ಟೆಕ್ವಾಂಡೋ ಸ್ಪರ್ಧೆಯಲ್ಲಿ ತುಮಕೂರು ಸ್ಪರ್ಧಿ ಸಾಧನೆ

????????????????????????????????????
24

Get real time updates directly on you device, subscribe now.

????????????????????????????????????

ತುಮಕೂರು: ಕಳೆದ ಮಾರ್ಚ್ 9- 10 ಮತ್ತು 11 ರಂದು ಒರಿಸ್ಸಾದ ಕಟಕ್ ನಗರದಲ್ಲಿ ನಡೆದ ಮೊದಲನೇಯ ರಾಷ್ಟ್ರೀಯ ಖೇಲೋ ಇಂಡಿಯಾ ಹೆಣ್ಣು ಮಕ್ಕಳ ಟೆಕ್ವಾಂಡೋ ಸ್ಪರ್ಧೆಯಲ್ಲಿ ತುಮಕೂರಿನ ವಾರಿಯರ್ಸ್ ಟೆಕ್ವಾಂಡೋ ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಲಕ್ಷ್ಮಿ ಗೋಕುಲ್ ಅವರು ಪ್ರಥಮ ಬಹುಮಾನ ಪಡೆದು, ಚಿನ್ನದ ಪದಕ ಪಡೆಯುವ ಮೂಲಕ ರಾಜ್ಯಕ್ಕೆ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕುಮಾರಿ ಲಕ್ಷ್ಮಿ ಗೋಕುಲ್ ಅವರ ಸಾಧನೆ ಶ್ಲಾಸಿ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಂಜಾನೆ ಗೆಳೆಯರ ಬಳಗದವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.
ಲಕ್ಷ್ಮಿ ಗೋಕುಲ್ ಅವರ ಸಾಧನೆ ಕುರಿತು ಮಾತನಾಡಿದ ಅಂತಾರಾಷ್ಟ್ರೀಯ ಕಬ್ಬಡಿ ತರಬೇತುದಾರ ಇಸ್ಮಾಯಿಲ್, ಖೇಲೋ ಇಂಡಿಯಾದಲ್ಲಿ ಮೂರು ವಿಭಾಗಗಳಲ್ಲಿದ್ದು ಖೇಲೋ ಇಂಡಿಯಾ ಯೂತ್ ಗೇಮ್, ಖೇಲೋ ಇಂಡಿಯಾ ಸ್ಕೂಲ್ ಗೇಮ್, ಖೇಲೋ ಇಂಡಿಯೂ ಯೂನಿರ್ವಸಿಟಿ ಗೇಮ್ ಎಂದು ವಯಸ್ಸಿನ ಆಧಾರದಲ್ಲಿ ವಿಂಗಡಿಸಲಾಗಿದೆ, 14 ವಷ, 17 ವರ್ಷ, 19 ವರ್ಷ ಮತ್ತು 21 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ, ಕ್ರೀಡಾ ಚಟುವಟಿಕೆಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಮೆಡಲ್ ಮಾಡಿದ ಯುವ ಜನತೆಗೆ ಶೈಕ್ಷಣಿಕವಾಗಿ ಮೆಡಿಕಲ್ ನಲ್ಲಿ ಮತ್ತು ಇಂಜಿನಿಯರಿಂಗ್ ನಲ್ಲಿ ಸ್ಪೋರ್ಟ್ಸ್ ಕೋಟಾ ಸಹ ಇದೆ, ಪ್ರತಿವರ್ಷ 15 ಜನ ಮೆಡಿಕಲ್ ಮತ್ತು 150ಕ್ಕೂ ಹೆಚ್ಚು ಜನ ಇಂಜಿನಿಯರಿಂಗ್ ಪ್ರವೇಶವನ್ನು ಕ್ರೀಡಾ ವಿಭಾಗದಿಂದ ಪಡೆಯುತ್ತಿದ್ದಾರೆ, ಖೇಲೋ ಇಂಡಿಯಾ ಯೂತ್ ಗೇಮ್ಸ್ನಲ್ಲಿ ಕು.ಲಕ್ಷ್ಮಿ ಗೋಕುಲ ಒಳ್ಳೆಯ ಪ್ರದರ್ಶನ ನೀಡಿ, ಚಿನ್ನದ ಪದಕ ಪಡೆದಿದ್ದಾರೆ, ಇವರಿಗೆ ತರಬೇತಿ ನೀಡಿದ ಜಗದೀಶ್ ಅವರಿಗೆ ಹಾಗೂ ಇವರ ಕ್ರೀಡಾ ಸಾಧನೆಗೆ ಬೆನ್ನೆಲುಬಾಗಿ ನಿಂತ ಇವರ ತಂದೆ ಗೋಕುಲ್ ಮಂಜುನಾಥ್ ಅವರಿಗೂ ಕ್ರೀಡಾ ಇಲಾಖೆ ಹಾಗೂ ಮುಂಜಾನೆ ಗೆಳೆಯರ ಬಳಗದವತಿಯಿಂದ ಹೃಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಕು.ಲಕ್ಷ್ಮಿ ಗೋಕುಲ್ ಅವರ ಕ್ರೀಡಾ ಸಾಧನೆ ಕುರಿತಂತೆ ಮುಂಜಾನೆ ಗೆಳೆಯರ ಬಳಗದ ಧನಿಯಕುಮಾರ್, ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್ ಮಾತನಾಡಿ, ಅವರು ಮುಂದೆ ಮತ್ತಷ್ಟು ಸಾಧನೆಯ ಮೆಟ್ಟಿಲು ಏರಲೆಂದು ಶುಭ ಹಾರೈಸಿದರು.
ಈ ವೇಳೆ ತುಮಕೂರು ಪಿಟ್ನೆಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ರಾಜಕುಮಾರ್, ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ರಾಮನಾಥ್, ಖಜಾಂಚಿ ವಾಸುದೇವ್ ಇನ್ನಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!