ಮಕ್ಕಳ ಹಕ್ಕುಗಳ ರಕ್ಷಣೆಗೆ ಒತ್ತು ನೀಡಿ: ಶರ್ಮ

43

Get real time updates directly on you device, subscribe now.


ತುಮಕೂರು: ಉತ್ತಮವಾಗಿ ಬದುಕಿ ವಿಕಾಸ ಹೊಂದಲು ಅಗತ್ಯವಿರುವ ಎಲ್ಲಾ ಮಕ್ಕಳ ಹಕ್ಕುಗಳನ್ನು ಸಮಾಜ ಪಾಲಿಸಬೇಕು, ರಕ್ಷಿಸಬೇಕು ಎಂದು ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್ನ ಕಾರ್ಯಕಾರಿ ನಿರ್ದೇಶಕ ಡಾ.ವಾಸುದೇವ ಶರ್ಮ.ಎನ್.ವಿ. ಹೇಳಿದರು.
ತುಮಕೂರು ವಿವಿ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಚೈಲ್ಡ್ ರೈಟ್ಸ್ ಟ್ರಸ್ಟ್ ಮತ್ತು ಅಮಲಗೊಂದಿಯ ಚಿಗುರು ಯುವಜನ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಲ್ಪನೆಯಿಂದ ಸಾಧ್ಯತೆಯೆಡೆಗೆ ಮಕ್ಕಳ ಹಕ್ಕುಗಳು ಕುರಿತ ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
1992ರಲ್ಲಿ ಭಾರತ ಅಳವಡಿಸಿಕೊಂಡ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿರುವಂತೆ ಮಕ್ಕಳ ಮೇಲೆ ದಬ್ಬಾಳಿಕೆ, ತೊಂದರೆ, ಕಿರುಕುಳ ನೀಡುವಂತಿಲ್ಲ, ಮಕ್ಕಳನ್ನು ದುಡಿಮೆಗೆ ದೂಡುವುದು, ಮಾರಾಟ, ಸಾಗಣೆ ಹಾಗೂ ಲೈಂಗಿಕ, ದೈಹಿಕ, ಮಾನಸಿಕ ಶೋಷಣೆಗೆ ಈಡು ಮಾಡಬಾರದುಎಂದು ತಿಳಿಸಿದರು.

ನ್ಯಾಯ ಸಮ್ಮತವಾಗಿ ಮಕ್ಕಳಿಗೆ ಸಿಗಬೇಕಾದ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ ಸೌಲಭ್ಯಗಳ ಕೊರತೆ ಉಂಟಾಗದಂತೆ ಪಾಲಕರು, ಪೋಷಕರು ನೋಡಿಕೊಳ್ಳಬೇಕು ಎಂದರು.

ಕಾರ್ಯಾಗಾರ ಉದ್ಘಾಟಿಸಿದ ವಿವಿ ಹಣಕಾಸು ಅಧಿಕಾರಿ ಪ್ರೊ.ಪರಮಶಿವಯ್ಯ.ಪಿ. ಮಾತನಾಡಿ, 2023ರ ವೇಳೆಗೆ ಭಾರತದಲ್ಲಿ ದುಡಿಯುವ ಜನಸಂಖ್ಯೆಯು ಶೇ.76 ರಷ್ಟಿರುತ್ತದೆ, ಗುಣಮಟ್ಟ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ, ಮಕ್ಕಳ ಮೇಲಾಗುವ ದೌರ್ಜನ್ಯ ಸಂಪೂರ್ಣವಾಗಿ ಇಲ್ಲವಾಗಿಸಿದರೆ ದೇಶದ ಅಭಿವೃದ್ಧಿ ಸಾಧ್ಯಎಂದರು.

ಮಕ್ಕಳ ಹಕ್ಕುಗಳ ಕಾಯಿದೆಗಳನ್ನು ಪಾಲಿಸಬೇಕು, ಭಾರತದಲ್ಲಿ 47 ಕೋಟಿ ಮಕ್ಕಳಿದ್ದಾರೆ, ಇದರಲ್ಲಿ 33 ಲಕ್ಷ ಮಕ್ಕಳು ಬಾಲ ಕಾರ್ಮಿಕರಾಗಿ ದೇಶದ ಗಲ್ಲಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಮಕ್ಕಳ ಕಳ್ಳ ಸಾಗಣೆ, ಲೈಂಗಿಕ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ವಿವಿ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಪ್ರೊ.ರಮೇಶ್.ಬಿ, ಪ್ರಾಧ್ಯಾಪಕ ಪ್ರೊ.ಪರಮಶು ರಾಮ.ಕೆ.ಜಿ, ಅಮಲಗೊಂದಿಯ ಚಿಗುರು ಯುವಜನ ಸಂಘದ ಮುಖ್ಯಸ್ಥ ಮಂಜುನಾಥ್ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!