ಜಾಗೃತಿ, ಉನ್ನತಿಗೆ ಪಂಚ ಕಲ್ಯಾಣದ ಸಾರ ಅಗತ್ಯ

26

Get real time updates directly on you device, subscribe now.


ಕುಣಿಗಲ್: ಮಾನವನ ಬುದ್ಧಿಮತ್ತೆಯಿಂದ ಶಿಲೆಗಳು ಸಹ ಮೂರ್ತಿ ಸ್ವರೂಪ ಹೊಂದುತ್ತಿವೆ, ಆದರೆ ಮಾನವನ ಬುದ್ಧಿಮತ್ತೆ ಶಿಲೆಯಂತಿದ್ದು ಅದರ ಸರ್ವಾಂಗೀಣ ಜಾಗೃತಿ ಮತ್ತು ಉನ್ನತಿಗೆ ಜಿನ ಸಂಪ್ರದಾಯದ ಪಂಚ ಕಲ್ಯಾಣದ ಸಾರ ಅಗತ್ಯವಾಗಿದೆ ಎಂದು ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿಶ್ರೀ ಅಭಿನವ ಚಾರು ಕೀರ್ತಿ ಭಟ್ಟರಕ ಪಟ್ಟಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಪಾರ್ಶ್ವನಾಥ ತೀಥರ್ಂಕರ ಜಿನಬಿಂಬ ನವ ನಿರ್ಮಿತ ಶಿಲಾಮಯ ಜಿನ ಮಂದಿರದಲ್ಲಿ ಪುನರ್ ಪ್ರತಿಷ್ಠಾಪನೆ ಮಾನಸ್ತಂಬೋಪರಿ ಚತುರ್ಮುಖ ಜಿನಬಿಂಬ ಪಂಚ ಕಲ್ಯಾಣ ಪ್ರತಿಷ್ಠ ಮಹೋತ್ಸವ ಹಾಗೂ ಜಿನ ಶಾಸನ ಯಕ್ಷ ಯಕ್ಷಿಯರ ಸ್ಥಾಪನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಾನವನ ಮನಸ್ಸಿನಲ್ಲಿ ಪಂಚ ಕಲ್ಯಾಣಗಳ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಿವೆ. ಕಲ್ಲು ಭಗವಂತನಾಗುವ ಪ್ರಕ್ರಿಯೆಗೆ ಐದು ರೀತಿಯ ಸಂಸ್ಕಾರಗಳಿವೆ ಯಾವುದೇ ವಸ್ತು ಮಾನವ ಭಗವಂತನಾಗುವುದನ್ನು ಪರಿಶ್ರಮ, ಜಪ ಆಗುತ್ತೆ, ಇದೊಂದು ಭಗವಂತ ತೋರುವ ಮಾರ್ಗವಾಗಿದೆ, ಪೂಜ್ಯ ಭಟ್ಟರಕರು, ಮುನಿಗಳು ,ಆಚಾರ್ಯರು ತೋರಿಸಿದ ಮಾರ್ಗದಲ್ಲಿ ತಮ್ಮ ಸ್ವಂತ ಪರಿಶ್ರಮದಿಂದ ಭಗವಂತನಾಗಲು ಸಾಧ್ಯ, ಭಗವಂತನ ಪ್ರತಿಷ್ಠೆ ಕಾರ್ಯದಲ್ಲಿ ಮಾನವನ ಮನಸ್ಸು, ವಚನ, ಶರೀರ, ತನ್ಮಯ, ಅನು ಶಾಸನ ಶುದ್ಧವಾಗಿರಬೇಕು, ತ್ಯಾಗ, ಶಾಂತಿ, ಅಹಿಂಸೆ ಮಾರ್ಗದಲ್ಲಿ ನಡೆದಾಗ ಮೋಕ್ಷ ಸಾಧ್ಯ ಎಂದರು.

