ಕುಣಿಗಲ್: ರೌಡಿ ಶೀಟರ್ ತನ್ನ ಬೆಂಬಲಿಗರೊಂದಿಗೆ ಬೈಕ್ ನಲ್ಲಿ ಸಾಗುತ್ತಿದ್ದವರನ್ನು ಅಡ್ಡಗಟ್ಟಿದ್ದಲ್ಲದೆ ಬೆದರಿಸಿದ್ದು, ಬೈಕ್ ಸುಟ್ಟು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಅಮೃತೂರು ಪೊಲೀಸ್ ವೃತ್ತದ ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಏಪ್ರಿಲ್ 26 ರಂದು ಬೆಂಗಳೂರಿನ ಹೆಚ್ಎಂಟಿ ಲೇಔಟ್ ನಲ್ಲಿ ವಾಸಿಸುವ ಮನೋಹರ್ ಹಾಗೂ ಇವರ ಸ್ನೇಹಿತ ಬೆಂಗಳೂರು ಗಂಗೋಂಡನ ಹಳ್ಳಿ ವಾಸಿ ರವಿಕುಮಾರ್ ಬೈಕ್ ನಲ್ಲಿ ಕುಣಿಗಲ್ ತಾಲೂಕಿನ ಪಾವಸಂದ್ರದಲ್ಲಿ ಊರ ಹಬ್ಬದ ಪ್ರಯುಕ್ತ ಇವರ ಸ್ನೇಹಿತನಾದ ಸಿದ್ದರಾಜು ಮನೆಗೆ ಆಗಮಿಸಿದ್ದರು, ಮೂವರು ಬೆಂಗಳೂರಿನ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು, ಊರ ಹಬ್ಬ ಮುಗಿಸಿಕೊಂಡು ಏಪ್ರಿಲ್ 26 ರಾತ್ರಿ ವಾಪಸ್ ಬೆಂಗಳೂರಿಗೆ ಬೈಕ್ ನಲ್ಲಿ ಹೋಗುವಾಗ ಮಾರ್ಗ ಮಧ್ಯೆ ಬೈಕ್ ನ ಹಿಂದೆ ಸ್ಕೂಟರ್ ನಲ್ಲಿ ಬಂದ ಮೂವರು ಆಸಾಮಿಗಳು ಹಾರ್ನ್ ಮಾಡುತ್ತಾ ಓವರ್ ಟೇಕ್ ಮಾಡಲು ಯತ್ನಿಸಿದ್ದು, ಗ್ರಾಮ ಒಂದರ ಬಳಿ ಅವರಿಗೆ ಮಾರ್ಗ ಬಿಟ್ಟರೂ ಹೋಗದೆ ವಿನಾಕಾರಣ ಬೈಕ್ ಗೆ ಅಡ್ಡಹಾಕಿ ಬೈಕ್ ನಿಲ್ಲಿಸಿ ಕೀ ಕಸಿದುಕೊಳ್ಳಲು ಯತ್ನಿಸಿದಾಗ ಬೈಕ್ ನವರು ಕೀ ಕೊಡದೆ ಪ್ರತಿರೋಧ ತೋರಿದ್ದು, ಸ್ಕೂಟರ್ ನಲ್ಲಿದ್ದವರು ವಿನಾಕಾರಣ ಬೈಕ್ ಲ್ಲಿದ್ದವರಿಗೆ ಬೆದರಿಕೆ ಹಾಕಿದ್ದಲ್ಲದೆ ಏಕಾಏಕಿ ಹಲ್ಲೆ ನಡೆಸಿ ಬೈಕ್ ಸವಾರರ ಹತ್ತಿರ ಇದ್ದ ಮೊಬೈಲ್, ಹತ್ತು ಗ್ರಾಂ ಚಿನ್ನದ ಚೈನು ಕಸಿದುಕೊಂಡು ಕೊಲೆ ಮಾಡಲು ಯತ್ನಿಸಿದ್ದು, ಗ್ರಾಮದ ಮನೆಯವರು ಕಿಟಕಿಯಿಂದ ನೋಡಿ ಓಡಿ ಹೋಗುವಂತೆ ಹೇಳಿದ್ದರಿಂದ ಬೈಕ್ ಸವಾರರು ಸ್ಕೂಟರ್ ಸವಾರರಿಂದ ತಪ್ಪಿಸಿಕೊಂಡು ಓಡಿದ್ದು ರಾತ್ರಿ ವೇಳೆಯಾದ ಕಾರಣ ಮತ್ತೊಂದು ಗ್ರಾಮಕ್ಕೆ ಬಂದು ಮನೆಯೊಂದರ ಮುಂದೆ ಮಲಗಿದ್ದು, ನಂತರ ಆಟೋದಲ್ಲಿ ಹುಲಿಯೂರು ದುರ್ಗ ಠಾಣೆಗೆ ಬಂದು ದೂರು ನೀಡಿದ ಬೈಕ್ ಸವಾರರು ನಮ್ಮ ಮೇಲೆ ಹಲ್ಲೆ ನಡೆಸಿ ಚೈನ್ ಕಿತ್ತುಕೊಂಡು, ಬೈಕ್ ಸುಟ್ಟು ಹಾಕಿದ್ದು ರೌಡಿಶೀಟರ್ ಮೋದೂರು ಗಿರಿ ಹಾಗೂ ಇವನ ಸಹಚರರಾದ ವಿನೋದ್, ಸತೀಶ್ ಎಂದು ದೂರು ನೀಡಿದ ಮೇರೆಗೆ ಹುಲಿಯೂರು ದುರ್ಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಚುನಾವಣೆ ನಿಮಿತ್ತ ಮೋದೂರು ಗಿರಿಯನ್ನು ಗಡಿಪಾರು ಮಾಡಲಾಗಿತ್ತು ಎನ್ನಲಾಗಿದೆ, ಘಟನೆ ಸಂಬಂಧಿಸಿದಂತೆ ಪೊಲೀಸರು ರೌಡಿಶೀಟರ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
Comments are closed.