ಬೋನಿನಲ್ಲಿ ಸೆರೆಯಾದ ಕರಡಿ

22

Get real time updates directly on you device, subscribe now.


ಮಧುಗಿರಿ: ರೈತರಿಗೆ ಉಪಟಳ ನೀಡುತ್ತಿದ್ದ ಕರಡಿಯೊಂದು ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿನಲ್ಲಿ ಸೆರೆಯಾಗಿದೆ.
ತಾಲೂಕಿನ ಕಸಬಾ ವ್ಯಾಪ್ತಿಯ ಮರುವೇಕೆರೆ ಗ್ರಾಮ ಪಂಚಾಯತಿಗೆ ಸೇರಿದ ಲಕ್ಷ್ಮೀಪುರದ ಜಮೀನಿನಲ್ಲಿದ್ದ ಅಲಸಿನ ಹಣ್ಣು ಹಾಗೂ ಕೊಳವೆ ಬಾವಿಯ ನೀರು ಕುಡಿಯಲು ಪ್ರತಿ ರಾತ್ರಿ ಬರುತ್ತಿದ್ದ ಕರಡಿಯೊಂದು ಬೋನಿಗೆ ಬಿದ್ದಿದೆ.
ಅಕ್ಕಪಕ್ಕದ ಜಮೀನುಗಳಿಗೆ ನೀರು ಹಾಯಿಸಲು ಹೋಗುತ್ತಿದ್ದ ರೈತರು ಕರಡಿ ಕಂಡು ಗಾಬರಿಗೊಂಡಿದ್ದರು ಮತ್ತು ಆಗಾಗ ಕರಡಿ ದಾಳಿ ಮಾಡುತ್ತಿತ್ತು, ಆದರೆ ಕರಡಿಯಿಂದ ಯಾವುದೇ ಪ್ರಾಣಾಪಯ ಸಂಭವಿಸಿರಲಿಲ್ಲ.
ಗ್ರಾಮಸ್ಥರು ಕರಡಿ ಹಿಡಿಯುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಇಟ್ಟಿದ್ದಬೋನಿಗೆ ಕರಡಿ ಬಿದ್ದಿದೆ, ಕರಡಿಯನ್ನು ಬೆಂಗಳೂರಿನ ಜೈವಿಕ ಉದ್ಯಾವನಕ್ಕೆ ಕಳುಹಿಸಿ ಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸುರೇಶ್, ಉಪ ವಲಯ ಅರಣ್ಯಾಧಿಕಾರಿ ಮುತ್ತುರಾಜು, ಸುದರ್ಶನ್, ಸಿಬ್ಬಂದಿ ಶ್ರೀಧರ್, ಶಿವರಾಜ್, ಮುಖಂಡರಾದ ಮೂಡ್ಲಗೀರೀಶ್ ಹಾಗೂ ಗ್ರಾಮಸ್ಥರು ಇದ್ದರು.

Get real time updates directly on you device, subscribe now.

Comments are closed.

error: Content is protected !!