ದ್ವಿತೀಯ ಪಿಯುಸಿಯಲ್ಲಿ ಸಾಧನೆ- ವಿದ್ಯಾರ್ಥಿಗಳಿಗೆ ಸನ್ಮಾನ

15

Get real time updates directly on you device, subscribe now.


ತುಮಕೂರು: ನಗರದ ಎಸ್ಐಟಿ ಮುಖ್ಯ ರಸ್ತೆಯಲ್ಲಿರುವ ವಾಸವಿ ಪದವಿ ಪೂರ್ವ ಕಾಲೇಜಿನಲ್ಲಿ ಅಧ್ಯಯನ ಮಾಡಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದು ಕೊಟ್ಟ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ 17 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ವಾಸವಿ ವಿದ್ಯಾಪೀಠ ಸಂಸ್ಥೆಯ ಅಧ್ಯಕ್ಷ ಸೋಮೇಶ್ವರಗುಪ್ತ ಮಾತನಾಡಿ, ದ್ವಿತೀಯ ಪಿಯುಸಿಯಲ್ಲಿ ಅತ್ಯುನ್ನತ ಸ್ಥಾನ ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಕಾರ್ಯದರ್ಶಿ ಜಿ.ಕೃಷ್ಣಮೂರ್ತಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಹಿರಿಯ ಉಪನ್ಯಾಸಕರ ಮಾರ್ಗದರ್ಶನ ಪಡೆದುಕೊಂಡು ಈಗಾಗಲೇ ವೈದ್ಯರು, ಇಂಜಿನಿಯರ್ ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಅವರಂತೆ ನೀವು ಅತ್ಯುನ್ನತ ಹುದ್ದೆ ಪಡೆಯಲು ನಮ್ಮ ಕಾಲೇಜಿನ ವಿಷಯ ಸಂಪನ್ಮೂಲ ಉಪನ್ಯಾಸಕರ ಸಹಕಾರ ಸದಾ ಇರುತ್ತದೆ ಎಂದರು.
ಯಾವುದೇ ಲೋಪವಾಗದೆ ಇಲಾಖೆಯ ನಿಯಮದಂತೆ ನಮ್ಮ ಕಾಲೇಜಿನ ಮಕ್ಕಳು ನಮ್ಮ ಮಕ್ಕಳೇ ಎಂದು ತಿಳಿದು ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ಉಪನ್ಯಾಸಕರಿಗೂ ಹಾಗೂ ಕಾಲೇಜಿನ ಗೌರವ ಹೆಚ್ಚಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ವಿಭಾಗದ ಸಂಚಾಲಕ ಶ್ರೆಧರ್.ಎನ್.ಎನ್.ಗೆ ಅಭಿನಂದನೆ ಸಲ್ಲಿಸಿದರು.

ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಆರಾಧ್ಯ.ಎಚ್.ವಿ. ಪ್ರಾಸ್ತಾವಿಕ ನುಡಿಗಳನ್ನಾಡಿ, ಪ್ರಥಮ, ಮಧ್ಯ ವಾರ್ಷಿಕ, ಎರಡನೇ ಕಿರುಪರೀಕ್ಷೆ ಅಭ್ಯಾಸ ಪರೀಕ್ಷೆಗಳು, ಸಿಇಟಿ ತರಗತಿಗಳು ನಮ್ಮ ಕಾಲೇಜಿನ ಉಪನ್ಯಾಸಕರ ಸಹಕಾರದಿಂದ ಚೆನ್ನಾಗಿ ನಡೆದವು, ವಿದ್ಯಾರ್ಥಿಗಳ ಪರಿಶ್ರಮ ಇಂದಿನ ಫಲಿತಾಂಶ ಪೋಷಕರಿಗೆ, ಸಂಸ್ಥೆಗೆ ಹಾಗೂ ಕಾಲೇಜಿಗೆ ಗೌರವ ತಂದುಕೊಟ್ಟಿದೆ, ನಿಮ್ಮ ಸಹಕಾರ ಕಾಲೇಜಿನ ಅಭಿವೃದ್ಧಿಗೆ ಬೇಕು ಎಂದರು.
ನಮ್ಮ ಕಾಲೇಜಿನಲ್ಲಿ ನುರಿತ ಉಪನ್ಯಾಸಕರು, ಉತ್ತಮ ಪ್ರಯೋಗಾಲಯ, ಗ್ರಂಥಾಲಯ, ವಿಶಾಲ ಆಟದ ಮೈದಾನ, ಕ್ರೆಡಾ ಚಟುವಟಿಕೆ, ರಾಷ್ಟ್ರೀಯ ದಿನಾಚರಣೆಗಳ ಬಗ್ಗೆ ತಿಳಿಸಿದ ಅವರು ತಂದೆ- ತಾಯಿಗೆ ಹೊರೆಯಾಗದ ಶುಲ್ಕ ಪಾವತಿ ಮಾಡಿ ಅದಕ್ಕಿಂತ ಹೆಚ್ಚಿನ ವಿದ್ಯಾರ್ಥಿ ವೇತನ ಪಡೆದುಕೊಂಡಿದ್ದು, ಎಸ್ಸಿ- ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯ ನಮ್ಮ ಕಾಲೇಜಿನ ಉಪನ್ಯಾಸಕರು ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ತಾತ ಅಶೋಕ್ ಕುಮಾರ್, ಅಮರ್, ರಮೇಶ್ ಬಾಬು, ಹಿರಿಯ ಉಪನ್ಯಾಸಕರಾದ ಹನುಮಂತಯ್ಯ, ಬೆಂಕಿ ವಸಂತಕುಮಾರ್, ಶಿವಣ್ಣ, ನರೇಂದ್ರ ಬಾಬು, ವಿನೋದ್, ಸಂಧ್ಯಾ, ಗೋವಿಂದರಾಜು, ನಟರಾಜು, ಶಿವಾನಂದ್ ಹಾಗೂ ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!