊದಲ ಕಂತಿನ ದಂತ್ತಾಂಶ ಇರುವುದು ನಮಗೆ ದಿಗ್ಬ್ರಮೆಗೊಳಿಸಿದೆ ಎಂದು ಕೊಡಿಗೇನಹಳ್ಳಿ ವೃತ್ತದ ಅಂಗನವಾಡಿ ಕಾರ್ಯಕರ್ತೆರು ಆರೋಪಿಸಿ ಉಪ ತಹಶಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಕೊಡಿಗೇನಹಳ್ಳಿ ವೃತ್ತದ ಅಂಗನವಾಡಿ ಕಾರ್ಯಕರ್ತೆರು ನಾಡ ಕಚೇರಿ ಎದುರು ಜಮಾಯಿಸಿ ನಂತರ ಉಪ ತಹಸೀಲ್ದಾರ್ ನವೀನ್ ಅವರ ಮೂಲಕ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ ಅವರಿಗೆ ಮನವಿ ಸಲ್ಲಿಸಿದರು.
ಅಂಗನವಾಡಿ ನೌಕರರ ಗೌರವ ಧನ ಪಾವತಿ ಮತ್ತು ರಾಜ್ಯ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆಯಾದ ಆಹಾರಧಾನ್ಯ ಹಾಗೂ ನಿಧಿ ಹಣದ ಹಂಚಿಕೆಯನ್ನು ಪೋಷಣ್ ಟ್ರಾಕರ್ ಆಪ್ ಜತೆಗೆ ಜೋಡಿಸಿರುವುದು ಅವೈಜ್ಞಾನಿಕ ಪದ್ಧತಿಯಾಗಿದೆ, ಅಂಗನವಾಡಿ ನೌಕರರಿಗೆ ನೀಡಿರುವ ಮೊಬೈಲ್ ಫೋನ್ ಹಳೆಯ ಅವೃತ್ತಿಯಾಗಿದ್ದು ಪೋಷಣ್ ಆಪ್ಗೆ ಹೊಂದಿಕೆಯಾಗುತ್ತಿಲ್ಲ, ದತ್ತಾಂಶ ಮಾಹಿತಿ ಭತ್ಯ ಪಾವತಿ ಮಾಡಿಲ್ಲ ಎಂದು ಆರೋಪಿಸಿದರು.
ಕೊರೊನಾ ವಾರಿರ್ಯಸ್ ಆಗಿ ಸೇವೆ ಸಲ್ಲಿಸುವ ಕಾರ್ಯಕರ್ತರಲ್ಲೇ ಹಲವರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡದೆ ಇರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಪ್ರಜ್ಞಾವಂತರ ಟೀಕೆಗೆ ಗುರಿಯಾಗಿತ್ತು, ಇದನ್ನು ಕಂಡ ಕೆಲ ಅಂಗನವಾಡಿ ನೌಕರರು ತಕ್ಷಣ ಕಕ್ಕಾಬಿಕ್ಕಿಯಾಗಿ ಮಾಸ್ಕ್ ಧರಿಸಿಕೊಂಡರು. ಕಾರ್ಯಕರ್ತೆಯರಿಗೆ ಮೊಬೈಲ್ ವಿತರಣೆ ಆಗಿದೆಯೋ ಇಲ್ಲವೋ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳದೆ ವೇತನ ತಡೆ ಹಿಡಿಯುವ ಬೆದರಿಕೆ ಒಡ್ಡಿರುವುದು ಖಂಡನೀಯ ಎಂದು ಅಂಗನವಾಡಿ ನೌಕರರು ಆಕ್ರೋಶ ವ್ಯಕ್ತಪಡಿಸಿದರು. ಇದರಲ್ಲಿನ ಲೋಪ ದೋಷ ನಿವಾರಿಸಬೇಕು, ತಾಂತ್ರಿಕ ಕಾರಣಗಳಿಗೆ ಅಂಗನವಾಡಿ ಕಾರ್ಯಕರ್ತೆಯರು ಬಲಿಪಶುವಾಗಿಸುವುದು ನಿಲ್ಲಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ನೌಕರರಾದ ಗಂಗಮ್ಮ, ಸರೋಜಮ್ಮ, ಗಂಗರತ್ನಮ್ಮ, ಶೈಲಜ, ಜಬೀನ್ ತಾಜ್, ಲಕ್ಷ್ಮಿನರಸಮ್ಮ, ಉಮಾ, ನಿರ್ಮಲ, ಸಾವಿತ್ರಮ್ಮ, ದಿವ್ಯಾ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!