ಕೊಡಿಗೇನಹಳ್ಳಿ: ದಲಿತ ಕೇರಿಗಳ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅಂಬೇಡ್ಕರ್ ಭನವ ನಿರ್ಮಿಸಿದ್ದು ಅವುಗಳ ಸರ್ಮಪಕ ನಿರ್ವಹಣೆಯ ಕೊರತೆಯಿಂದ ವ್ಯವಸ್ಥೆ ಇದ್ದೂ ಇಲ್ಲವಾಗಿದೆ ಎನ್ನುವುದಕ್ಕೆ ಗ್ರಾಮದ ಕಾಲೋನಿಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನವೇ ಪ್ರತ್ಯಕ್ಷ ಸಾಕ್ಷಿಯಾಗಿದೆ.
ಬಡಾವಣೆಯಲ್ಲಿ ತಳ ಸಮುದಾಯದ ವಿವಿಧ ವಿಚಾರ ಗೋಷ್ಠಿ ಹಾಗೂ ಸಮುದಾಯಗಳ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಾಮಾಜಿಕವಾಗಿ ಮುಖ್ಯವಾಹಿನಿಗೆ ತರಲು 2001ರಲ್ಲಿ ಡಾ.ಜಿ.ಪರಮೇಶ್ವರ್ ಶಿಕ್ಷಣ ಮಂತ್ರಿಯಾಗಿದ್ದಾಗ ಜಿಪಂ ಅನುದಾನದಲ್ಲಿ ಈ ಸಮುದಾಯ ಭವನ ನಿರ್ಮಾಣ ಮಾಡಲಾಗಿತ್ತು, ಆದರೆ ಸಮರ್ಪಕವಾದ ನಿರ್ವಹಣೆಯ ಕೊರತೆಯಿಂದ ಸಮುದಾಯ ಭವನ ಶಿಥಲಾವಸ್ಥೆ ತಲುಪಿದೆ.
ತಳ ಸಮುದಾಯವೇ ಹೆಚ್ಚಾಗಿ ವಾಸವಿರುವ ಕಾಲೋನಿಯ ಸಮುದಾಯ ಭವನದ ಸುತ್ತಮುತ್ತ ಬರಿ ಮದ್ಯ ಪಾಕೆಟ್ಗಳೇ ಆವರಿಸಿದ್ದು ತ್ಯಾಜ್ಯ ಘಟಕವಾಗಿ ಮಾರ್ಪಟಿದ್ದೆ, ಸುಮಾರು 17 ವರ್ಷಗಳ ಹಿಂದೆ ಆರಂಭವಾದ ಈ ಭವನ ಸಮರ್ಪಕ ನಿರ್ವಹಣೆಯಿಲ್ಲದೆ ಸೊರಗುತ್ತಿದೆ, ಆಡಳಿತ ನಿರ್ವಹಣೆಯಿಲ್ಲದೆ ದುಸ್ಥಿತಿ ತಲುಪಿದ್ದು ಅಂದಿನಿಂದ ಇಂದಿನವರೆಗೂ ಸಮುದಾಯಕ್ಕೆ ಬಳಕೆಯಾಗಿಲ್ಲ, ಇಲ್ಲಿ ಒಂದಿದ್ದರೆ ಮತ್ತೊಂದಿಲ್ಲ ಎಂಬಂತಾಗಿದೆ ಎಂದು ಜನತೆ ದೂರುತ್ತಿದ್ದಾರೆ.
ತಡೆಗೋಡೆ ಇಲ್ಲದೆ ಇದರ ಸುತ್ತ ಅಕ್ರಮ ಚಟುವಟಿಕೆ ನಡೆಯುತ್ತಿದ್ದು, ಇಲ್ಲಿನ ಸಮುದಾಯ ಭವನಕ್ಕೆ ಮುಕ್ತಿ ಕಾಣಿಸದಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ, ಇದೇ ಬ್ಲಾಕ್ನ ಆಯ್ಕೆಯಾದ ಗ್ರಾಪಂ ಸದಸ್ಯರಿದ್ದು ಇನ್ನಾದರೂ ಭವನದ ದುರಸ್ಥಿಗೆ ಮುಂದಾಗುತ್ತಾರಾ ಕಾದು ನೋಡಬೇಕಿದೆ.
ಪಾಳುಬಿದ್ದ ಕೊಡಿಗೇನಹಳ್ಳಿ ಅಂಬೇಡ್ಕರ್ ಭವನ
Get real time updates directly on you device, subscribe now.
Prev Post
Comments are closed.