ರೈತನ ಜಮೀನಿನಲ್ಲಿ ಅಗ್ನಿಇವಘಡ

33

Get real time updates directly on you device, subscribe now.


ಪಾವಗಡ: ಆಕಸ್ಮಿಕ ಅಗ್ನಿಇವಘಡ ಸಂಭವಿಸಿ ರೈತನ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಮಾವಿನ ಬೆಳೆ ಹಾಗೂ ತೇಗದ ಮರಗಳು ಸುಟ್ಟು ಅಪಾರ ನಷ್ಟ ಸಂಭವಿಸಿರುವ ಘಟನೆ ಬಳ್ಳಾರಿ ರಸ್ತೆಯ ವೀರಮ್ಮನಹಳ್ಳಿ ಗೇಟ್ ಬಳಿಯ ಜಮೀನಿನಲ್ಲಿ ಶನಿವಾರ ಸಂಜೆ ನಡೆದಿದೆ.
ಪಳವಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿದ ವೀರಮ್ಮನಹಳ್ಳಿ ಗೇಟ್ ಬಳಿಯ ಸ.ನಂ.62/1ಬಿ ಗ್ರಾಮದ ಕೆ.ಎಸ್.ರವಿಪ್ರಸಾದ್ ಎಂಬುವರಿಗೆ ಸೇರಿದ ಸುಮಾರು ಏಳು ಎಕರೆ ಜಮೀನಿನ ಐದು ಎಕರೆ ವಿಸ್ತೀರ್ಣದಲ್ಲಿ ಮಾವಿನ ಬೆಳೆಗೆ ಬೆಂಕಿ ತಗುಲಿ ನಷ್ಟ ಸಂಭವಿಸಿದೆ, ಫಸಲಿಗೆ ಬಂದಿದ್ದ ತೇಗದ ಮರಗಳು ಸಹ ಸುಟ್ಟು ನಷ್ಟವಾಗಿದ್ದು ರೈತ ರವಿ ಪ್ರಸಾದ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಘಟನೆಗೆ ಜಮೀನಿನ ಬೇಲಿಯ ಬಳಿ ಅಳವಡಿಸಿದ್ದ ಟ್ರಾನ್ಸ್ ಫಾರ್ಮರ್ನಲ್ಲಿ ಬೆಂಕಿಯ ಕಿಡಿ ಕಾಣಿಸಿಕೊಂಡು ಒಣಗಿದ್ದ ಬೇಲಿಯ ಮೇಲೆ ಬಿದ್ದು ಅವಘಡ ಸಂಭವಿಸಿದೆ ಎಂದು ನೆರೆಯ ಜಮೀನುಗಳ ಮಾಲೀಕರು ಹಾಗೂ ಕುರಿಗಾಹಿಗಳು ತಿಳಿಸಿದ್ದಾರೆ.
ಘಟನೆ ತಿಳಿದು ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಹರಸಾಹಸ ಪಟ್ಟುಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು, ಬೆಸ್ಕಾಂ ಇಲಾಖೆಯ ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಬಾರಿ ಅವಘಡ ನಡೆಯುವುದನ್ನು ತಪ್ಪಿಸಿದಂತಾಗಿದೆ ಎಂದು ತಿಳಿದು ಬಂದಿದೆ, ಆದರೆ ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾತ್ರ ಘಟನಾ ಸ್ಥಳಕ್ಕೆ ಬಾರದೆ ನಿರ್ಲಕ್ಷ ತೋರಿದರು ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!