ನವಜಾತ ಶಿಶುಗಳ ಎನ್ ಐಸಿಯು, ಪಿಐಸಿಯು ಆರಂಭ

ಶ್ರೀಸಿದ್ಧಾರ್ಥ ವೈದ್ಯಕೀಯ ಕಾಲೇಜು, ಆಸ್ಪತ್ರೆಯಿಂದ ಮಹತ್ವದ ಹೆಜ್ಜೆ

31

Get real time updates directly on you device, subscribe now.


ತುಮಕೂರು: ನಗರದ ಅಗಳಕೋಟೆಯಲ್ಲಿರುವ ಶ್ರೀಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ಹೊರ ರೋಗಿಗಳ ವಿಸ್ತರಣಾ ಘಟಕದಲ್ಲಿ ಹೊಸದಾಗಿ ನವಜಾತ ಶಿಶುಗಳ ಎನ್ ಐಸಿಯು, ಪಿಐಸಿಯು, ಲೇಬರ್ ಕೊಠಡಿ, ಸೌಂದರ್ಯವರ್ಧಕ ಚಿಕಿತ್ಸಾ ವಿಭಾಗ ಮತ್ತು ಕೇಂದ್ರೀಯ ಸಂಶೋಧನಾ ಲ್ಯಾಬ್ ಉದ್ಘಾಟನೆ ಇದೇ ಮೇ 6ಕ್ಕೆ ಬೆಳಗ್ಗೆ 10 ಗಂಟೆಗೆ ವೈದ್ಯಕೀಯ ಕಾಲೇಜಿನಲ್ಲಿ ಉದ್ಘಾಟಿಸಲಾಗುವುದು ಎಂದು ಶ್ರೀಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಜಿ.ಎನ್.ಪ್ರಭಾಕರ್ ತಿಳಿಸಿದರು.

ಪತ್ರಿಕಾಗೋಷಿಯಲ್ಲಿ ಮಾತನಾಡಿ ಅವರು, ತುಮಕೂರಿನಂತಹ ನಗರದಲ್ಲಿ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಸಿದ್ಧಾರ್ಥ ಆಸ್ಪತ್ರೆಯಲ್ಲಿ ಆಧುನಿಕ ಉಪಕರಣ ಅಳವಡಿಸಿಕೊಂಡು ಚಿಕಿತ್ಸಾ ವಿಧಾನವನ್ನು ಮೇಲ್ದೆರ್ಜೆಗೆರಿಸಿ ಬಡವರಿಗೂ ಲಭ್ಯವಾಗುವ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ಆ ನಿಟ್ಟಿನಲ್ಲಿ ಎನ್ಐಸಿಯು, ಪಿಐಸಿಯು, ಲೇಬರ್ ಕೊಠಡಿ, ಸೌಂದರ್ಯ ವರ್ಧಕ ಚಿಕಿತ್ಸಾ ವಿಭಾಗ ಮತ್ತು ಕೇಂದ್ರೀಯ ಸಂಶೋಧನಾ ಲ್ಯಾಬ್ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಶ್ರೀಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಿ.ಸಾಣಿಕೊಪ್ ಮಾತನಾಡಿ, ಮೇ 6 ರಂದು ಬೆಳಗ್ಗೆ 10 ಗಂಟೆಗೆ ಎನ್ ಐಸಿಯು, ಪಿಐಸಿಯು, ಹೆರಿಗೆ ಕೊಠಡಿ, ಸೌಂದರ್ಯವರ್ಧಕ ಚಿಕಿತ್ಸಾ ವಿಭಾಗ ಮತ್ತು ಕೇಂದ್ರೀಯ ಸಂಶೋಧನಾ ಲ್ಯಾಬ್ ಉದ್ಘಾಟನೆಯನ್ನು ಸಾಹೇ ವಿವಿಯ ಕುಲಾಧಿಪತಿಗಳು ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಉದ್ಘಾಟಿಸಲಿದ್ದಾರೆ, ಶ್ರೀಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಕನ್ನಿಕಾ ಪರಮೇಶ್ವರ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ, ಸಾಹೇ ಉಪ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಸಾಹೇ ರಿಜಿಸ್ಟ್ರಾರ್ ಡಾ.ಎಂ.ಝೆಡ್ ಕುರಿಯನ್, ಸಾಹೇ ವಿವಿಯ ಪರೀಕ್ಷಾ ನಿಯಂತ್ರಣಕ ಡಾ.ಗುರುಶಂಕರ್, ವೈದ್ಯಕೀಯ ಮೇಲ್ವಿಚಾರಕ ಡಾ.ಎನ್.ಎಸ್.ವೆಂಕಟೇಶ್, ಸಾಹೇ ವಿವಿಯ ಕುಲಾಧಿಪತಿ ಸಲಹೆಗಾರ ಡಾ.ವಿವೇಕ್ ವೀರಯ್ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ವೈದ್ಯಕೀಯ ಮೇಲ್ವಿಚಾರಕ ಡಾ.ಎನ್.ಎಸ್.ವೆಂಕಟೇಶ್ ಮಾತನಾಡಿ, ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ವಿಮೆ ಸೌಲಭ್ಯ ಆಸ್ಪತ್ರೆಯ ರೋಗಿಗಳಿಗೆ ಲಭ್ಯವಿದೆ, ಹಾಗಾಗಿ ಅತ್ಯಾಧುನಿಕ ಚಿಕಿತ್ಸೆ ಪಡೆಯಬಹುದು, ನುರಿತ ವೈದ್ಯಕೀಯ ತಂಡ ಎಲ್ಲಾ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಸೂತಿ ತಜ್ಞರಾದ ಡಾ.ಇಂದಿರಾ, ಚರ್ಮರೋಗ ತಜ್ಞರಾದ ಡಾ.ಶಿವಾನಂದ, ಡಾ.ಕಿರಣ್, ಡಾ.ಅರುಣ್, ಡಾ.ಪ್ರಸನ್ನ ಕುಮಾರ್ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!