ಕುಣಿಗಲ್: ಚುನಾವಣಾ ನೀತಿ ಸಂಹಿತಿ ಜಾರಿ ಇರುವ ಹಿನ್ನೆಲೆಯಲ್ಲಿ ಕ್ರಾಂತಿಯೋಗಿ ಬಸವೇಶ್ವರರ ಜಯಂತಿ ಕಾರ್ಯಕ್ರಮವನ್ನು ತಾಲೂಕು ಆಡಳಿತ ಅತ್ಯಂತ ಸರಳವಾಗಿ ಆಚರಿಸಿತು.
ತಾಲೂಕು ಆಡಳಿತದ ವತಿಯಿಂದ ತಾಲೂಕು ಆಡಳಿತ ಸೌಧದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು, ತಹಶೀಲ್ದಾರ್ ಯೋಗೇಶ್ವರ್ ಬಸವೇಶ್ವರ, ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು, ಉಪ ತಹಶೀಲ್ದಾರ್ ರವೀಂದ್ರ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಪುರಸಭೆ ಆಡಳಿತದ ವತಿಯಿಂದ ಬಸವ ಜಯಂತಿ ಹಿನ್ನೆಲೆಯಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದ್ದು ಆರೋಗ್ಯ ನಿರೀಕ್ಷಕ ಶ್ರೀಕಾಂತ್ ಮತ್ತು ಸಿಬ್ಬಂದಿ ಈ ಹಿನ್ನೆಲೆಯಲ್ಲಿ ಗುರುವಾರವೇ ಸೂಚನೆ ನೀಡಿದ್ದರಿಂದ ಬಹುತೇಕ ಮಾಂಸ ಮಾರಾಟ ಮಳಿಗೆಗಳು ಮುಚ್ಚಿದ್ದು ಕೋಳಿ ಮಾಂಸ ಮಾರಾಟಗಾರರು ಸಹ ಮುಚ್ಚಿದ್ದವು.
ತಾಲೂಕು ವೀರಶೈವ ಸಮಾಜದಿಂದ ಪ್ರತಿ ವರ್ಷವೂ ಅದ್ದೂರಿಯಾಗಿ ಬಸವೇಶ್ವರ ಜಯಂತಿ ಆಚರಿಸಲಾಗುತ್ತಿದ್ದು, ನೀತಿ ಸಂಹಿತೆ ಕಾಲಾವಧಿ ಮುಗಿದ ನಂತರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದೆಂದು ಸಮಾಜದ ಬಾಂಧವರು ತಿಳಿಸಿದ್ದಾರೆ. ಬಸವ ಜಯಂತಿಗೆ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಬಸವ ಜಯಂತಿ ಆಚರಣೆ ಅರ್ಥಪೂರ್ಣವಾಗಿ ಆಚರಿಸದೆ ಸರ್ಕಾರದ ಸುತ್ತೋಲೆಯ ಅಂಶದ ಪಾಲನೆಗಾಗಿ ಆಚರಿಸಿರುವುದು ಬಹುತೇಕ ಬಸವೇಶ್ವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು, ನೀತಿ ಸಂಹಿತೆ ಇದ್ದ ಮಾತ್ರಕ್ಕೆ ಇಷ್ಟೊಂದು ಸರಳ ರೀತಿಯಲ್ಲಿ ಜಯಂತಿ ಆಚರಣೆ ನಿಜಕ್ಕೂ ಖೇದಕರ ಎಂದು ವೀರಶೈವ ಸಮಾಜದ ಮುಖಂಡರು, ಬಸವೇಶ್ವರರ ಅಭಿಮಾನಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ.
Comments are closed.