ನಾಯಿಗಳ ದಾಳಿಗೆ 20 ಕುರಿ ಬಲಿ

49

Get real time updates directly on you device, subscribe now.


ಪಾವಗಡ: ಬೀದಿ ನಾಯಿಗಳ ದಾಳಿಯಿಂದ 20 ಕುರಿಗಳು ಸಾವನ್ನಪ್ಪಿದ್ದು ಸುಮಾರು 15 ಕುರಿಗಳಿಗೆ ತೀವ್ರ ಗಾಯಗಳಾಗಿರುವ ಘಟನೆ ತಾಲೂಕಿನ ಬೊಮ್ಮತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಬೊಮ್ಮತನಹಳ್ಳಿ ಗ್ರಾಮದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದುಗ್ರಾಮದ ರೈತ ಹಾಗೂ ಕುರಿಗಾಹಿ ಬಸಯ್ಯಗೆ ಸೇರಿದ ಕುರಿಗಳು ಸಾವನ್ನಪ್ಪಿ ಅಪಾರ ನಷ್ಟ ಸಂಭವಿಸಿದೆ.
ಗ್ರಾಮದಲ್ಲಿರುವ ಕುರಿರೊಪ್ಪಕ್ಕೆ ನುಗ್ಗಿದ ಬೀದಿ ನಾಯಿಗಳು ಕುರಿಗಳ ಮೇಲೆ ಏಕಾಏಕಿ ದಾಳಿ ನಡೆಸಿ ಗಾಯಪಡಿಸಿದ್ದರಿಂದ 20 ಕುರಿಗಳು ಸಾವನ್ನಪ್ಪಿದ್ದು 15 ಕ್ಕೂ ಹೆಚ್ಚಿನ ಕುರಿಗಳಿಗೆ ತೀವ್ರ ಗಾಯಗಳಾಗಿವೆ.
ಘಟನೆ ವಿಷಯ ತಿಳಿದು ತಾಲೂಕು ಪಶು ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದು ಸರ್ಕಾರಕ್ಕೆ ವರದಿ ಸಲ್ಲಿಸಿ ನೆರವು ನೀಡುವ ಭರವಸೆ ನೀಡಿದ್ದಾರೆ. ಕುರಿಗಳ ಸಾವಿನಿಂದ ಆರ್ಥಿಕ ನಷ್ಟಕ್ಕೀಡಾಗಿರುವ ರೈತ ಬಸಯ್ಯ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ನೆರೆವು ನೀಡಬೇಕು ಎಂದು ರೊಪ್ಪ ಗ್ರಾಪಂ ಅಧ್ಯಕ್ಷೆ ರೂಪಾ, ಸದಸ್ಯರಾದ ಜಿ.ಎನ್.ಹನುಮಂತರಾಯಪ್ಪ ಹಾಗೂ ರಾಮಾಂಜಿನೇಯುಲು ಇತರರಯ ಒತ್ತಾಯಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!