ಸಿಡಿಲು ಬಡಿದು 20 ಕುರಿ ಸಾವು

27

Get real time updates directly on you device, subscribe now.


ಹುಳಿಯಾರು: ಸಿಡಿಲು ಬಡಿದು 20 ಕುರಿ ಸಾವನ್ನಪ್ಪಿದ ಘಟನೆ ಕಂದಿಕೆರೆ ಹೋಬಳಿ ರಾಮನಹಳ್ಳಿ ಗ್ರಾಪಂ ವ್ಯಾಪ್ತಿಯ ಹನುಮಂತನಹಳ್ಳಿಯಲ್ಲಿ ಜರುಗಿದೆ.
ಹನುಮಂತನಹಳ್ಳಿಯ ಜಯಣ್ಣ ಎಂಬುವವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ, ಇವರು ಎಂದಿನಂತೆ ತಮ್ಮ 55 ಕುರಿ ಮೇಯಿಸಲು ಊರಿನ ಸಮೀಪದ ಜಮೀನಿಗೆ ಹೋಗಿದ್ದಾರೆ, ಈ ವೇಳೆ ಮಳೆ ಗಾಳಿ ಆರಂಭವಾಗಿದ್ದು ಜಮೀನಿನ ಪಕ್ಕದ ರಸ್ತೆ ಬದಿಯಲ್ಲಿದ ಹುಣಸೆ ಮರಗಳ ಕೆಳಗೆ ಕುರಿಗಳನ್ನು ನಿಲ್ಲಿಸಿಕೊಂಡು ನಿಂತಿದ್ದಾರೆ.
3 ಹುಣಸೇ ಮರದ ಕೆಳಗೂ ಹದಿನೈದಿಪ್ಪತ್ತು ಕುರಿಗಳು ನಿಂತಿವೆ, ಒಂದು ಕುರಿ ಹಿಂಡಿನ ಜೊತೆಗೆ ಜಯಣ್ಣ ನಿಂತಿದ್ದಾರೆ, ಇದೇ ಸಂದರ್ಭದಲ್ಲಿ ಜಯಣ್ಣನಿಂದ 20 ಅಡಿ ದೂರದಲ್ಲಿ ನಿಂತಿದ್ದ ಕುರಿ ಹಿಂಡಿಗೆ ಸಿಡಿಲು ಬಡಿದಿದೆ, ಪರಿಣಾಮ 20 ಕುರಿ ಸಾವನ್ನಪ್ಪಿದ್ದು ಮತ್ತೊಂದು ಮರದ ಕೆಳಗೆ ನಿಂತಿದ್ದ ಜಯಣ್ಣ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ತಿಮ್ಮನಹಳ್ಳಿ ಪಶು ಆಸ್ಪತ್ರೆಯ ಡಾ.ಶಾಂತೇಶ್ ಹಾಗೂ ಚಿಕ್ಕನಾಯಕನ ಹಳ್ಳಿ ಪಿಎಸ್ ಐ ತ್ಯಾಗರಾಜು ಭೇಟಿ ನೀಡಿ ಘಟನೆಯ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶೀಘ್ರದಲ್ಲೇ ಪರಿಹಾರ
ಜಯಣ್ಣ ಅವರು ಕುರಿ ಸಾಕಾಣಿಕೆಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ, ಪ್ರಸ್ತುತ 55 ಕುರಿ ಇವರ ಬಳಿಯಿದ್ದು ಇದರಲ್ಲಿ 20 ಕುರಿ ಸಿಡಿಲಿಗೆ ಬಲಿಯಾಗಿವೆ, ತಿಮ್ಮನಹಳ್ಳಿ ಪಶು ವೈದ್ಯರು ಪೋಸ್ಟ್ ಮಾಟಂ ಮಾಡಿ ವರದಿ ನೀಡಿದ್ದಾರೆ, ಈ ವರದಿಯನ್ವಯ ಸರ್ಕಾರಕ್ಕೆ ಮಾಹಿತಿ ನೀಡಿ ಪರಿಹಾರ ಕೊಡಿಸಲಾಗುವುದು, ಈ ಘಟನೆ ಪ್ರಕೃತಿ ವಿಕೋಪದ ಅಡಿಯಲ್ಲಿ ಬರುವುದರಿಂದ ಸಾವನ್ನಪ್ಪಿದ ಪ್ರತಿ ಕುರಿಗೆ 5 ಸಾವಿರದಂತೆ ಶೀಘ್ರವೇ ಪರಿಹಾರದ ಹಣ ಬರುತ್ತದೆ ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ರೆ.ಮ.ನಾಗಭೂಷಣ್ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!