ಅಗ್ನಿ ಅವಘಡಕ್ಕೆ ತೆಂಗಿನ ಮರ, ಮನೆ ಭಸ್ಮ

46

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ಥರಮನ ಕೋಟೆಯಲ್ಲಿ ಬೆಂಕಿಗೆ ಸಿಲುಕಿ ಸುಮಾರು ಇನ್ನೂರಕ್ಕೂ ಹೆಚ್ಚು ತೆಂಗಿನ ಸಸಿ, ಮರಗಳು ಹಾಗೂ ಮನೆಯೊಂದು ಭಸ್ಮವಾಗಿರುವ ಘಟನೆ ನಡೆದಿದೆ.
ಥರಮನ ಕೋಟೆಯ ಡಿ.ಎಂ.ತಿಮ್ಮಯ್ಯ ಎಂಬುವವರಿಗೆ ಸೇರಿದ ತೆಂಗಿನ ತೋಟಕ್ಕೆ ಬೆಂಕಿ ತಗುಲಿದ ಪರಿಣಾಮ ತೋಟದಲ್ಲಿದ್ದ ತೆಂಗಿನ ಮರಗಳು ಹಾಗೂ ಅಲ್ಲೇ ಇದ್ದ ಮನೆಯು ಭಸ್ಮಗೊಂಡಿದೆ, ಮನೆಯೊಳಗಿದ್ದ ಮರ ಮುಟ್ಟುಗಳು ಹಾಗೂ ಮನೆಯಲ್ಲಿದ್ದ ಧವಸ ಧಾನ್ಯ ಸೇರಿದಂತೆ ಎಲ್ಲಾ ವಸ್ತುಗಳು ಭಸ್ಮವಾಗಿವೆ, ತೋಟದ ಬಳಿಯೇ ದಾಸ್ತಾನು ಮಾಡಲಾಗಿದ್ದ ಸುಮಾರು ಮೂರು ಸಾವಿರ ತೆಂಗಿನ ಕಾಯಿ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋಗಿವೆ.
ಈ ಬೆಂಕಿ ಅನಾಹುತ ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಹಾಕಿದ್ದಾರೋ ಎಂಬುದು ತಿಳಿದಿಲ್ಲ ಎಂದು ತೋಟದ ಮಾಲೀಕ ತಿಮ್ಮಯ್ಯ ತಿಳಿಸಿದ್ದಾರೆ.

ಅಗ್ನಿಶಾಮಕ ದಳ ಮತ್ತು ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಮುಂದಾಗಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ, ತುರುವೇಕೆರೆಯ ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿರುವ ತೋಟದ ಮಾಲೀಕ ತಿಮ್ಮಯ್ಯ ಅಗ್ನಿ ಆಕಸ್ಮಿಕದಿಂದ ಸುಮಾರು 6 ಲಕ್ಷ ರೂ. ನಷ್ಟ ಸಂಭವಿಸಿದೆ, ಆದ ಕಾರಣ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ತಿಮ್ಮಯ್ಯ ವಿನಂತಿಸಿಕೊಂಡಿದ್ದಾರೆ, ಈ ಸಂಬಂಧ ತುರುವೇಕೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!