ಶ್ರೀಕ್ಷೇತ್ರ ಆರತಿಪುರ ಜೈನ ಮಠದ ಪೀಠಾಧ್ಯಕ್ಷ ಸ್ವಸ್ತಿಶ್ರೀ ಸಿದ್ಧಾಂತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಮಾನವನಿಗೆ ಸ್ಪರ್ಧಾತ್ಮಕ ಮನೋಭಾವ ಅಗತ್ಯ, ಕುಣಿಗಲ್ ಜೈನ ಸಮಾಜ ಇದಕ್ಕೆ ಮಾದರಿಯಾಗಿದ್ದು, ಹೊಸ ಬಸದಿ ನಿರ್ಮಾಣಕ್ಕಿಂತ ಹಳೆಯ ಬಸದಿಗಳ ಜೀರ್ಣೋದ್ಧಾರ ಅಗತ್ಯ, ಶ್ರವಣ ಬೆಳಗೊಳದ ಪೂಜ್ಯ ಶ್ರೀಗಳ ಆಶಯವು ಇದೇ ಆಗಿತ್ತು ಎಂದರು.

ಕಂಬದಳ್ಳಿ ಜೈನ ಮಠದ ಬಾನು ಕೀರ್ತಿ ಭಟ್ಟರಕ ಶ್ರೀಗಳು, ಕನಕಗಿರಿ ಜೈನ ಮಠದ ಭುವನ ಕೀರ್ತಿ ಭಟ್ಟಾರಕ ಶ್ರೀಗಳು, ಅರಿಹಂತಗಿರಿ ಜೈನ ಮಠದ ಸ್ವಸ್ತಿ ಶ್ರೀ ದವಳ ಕೀರ್ತಿ ಭಟ್ಟಾರಕ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕರ್ನಾಟಕ ರಾಜ್ಯ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮಿನಿ ಪದ್ಮರಾಜ್, ಕರ್ನಾಟಕ ಜೈನ್ ಅಸೋಸಿಯೇಷನ್ ನಿರ್ದೇಶಕಿ ಡಾ.ನೀರಜಾ ನಾಗೇಂದ್ರ ಕುಮಾರ್, ಬೆಂಗಳೂರಿನ ಶ್ರೀಚಕ್ರೇಶ್ವರಿ ಮಹಿಳಾ ಸಮಾಜದ ಅಧ್ಯಕ್ಷೆ ನಾಗಶ್ರೀ ಮುಪ್ಪಾಣಿ ಮಾತನಾಡಿದರು.
ಕುಣಿಗಲ್ ಶ್ರೀಪಾರ್ಶ್ವನಾಥ ಜಿನ ಮಂದಿರದ ಗೌರವಾಧ್ಯಕ್ಷ ಡಾ.ವಸಂತ ಕುಮಾರಯ್ಯ, ರಾಜೇಂದ್ರ ಪ್ರಸಾದ್, ತಂಡಗ ಚಂದ್ರಕೀರ್ತಿ, ಸುಬೋಧ ಕುಮಾರ್, ಕುಣಿಗಲ್ ಜೈನ ಸಮಾಜದ ಅಧ್ಯಕ್ಷ ಡಿ.ಮೋಹನ್ ಕುಮಾರ, ಉಪಾಧ್ಯಕ್ಷ ಜಿ.ಎನ್.ಮದನ್ ಕುಮಾರ್, ಕಾರ್ಯದರ್ಶಿ ಎ.ಸಂತೋಷ್, ಖಜಾಂಚಿ.ಎಸ್.ಜೆ.ಜ್ವಾಲೇಂದ್ರ ಕುಮಾರ್, ಪದಾಧಿಕಾರಿಗಳು, ಕುಣಿಗಲ್ ಶಚಿ ದೇವಿ ಜೈನ ಮಹಿಳಾ ಸಮಾಜದ ಪದಾಧಿಕಾರಿಗಳು, ಶ್ರೀಪಾರ್ಶ್ವನಾಥ ಜಿನ ಮಂದಿರ ಸಮಿತಿಯ ಪದಾಧಿಕಾರಿಗಳು, ಪಾರ್ಶ್ವನಾಥ ತೀಥರ್ಂಕರ ಪಂಚ ಕಲ್ಯಾಣೋತ್ಸವ ಸಮಿತಿ ಪದಾಧಿಕಾರಿಗಳು, ವಿವಿಧ ಗ್ರಾಮಗಳ ಶ್ರಾವಕ, ಶ್ರಾವಕಿಯರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!