ಕೊರಟಗೆರೆ: 2023- 24ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಾರಾದ ತಾಲೂಕಿನ 4 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದು ಪೋಷಕರ ಎಚ್ಚರಿಕೆಯಿಂದ ಭಾರಿ ಅನಾಹುತ ತಪ್ಪಿದೆ.
ಗುರುವಾರ ಬೆ.10.30ಕ್ಕೆ ಕರ್ನಾಟಕ ರಾಜ್ಯ ಪ್ರೌಢಶಿಕ್ಷಣಾ ಪರೀಕ್ಷಾ ಮಂಡಳಿಯು ಎಸ್ ಎಸ್ ಎಲ್ ಸಿ ಫಲಿತಾಂಶ ಬಿಡುಗಡೆ ಮಾಡಿತ್ತು, ಪರೀಕ್ಷೆಯಲ್ಲಿ ಅನುತ್ತೀರ್ಣಾಗೊಂಡಿದ್ದೇವೆ ಎಂದು 4 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದು, ಪೋಷಕರ ಎಚ್ಚರಿಕೆಯಿಂದ ಸಮಯಕ್ಕೆ ಸರಿಯಾಗಿ ಕರೆತಂದು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊಡಿಸಿದ ಚಿಕಿತ್ಸೆಯಿಂದ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತಾಲೂಕಿನ ಬುಕ್ಕಪಟ್ಟಣ ಪ್ರೌಢಶಾಲೆ, ಸಿದ್ದರಬೆಟ್ಟದ ಅಂಬೇಡ್ಕರ್ ಪ್ರೌಢಶಾಲೆ, ಎಲೆರಾಂಪುರದ ಪ್ರೌಢಶಾಲೆ, ಕೊರಟಗೆರೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿರುವ ವಿದ್ಯಾರ್ಥಿಗಳಾಗಿದ್ದಾರೆ, ಆತ್ಮಹತ್ಯೆಗೆ ಯತ್ನಿಸಿರುವುದನ್ನು ಪೋಷಕರು ಸಮಯಕ್ಕೆ ಸರಿಯಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತಮ್ಮ ಮಕ್ಕಳ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಈ ಬಾರಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಕುಸಿತ ಕಂಡಿದೆ, ಕಾರಣ ಕೋವಿಡ್ ಸಮಯದಲ್ಲಿ ವ್ಯರ್ಥವಾದ ಶಿಕ್ಷಣವೇ ಈ ಬದಲಾವಣೆಗೆ ಕಾರಣವಾಗಿದೆ, ಪರೀಕ್ಷೆಯಲ್ಲಿ ಹಲವಾರು ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ, ಈ ಬಾರಿ ಶಿಕ್ಷಣ ಇಲಾಖೆ ಅನುತ್ತೀರ್ಣ ವಿದ್ಯಾರ್ಥಿಗಳಿಗೆ 2 ಬಾರಿ ಅವಕಾಶ ನೀಡಿದೆ, ಆದರೆ ವಿದ್ಯಾರ್ಥಿಗಳಾದ ನೀವುಗಳು ಉತ್ತೀರ್ಣರಾಗುವುದರ ಕಡೆ ಗಮನ ಹರಿಸಬೇಕು, ಆತ್ಮಹತ್ಯೆಗೆ ಯತ್ನಿಸುವುದಲ್ಲ, ಪೋಷಕರು ಸಹ ಇಂತಹ ಸಮಯದಲ್ಲಿ ಮಕ್ಕಳನ್ನು ಒಬ್ಬಂಟಿಯಾಗಿ ಬಿಡದೆ ಸಮಾಧಾನ ಪಡಿಸಿ ಧೈರ್ಯ ತುಂಬುವ ಕೆಲಸ ಮಾಡಿ ಸಂತೋಷದಿಂದ ಕಾಣಬೇಕು ಎಂದು ವೈದ್ಯರು ಮತ್ತು ಶಿಕ್ಷಕರು ಮಕ್ಕಳ ಪೋಷಕರಿಗೆ ಸಲಹೆ ನೀಡಿದರು.
Comments are closed.