ಓವರ್ ಹೆಡ್ ಟ್ಯಾಂಕ್ ತೆರವಿಗೆ ಆಗ್ರಹ

483

Get real time updates directly on you device, subscribe now.

ŸÈWÝX PÝ©ÃÜáÊÜ KÊÜÅ Öæv… pÝÂíP….
ಕೊಡಿಗೇನಹಳ್ಳಿ: ಸುಮಾರು ವರ್ಷಗಳಿಂದ ಅನುಪಯುಕ್ತವಾಗಿರುವ ಓವರ್ ಹೆಡ್ ಟ್ಯಾಂಕ್ ಶಿಥಿಲಗೊಂಡಿದ್ದು ಕೂಡಲೇ ತೆರವು ಮಾಡುವಂತೆ ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.
ಕೊಡಿಗೇನಹಳ್ಳಿ ಹಳೆ ಗ್ರಾಮ ಪಂಚಾಯಿತಿ ಪುರಾತನ ಪಂಚಾಯತಿ ಕಟ್ಟಡ ಹಾಗೂ ಇದರ ಆವರಣದಲ್ಲಿ ನೀರಿನ ಓವರ್ ಹೆಡ್ ಟ್ಯಾಂಕ್ ಶಿಥಿಲಗೊಂಡು ಸುಮಾರು ವರ್ಷಗಳೆ ಕಳೆದಿದ್ದು ಮಹಾಮಾರಿಯಂತೆ ಬಲಿಗಾಗಿ ಕಾಯುತ್ತಿದೆ, ಇದರ ಸುತ್ತಮುತ್ತ ದಲಿತ ಕುಟುಂಬಗಳೆ ವಾಸವಿದ್ದು, ಕೇರಿಯ ಮಕ್ಕಳು ಇಲ್ಲಿಯೇ ಆಟವಾಡುತ್ತಾರೆ, ಹಲವಾರು ಬಾರಿ ಓವರ್ ಹೆಡ್ ಟ್ಯಾಂಕ್ ಹಾಗೂ ಹಳೆ ಕಟ್ಟಡವನ್ನು ನೆಲಸಮಾ ಮಾಡುವಂತೆ ಇಲ್ಲಿನ ಸಾರ್ವಜನಿಕರು ಸೇರಿದಂತೆ ದಲಿತ ಮುಖಂಡರು ಮನವಿ ಸಲ್ಲಿಸಿದರು ಸಂಬಂಧಪಟ್ಟವರು ಇತ್ತ ಗಮನಹರಿಸುತ್ತಿಲ್ಲ.
ಇದರ ಸಮೀಪದಲ್ಲೇ ಅಂಗನವಾಡಿ ಹಾಗೂ ಸರಕಾರಿ ಶಾಲೆ ಇದ್ದು ಅನಾಹುತ ಸಂಭವಿಸಿದರೆ ಹೊಣೆ ಯಾರು ಎಂಬುದು ಪ್ರಶ್ನೆ ಎದುರಾಗಿದೆ, ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.

Get real time updates directly on you device, subscribe now.

Comments are closed.

error: Content is protected !!