ಮರದಿಂದ ಬಿದ್ದು ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು

39

Get real time updates directly on you device, subscribe now.


ಕೊರಟಗೆರೆ: ಹಲಸಿನಕಾಯಿ ಕೀಳಲು ಹೋಗಿ ಮರ ಹತ್ತಿದ ಕೂಲಿ ಕಾರ್ಮಿಕ ಮರದಿಂದ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ನೀಲಗೊಂಡನಹಳ್ಳಿ ಗ್ರಾ ಪಂಚಾಯಿತಿ ವ್ಯಾಪ್ತಿಯ ಅಳಾಲಸಂದ್ರ ಗ್ರಾಮದ ತೋಟವೊಂದರಲ್ಲಿ ಹಲಸಿನ ಮರದಿಂದ ಕಾಲು ಜಾರಿ ಬಿದ್ದಿದ್ದು ಹುಳಸೊಪ್ಪಿನ ಹಳ್ಳಿ ಗ್ರಾಮದ ವೆಂಕಟಶಾಮಯ್ಯ ಮಗನಾದ ಮಧುಸೂಧನ್ ಮೃತ ವ್ಯಕ್ತಿಯಾಗಿದ್ದಾನೆ. ತೋಟದ ಮಾಲೀಕ ಬಸವರಾಜು ಕೂಲಿ ಕಾರ್ಮಿಕನಿಗೆ ಮರ ಹತ್ತಲು ಬರದೆ ಇದ್ದರೂ ಮರ ಹತ್ತಿಸಿದ್ದಾನೆ, ಕಾಲು ಜಾರಿ ಬಿದ್ದ ಕ್ಷಣವೇ ಸ್ಥಳದಲ್ಲೇ ಮೃತಪಟ್ಟಿರುವುದನ್ನು ಕಂಡು ಮಾಲೀಕ ಯಾರಿಗೂ ವಿಷಯ ತಿಳಿಸದೆ ನನಗೆ ಸಂಬಂಧವೇ ಇಲ್ಲದ ರೀತಿಯಲ್ಲಿ ತೋಟದ ಮಾಲೀಕ ವರ್ತಿಸಿದ್ದಾನೆ.

ಪ್ರತಿ ದಿನವೂ ಕೆಲಸಕ್ಕೆ ಬರುವುದಿಲ್ಲ ಎಂದರು ಸಹ ಬಲವಂತವಾಗಿ ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿ ತನ್ನ ತೋಟದಲ್ಲಿ ಮಾಲೀಕ ಕೆಲಸ ಮಾಡಿಸಿಕೊಳ್ಳುತ್ತಿದ್ದ, ಮರ ಹತ್ತಲು ಬರದೆ ಇದ್ದರೂ ಮರ ಹತ್ತಲು ತಿಳಿಸಿದ್ದು ಮರದಿಂದ ಕಾಲು ಜಾರಿ ಬಿದ್ದ ಕ್ಷಣವೇ ಸ್ಥಳದಲ್ಲೇ ಮೃತಪಟ್ಟಿದ್ದಾನೆ, ಬೆಳಗ್ಗೆ 7.45ರ ಸಮಯದಲ್ಲಿ ಈ ಘಟನೆ ನಡೆದಿದೆ, ಮಧ್ಯಾಹ್ನ ಕಳೆದರೂ ಯಾರಿಗೂ ಮಾಹಿತಿ ನೀಡದೆ ಊರಿನ ಪ್ರಮುಖ ವ್ಯಕ್ತಿಗಳ ಜೊತೆ ಸೇರಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ.

ಊರಿನ ಜನರಿಗೆ ಮಾಹಿತಿ ತಿಳಿಯುತ್ತಿದ್ದಂತೆ ಏನು ಗೊತ್ತಿಲ್ಲದ ಹಾಗೆ ಸ್ಥಳಕ್ಕೆ ತೋಟದ ಮಾಲೀಕ ಬಂದಿದ್ದು, ಕೂಲಿ ಕಾರ್ಮಿಕ ಮಧುಸೂಧನ್ ತನ್ನ ತಾಯಿಯ ಆರೋಗ್ಯ ನೋಡಿಕೊಂಡು ಜೀವನ ಸಾಗಿಸುತ್ತಿದ್ದ, ಆತನ ತಾಯಿ ಮಗನಿಗೆ ಮದುವೆ ಮಾಡಿ ಸಂತೋಷ ಕಾಣಲು ಕನಸು ಕಟ್ಟಿಕೊಂಡಿದ್ದು ಈಗ ಮಗನ ಸಾವಿನಿಂದ ಸಾಕಷ್ಟು ನೋವು ಅನುಭವಿಸುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ ಕೋಳಾಲ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರತಿದಿನ ಮಧುಸೂಧನ್ ತನ್ನ ತೋಟದ ಕೆಲಸಕ್ಕೆ ಬರುತ್ತಿದ್ದ, ನನಗೆ ಹೊರಗಡೆ ತಿಂಡಿ ತಿನ್ನುವ ಅಭ್ಯಾಸವಿಲ್ಲ, ತೋಟಕ್ಕೆ ನೀರು ಬಿಡುವಂತೆ ತಿಳಿಸಿ ಮನೆಗೆ ತೆರಳಿದೆ, ಕೆಲಸಗಾರನಿಗೂ ತಿಂಡಿ ತಂದಾಗ ಅಷ್ಟೊತ್ತಿಗೆ ಮರದಡಿ ಬಿದ್ದೋಗಿದ್ದ, ಕೂಡಲೇ ಸ್ನೇಹಿತರಿಗೂ ಕರೆ ಮಾಡಿ ತಿಳಿಸಿದ್ದೇನೆ, ಸ್ವಲ್ಪ ಸಮಯದ ನಂತರವೇ ಈ ಘಟನೆ ಗೊತ್ತಾಗಿರುವುದು, ನಾನು ಯಾವ ಹಲಸಿನಕಾಯಿ ಕೀಳುವುದಕ್ಕೂ ಹೇಳಿಲ್ಲ, ನನಗೆ ಮೊಟ್ಟ ಮೊದಲು ಆರೋಗ್ಯವೇ ಸರಿ ಇಲ್ಲ.
-ಬಸವರಾಜು, ತೋಟದ ಮಾಲೀಕ.

ನನ್ನ ಪತಿ ಮುಂಚೆಯೇ ನಿಧನರಾಗಿದ್ದರು, ಒಬ್ಬನೇ ಮಗನೆಂದು ಬಹಳ ಪ್ರೀತಿಯಿಂದ ಸಾಕಿದ್ದೆ, ನನ್ನ ಮಗ ಕೆಲಸಕ್ಕೆ ಬರುವುದಿಲ್ಲ ಎಂದರೂ ಈ ತೋಟದ ಮಾಲೀಕ ಬಸವರಾಜು ಎಂಬಾತ ಬಿಡದೇ ಕರೆದುಕೊಂಡು ಹೋಗುತ್ತಿದ್ದ, ನನಗೆ ಕಣ್ಣಿನ ಸಮಸ್ಯೆ ಬೇರೆ ಇತ್ತು, ಇವತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದ, ಈಗ ನೋಡಿದರೆ ಅವನೇ ಇಲ್ಲ, ನನಗೆ ಇನ್ಯಾರು ದಿಕ್ಕು.
-ರಂಗಮ್ಮ , ಕೂಲಿ ಕಾರ್ಮಿಕನ ತಾಯಿ.

Get real time updates directly on you device, subscribe now.

Comments are closed.

error: Content is protected !!