ಬೆಂಕಿಯಲ್ಲಿ ಬೆಂದು ಪ್ರಾಣ ಬಿಟ್ಟ ಎತ್ತುಗಳು

19

Get real time updates directly on you device, subscribe now.


ಚಿಕ್ಕನಾಯಕನಹಳ್ಳಿ: ಬಸವ ಜಯಂತಿ ಹಬ್ಬದಂದು ಪೂಜೆ ಸಲ್ಲಿಸಿ ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ದೇಶಿ ಎತ್ತುಗಳು ಬೆಂಕಿಯಲ್ಲಿ ಬೆಂದು ಸಾವನ್ನಪ್ಪಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಚಿಕ್ಕನಾಯಕನ ಹಳ್ಳಿ ಪಟ್ಟಣದ ನಿರ್ವಾಣಸ್ವಾಮಿ ಮಠದ ಸಮೀಪದಲ್ಲಿನ ನಿವಾಸಿ ರೈತ ನರಸಿಂಹಮೂರ್ತಿ ಅವರ ದನದ ಕೊಟ್ಟಿಗೆಗೆ ಶುಕ್ರವಾರ ಮಧ್ಯ ರಾತ್ರಿ ಬೆಂಕಿ ತಗುಲಿದ್ದು, ಕೊಟ್ಟಿಗೆಯಲ್ಲಿ ಬಸವ ಜಯಂತಿಯ ಅಂಗವಾಗಿ ಪೂಜೆ ಸಲ್ಲಿಸಿ ಕಟ್ಟಿದ್ದ ಎತ್ತುಗಳು ನೋಡ ನೋಡುತ್ತಲೆ ಬೆಂಕಿಯಲ್ಲಿ ನರಳುತ್ತ ಪ್ರಾಣ ಬಿಟ್ಟಿವೆ ಹಾಗೂ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಕಿಟಕಿ ಬಾಗಿಲು, ಮರ ಮುಟ್ಟುಗಳು ಸುಟ್ಟು ಹೋಗಿವೆ, ಘಟನಾ ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಭೇಟಿ ನೀಡಿ ರೈತ ನರಸಿಂಹ ಮೂರ್ತಿಗೆ ಧೈರ್ಯ ತುಂಬಿದರು.
ಶುಕ್ರವಾರ ರಾತ್ರಿ ದನದ ಕೊಟ್ಟಿಗೆ ಮನೆಗೆ ಬೆಂಕಿ ಬಿದ್ದು ಜೋಡೆತ್ತುಗಳು ಕಣ್ಣ ಮುಂದೆಯೇ ಜೀವ ಬಿಟ್ಟವು, ಯಾರೋ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಅನುಮಾನವಿದೆ, ಜೀವನಕ್ಕೆ ಆಧಾರವಾಗಿದ್ದ ಎತ್ತುಗಳನ್ನು ಕಳೆದುಕೊಂಡಿದ್ದೇವೆ, ಮನೆಕಟ್ಟಲು ಶೇಖರಿಸಿದ್ದ ಕಿಟಕಿ ಬಾಗಿಲು ಮರಗಳು ಸಹ ಸುಟ್ಟು ಹೋಗಿವೆ ಎಂದು ಜೊಡೆತ್ತುಗಳನ್ನು ಕಳೆದುಕೊಂಡ ರೈತ ನರಸಿಂಹಮೂರ್ತಿ ಅಳಲು ತೋಡಿಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!