ದೇವರನ್ನು ರೇಗಿಸಿ ಚಾಟಿ ಏಟು ತಿನ್ನುವುದೇ ಮಜಾ!

ಜಾಲಿ ಮುಳ್ಳಿನ ಮೇಲೆ ಕುಣಿಯುವ ರಾಮಪ್ಪ ದೇವರು

37

Get real time updates directly on you device, subscribe now.


ಗುಬ್ಬಿ: ಭಕ್ತರ ಹರಕೆ ಈಡೇರಿಕೆಗೆ ಜಾಲಿ ಮುಳ್ಳಿನ ಗದ್ದುಗೆಯಲ್ಲಿ ಮಲಗುವ ರಾಮಪ್ಪ ದೇವರು ಸಾವಿರಾರು ಭಕ್ತರ ಆರಾಧ್ಯ ದೈವವಾಗಿದೆ.
ಗುಬ್ಬಿ ತಾಲೂಕಿನ ಕಸಬ ಹೋಬಳಿ ತೊರೇಹಳ್ಳಿ ಗ್ರಾಮದಲ್ಲಿರುವ ರಾಮ ದೇವರ ದೇಗುಲದಲ್ಲಿ ಹರಕೆ ಹೊತ್ತ ಭಕ್ತರು ಮುಳ್ಳಿನ ಗದ್ದುಗೆ ಸಿದ್ಧ ಪಡಿಸಿರುತ್ತಾರೆ, ರಾಮಪ್ಪ ದೇವರು ಮುಖವಾಡ ಹೊತ್ತ ಅರ್ಚಕರ ಕೈಯಲ್ಲಿ ಬೆತ್ತ ಹಾಗೂ ಚಾಟಿ ಹಿಡಿದು ದೇವರು ಆಡಿಸುವಾಗ ಗ್ರಾಮಸ್ಥರಿಗೆ ಚುರುಕು ಮುಟ್ಟಿಸುವುದು ಉಂಟು.
ದೇಗುಲದಿಂದ ಮೆರವಣಿಗೆ ಮೂಲಕ ಹಾದು ಹೋಗುವ ರಾಮಪ್ಪ ದೇವರ ಮುಖವಾಡ ಧರಿಸಿದ ಅರ್ಚಕರು ಮಾರ್ಗ ಮಧ್ಯೆ ಹಲವು ಭಕ್ತರ ಮನೆಯಲ್ಲಿ ವಿಶೇಷ ಪೂಜೆ ಸ್ವೀಕರಿಸುತ್ತಾರೆ, ದಾರಿಯುದ್ದಕ್ಕೂ ಅರೇವಾದ್ಯ, ಡೋಲು ವಾದ್ಯಕ್ಕೆ ತಕ್ಕಂತೆ ನರ್ತಿಸುತ್ತಾ ಸಾಗುವ ದೇವರನ್ನು ರೇಗಿಸುವ ಯುವಕ ಪಡೆ ಚಾಟಿ ಏಟಿಗೆ ಮೈವೊಡ್ಡಿ ನಿಲ್ಲುವರು.

ಮೈ ಮೇಲೆ ಬಾಸುಂಡೆ ಬಂದರೂ ಲೆಕ್ಕಿಸದೆ ರಾಮಪ್ಪ ದೇವರನ್ನು ದಾರಿಯುದ್ದಕ್ಕೂ ರೇಗಿಸುವ, ಸಿಟ್ಟಿಗೆಬ್ಬಿಸುವ ಕಾಯಕವನ್ನು ಯುವಕರು ನಿರಂತರವಾಗಿ ಮಾಡುತ್ತಾರೆ, ಈ ರೀತಿ ಮಾಡುವುದು ಒಳಿತನ್ನು ಬಯಸಿದಂತೆ ಎನ್ನುವ ಯುವಕರು ದೇವರಿಗೆ ಹರಕೆ ಕಟ್ಟಿಕೊಳ್ಳುತ್ತಾರೆ, ಮುಳ್ಳಿನ ಗದ್ದುಗೆ ವರೆಗೆ ಮೆರವಣಿಗೆ ಮೂಲಕ ಬರುವ ದೇವರ ಸುತ್ತುಗಟ್ಟುವ ಗ್ರಾಮಸ್ಥರ ಪೈಕಿ ಮಹಿಳೆಯರು ಸಹ ರಾಮಪ್ಪ ದೇವರನ್ನು ರೇಗಿಸುವ ಕೆಲಸ ಮಾಡುವರು.

ನಿಟ್ಟೂರು ಹೋಬಳಿಯ ಪತ್ರೆಮತ್ತಿಘಟ್ಟ ಗ್ರಾಮದಲ್ಲಿ ರಾಮದೇವರ ಮೂಲ ದೇಗುಲವಿದ್ದು ಇಲ್ಲಿ ಹರಕೆ ಕೊಟ್ಟಿರುವ ಭಕ್ತರು ದಾಸೋಹ ವ್ಯವಸ್ಥೆ ಮಾಡುತ್ತಾರೆ, ಆದರೆ ತೊರೇಹಳ್ಳಿಯಲ್ಲಿರುವ ರಾಮಪ್ಪ ದೇವರ ದೇಗುಲದಲ್ಲಿ ಮುಖವಾಡವೇ ಮೂಲ ವಿಗ್ರಹವಾಗಿದೆ, ಪೆಟ್ಟಿಗೆಯಲ್ಲಿರಿಸುವ ರಾಮಪ್ಪ ಮುಖವಾಡವನ್ನು ವರ್ಷದಲ್ಲಿ ಎರಡು ಬಾರಿ ಗೌರಿಹಬ್ಬ ಮತ್ತು ಮಾರಮ್ಮನ ಹಬ್ಬದಲ್ಲಿ ಮಾತ್ರ ಹೊರ ತೆಗೆಯಲಾಗುವುದು ಮತ್ತು ನಾಯಕ ಸಮುದಾಯದವರ ಸಾವಿನ ಮನೆಯಲ್ಲಿ ಸೂತಕ ಕಳೆಯಲು ಮತ್ತು ಹೆಣ್ಣು ಮಕ್ಕಳ ವಸಗೆ ಕಾರ್ಯಕ್ರಮದಲ್ಲಿ ಪೂಜೆಗೆ ಕೂಡ ರಾಮಪ್ಪ ದೇವರನ್ನು ಪೆಟ್ಟಿಗೆಯಿಂದ ಹೊರ ತರುವು ವಿಶೇಷ, ಈ ಜಾತ್ರೆಯಲ್ಲಿ ಮುಳ್ಳಿನ ಮೇಲೆ ದೇವರು ಕುಣಿಯುವುದು ನೋಡುವುದೇ ಬಹಳ ಸೊಬಗು, ಸಾವಿರಾರು ಭಕ್ತರು ಆಗಮಿಸಿ ತಮ್ಮ ಬೇಡಿಕೆ ಈಡೇರಿಕೆಗಾಗಿ ಹರಕೆ ಕಟ್ಟಿಕೊಳ್ಳುವ ಮೂಲಕ ದೇವರಿಗೆ ಭಕ್ತ ಸಮರ್ಪಿಸುತ್ತಾರೆ.

Get real time updates directly on you device, subscribe now.

Comments are closed.

error: Content is protected !!