ತುಮಕೂರು: ಆರ್ಯವೈಶ್ಯ ಮಂಡಳಿ, ಕನ್ಯಾಕ ಪರಮೇಶ್ವರಿ ದೇವಸ್ಥಾನ ಸಮಿತಿ ಹಾಗೂ ವಾಸವಿ ಯುವ ಜನಸಂಘ ಸೇರಿದಂತೆ ಎಲ್ಲ ಸೋದರ ಸಂಸ್ಥೆಗಳ ಸಹಯೋಗದಲ್ಲಿ ಮೇ 12 ರಿಂದ 19 ರ ವರೆಗೆ 8 ದಿನಗಳ ಕಾಲ ವಾಸವಿ ಜಯಂತಿ ಕಾರ್ಯಕ್ರಮವನ್ನು ನಗರದ ಚಿಕ್ಕಪೇಟೆಯ ವಾಸವಿ ಅಮೃತ ಮಹಲ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ವಾಸವಿ ಯುವಜನ ಸಂಘದ ಅಧ್ಯಕ್ಷ ಜಿ.ಕೆ.ಲೋಕೇಶ್ ತಿಳಿಸಿದರು.
ನಗರದ ಗಾರ್ಡನ್ ರಸ್ತೆಯ ವಾಸವಿ ಶಾಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ 12 ರಂದು ಬೆಳಗ್ಗೆ 6 ರಿಂದ ವಿವಿಧ ಪೂಜಾ ಕಾರ್ಯ ಕ್ರಮ ನಡೆಯಲಿದ್ದು, ಸಂಜೆ ಗಣಪತಿ ಪೂಜೆ, ವಾಸ್ತುಹೋಮ, ದೇವತಾ ಕಾರ್ಯಕ್ರಮ ಹಾಗೂ ಮಕ್ಕಳಿಗೆ ವಾಸವಿ ವೇಷ ಮತ್ತು ವಿವಿಧ ವೇಷ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.
ರಾತ್ರಿ 7.30ಕ್ಕೆ ವಾಸವಿ ಜಯಂತಿ ಸಮಾರಂಭಕ್ಕೆ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಆರ್.ಎಲ್. ರಮೇಶ್ಬಾಬು ಚಾಲನೆ ನೀಡುವರು, ಮುಖ್ಯ ಅತಿಥಿಗಳಾಗಿ ಟಿಎಂಸಿಸಿ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಪಾಲ್ಗೊಳ್ಳುವರು.
ಮೇ 13 ರಂದು ಬೆಳಗ್ಗೆ 6ಕ್ಕೆ ಸುಪ್ರಭಾತ, ಕುಲದೇವಿ ವಾಸವಿ ಮಾತೆ, ಪರಿವಾರ ದೇವರುಗಳಿಗೆ ಅಭಿಷೇಕ, ರುದ್ರಾಭಿಷೇಕ ಮತ್ತು ರುದ್ರಹೋಮ, ಪೂಜಾದಿ ನೆರವೇರಲಿವೆ, ಸಂಜೆ 7ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ಭರತನಾಟ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ನಗರೇಶ್ವರನ ಆರಾಧಕಿ ಕನ್ನಿಕೆಗೆ ನಾಗ ಕನ್ನಿಕೆ ಅಲಂಕಾರ ಏರ್ಪಡಿಸಲಾಗಿದೆ, ಮೇ 14ಕ್ಕೆ ತ್ರಿಶಕ್ತಿ ಅಲಂಕಾರ, ಮೇ 15ಕ್ಕೆ ಮಯೂರಿ ಅಲಂಕಾರ, ಭರತನಾಟ್ಯ ಕಾರ್ಯಕ್ರಮ, ಮೇ 16 ಸ್ವರ್ಣಭೂಷಿತೆ ಅಲಂಕಾರ, ಊಂಜಲ್ ಸೇವೆ, ಮೇ 17 ಕುಬೇರ ಲಕ್ಷ್ಮಿ ಅಲಂಕಾರ, ಮೇ 18 ರಂದು ವಿಶೇಷ ಪುಷ್ಪಾಲಂಕಾರ, ಸಂಜೆ ರಾಜಬೀದಿ ಉತ್ಸವ, ಮೇ 19 ರಂದು ಗಂಗಾದೇವಿ ಅಲಂಕಾರ, ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ, ನಂಜುಂಡೇಶ್ವರ ಉಯ್ಯಾಲೋತ್ಸವ ನಡೆಯಲಿದೆ ಎಂದರು.
ಸಮಾರೋಪ ಸಮಾರಂಭವನ್ನು ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಆರ್.ಎಲ್.ರಮೇಶ್ ಬಾಬು ಉದ್ಘಾಟಿಸುವರು, ಅತಿಥಿಗಳಾಗಿ ಎನ್.ಎಸ್. ಜಯಕುಮಾರ್, ಗೋವಿಂದರಾಜು, ಸಿ.ಆರ್. ಮೋಹನ್ ಕುಮಾರ್, ಸಿ.ಕೆ. ಬ್ರಹ್ಮಾನಂದ್, ಟಿ.ಟಿ.ಸತ್ಯನಾರಾಯಣ, ಆರ್.ಎನ್. ನಾಗೇಂದ್ರ, ಡಿ.ಎ.ಮೋಹನ್, ಶೇಷುರಮೇಶ್, ಧನಲಕ್ಷ್ಮೀ ಅಮರನಾಥ್ ಪಾಲ್ಗೊಳ್ಳುವರು, ಅಧ್ಯಕ್ಷತೆಯನ್ನು ಜಿ.ಕೆ.ಲೋಕೇಶ್ ವಹಿಸುವರು ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಾಸವಿ ಸಮಾಜದ ಮುಖಂಡ ರಮೇಶ್ ಬಾಬು, ಸಿ.ಆರ್.ಮೋಹನ್ಕುಮಾರ್, ಬ್ರಹ್ಮಾನಂದ, ಶೇಷುರಮೇಶ್, ಈಶ್ವರ್ ಮತ್ತಿತರರು ಇದ್ದರು.
Comments are closed.