ಸರ್ಕಾರಿ ಕಚೇರಿಗಳಲ್ಲಿ ಕಂಪ್ಯೂಟರ್ ಪ್ರಿಂಟರ್ ಕಳವು

38

Get real time updates directly on you device, subscribe now.


ಮಧುಗಿರಿ: ಇಲ್ಲಿನ ಪುರಸಭೆಯ ಕಚೇರಿಯ ಅಕೌಂಟ್ ಸೆಕ್ಷನ್ ನಲ್ಲಿದ್ದ ಕಂಪ್ಯೂಟರ್ನ ಪ್ರಿಂಟರ್ ಅನ್ನು ಶುಕ್ರವಾರ ಬೆಳಗಿನ ಜಾವ ಕಳ್ಳನೊಬ್ಬ ಕದ್ದುಯ್ದಿರುವ ಘಟನೆ ನಡೆದಿದೆ.
ಪ್ರತಿನಿತ್ಯ ಬೆಳಗಿನ ಜಾವ ಪೌರ ಕಾರ್ಮಿಕರು ನಗರದ ಸ್ವಚ್ಛತೆಗೆ ಆಗಮಿಸುತ್ತಾರೆ, ಸಂಜೆ 6ರ ನಂತರ ಪುರಸಭೆಯ ಆವರಣದ ಒಳಗೆ ಪ್ರವೇಶಿಸದಂತೆ ಬೀಗ ಹಾಕಿರುತ್ತಾರೆ, ಬೆಳಗಿನ ಜಾವ ಪೌರ ಕಾರ್ಮಿಕರು ಬರುವ ವೇಳೆಯಲ್ಲಿ ಬಾಗಿಲು ತೆಗೆದು ಆರೋಗ್ಯ ನಿರೀಕ್ಷಕರು ನಂತರ ಪೌರ ಕಾರ್ಮಿಕರ ಹಾಜರಾತಿ ಪಡೆಯಲು ಮಾಲಿ ಮರಿಯಪ್ಪ ರಂಗಮಂದಿರಕ್ಕೆ ತೆರಳಿದ್ದಾರೆ, ಈ ಸಮಯ ಬಳಸಿಕೊಂಡ ಕಳ್ಳ ಪುರಸಭೆ ಕಚೇರಿ ಪ್ರವೇಶಿಸಿ ಅಕೌಂಟ್ ಸೆಕ್ಷನ್ ನಲ್ಲಿದ್ದ ಕಂಪ್ಯೂಟರ್ ಪ್ರಿಂಟರ್ ಕದ್ದಿದ್ದಾನೆ.
ಇದೇ ಮೊದಲಲ್ಲ, ಇತ್ತೀಚೆಗೆ ಮಧುಗಿರಿ ತಹಶೀಲ್ದಾರ್ ಕಚೇರಿಯಲ್ಲಿ ಹಾಗೂ ಡಿಡಿಪಿಐ ಕಚೇರಿಯಲ್ಲಿ ಹಾಗೂ ಹಲವು ಸರ್ಕಾರಿ ಕಚೇರಿಗಳಲ್ಲಿ ಈ ಕಳ್ಳ ಪ್ರಿಂಟರ್ ಗಳನ್ನು ಮಾತ್ರ ಕದಿಯುತ್ತಿದ್ದಾನೆಂದು ನಾಗರಿಕರು ಮಾತನಾಡಿ ಕೊಳ್ಳುತ್ತಿದ್ದಾರೆ, ಈ ಬಗ್ಗೆ ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ.

Get real time updates directly on you device, subscribe now.

Comments are closed.

error: Content is protected !!