ಲಾರಿ ಹರಿದು ವೃದ್ಧ ಸಾವು

34

Get real time updates directly on you device, subscribe now.


ಹುಳಿಯಾರು: ರಸ್ತೆ ದಾಟುತ್ತಿದ್ದ ವೃದ್ಧನ ಮೇಲೆ ಲಾರಿ ಹರಿದ ಪರಿಣಾಮ ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಳಿಯಾರು ಹೋಬಳಿಯ ಅವಳಗೆರೆಯಲ್ಲಿ ಬುಧವಾರ ಜರುಗಿದೆ.
ಮೃತಪಟ್ಟ ವ್ಯಕ್ತಿಯನ್ನು ಅವಳಗೆರೆಯ ಸಿದ್ಧಪ್ಪ (70) ಎಂದು ಗುರ್ತಿಸಲಾಗಿದೆ, ಈತ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ದಾಟುತ್ತಿರುವಾಗ ಚಿಕ್ಕನಾಯಕನ ಹಳ್ಳಿ ಕಡೆಯಿಂದ ಹುಳಿಯಾರಿಗೆ ಬರುತ್ತಿದ್ದ ತಮಿಳುನಾಡು ಮೂಲದ ಲಾರಿಯೊಂದು ಹರಿದಿದೆ, ಪರಿಣಾಮ ಸಿದ್ಧಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಲಾರಿ ಹಾಗೂ ಲಾರಿಯ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ, ಸದರಿ ಹೆದ್ದಾರಿ ದಿನೇ ದಿನೇ ಮೃತ್ಯು ಸ್ವರೂಪಿಣಿಯಾಗುತ್ತಿದ್ದು, ಕಳೆದ ವಾರವಷ್ಟೇ ಇದೇ ಹೆದ್ದಾರಿಯಲ್ಲಿ ಸಂಭವಿಸಿದ 3 ಪ್ರಕರಣಗಳಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ, ಹಾಗಾಗಿ ಹೆದ್ದಾರಿಯಲ್ಲಿ ಅಪಘಾತ ತಡೆಯಲು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!