ತೋಟಕ್ಕೆ ಅಕ್ರಮವಾಗಿ ನೀರಿನ ಸಂಪರ್ಕ

ಕಣ್ಮುಚ್ಚಿ ಕುಳಿತ ಗ್ರಾಮ ಪಂಚಾಯ್ತಿ ಅಧಿಕಾರಿಗಳು

35

Get real time updates directly on you device, subscribe now.


ಕೊರಟಗೆರೆ: ಬರಗಾಲದ ಸಂಕಷ್ಟದಿಂದ ತಾಲೂಕಿನಲ್ಲಿ ಕುಡಿಯುವ ನೀರಿಗೂ ಪರಿತಪಿಸುತ್ತಿದ್ದಾರೆ ಜನರು, ಆದರೆ ಸಾರ್ವಜನಿಕರು ಬಳಕೆ ಮಾಡುವ ನೀರನ್ನು ಬೆಂಗಳೂರು ಮೂಲದ ವ್ಯಕ್ತಿಯಿಂದ ತೋಟಕ್ಕೆ ಅಕ್ರಮವಾಗಿ ನೀರಿನ ಸಂಪರ್ಕ ಹಾಕಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಹಂಚಿಹಳ್ಳಿ ಗ್ರಾಪಂಯ ಹಂಚಿಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಬೆಂಗಳೂರು ಮೂಲದ ದೊಡ್ಡ ಮುನಿಯಪ್ಪ ಮಗ ಮರಿಯಪ್ಪ ಎಂಬುವವರ ತೋಟಕ್ಕೆ ಹಂಚಿಹಳ್ಳಿ ಗ್ರಾಮಸ್ಥರು ಕುಡಿಯುವ ನೀರಿನ ಬಳಕೆ ಮಾಡುವ ಪೈಪ್ ಲೈನ್ ಸಂರ್ಪಕಕ್ಕೆ ಸುಮಾರು ವರ್ಷಗಳಿಂದ ಅಕ್ರಮವಾಗಿ ಸುಮಾರು 2 ಇಂಚು ನೀರನ್ನು ತೋಟಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ.

ಈಗಾಗಲೇ ಹಂಚಿಹಳ್ಳಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ಸಾರ್ವಜನಿರಿಗೆ ನೀರಿನ ಸಮಸ್ಯೆ ಉಂಟಾಗಿತ್ತು, ನಾಗೇನಹಳ್ಳಿ ಸಮೀಪ ಇರುವ ಬೋರ್ ವೆಲ್ ನಿಂದ ಜಲಜೀವನ್ ಮಿಷನ್ ವತಿಯಿಂದ ಹಂಚಿಹಳ್ಳಿ ಗ್ರಾಮಕ್ಕೆ ನೀರು ಪೂರೈಸಲಾಗುತ್ತಿತ್ತು, ಗ್ರಾಮದಲ್ಲಿರುವ ಓವರ್ ಟ್ಯಾಂಕ್ ಗೆ ನೀರು ತುಂಬಲು ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿದೆ, ನೀರಿನ ನಿರ್ವಹಣೆ ಮಾಡಬೇಕಾದ ಗ್ರಾಪಂ ಅಧಿಕಾರಿಗಳು ಅಕ್ರಮವಾಗಿ ಖಾಸಗಿ ವ್ಯಕ್ತಿ ನೀರು ಬಳಕೆ ಮಾಡುತ್ತಿದ್ದರೂ ಮೌನವಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ನರ್ಸರಿಗೂ ಗ್ರಾಪಂ ನೀರು ಬಳಕೆ: ಈಗಾಗಲೇ ಹಂಚಿಹಳ್ಳಿ ಗ್ರಾಪಂಯಲ್ಲಿ ಖಾಸಗಿ ವ್ಯಕ್ತಿ ತನ್ನ ತೋಟಕ್ಕೆ ಸಾರ್ವಜನಿಕರ ನೀರನ್ನ ಬಳಕೆ ಮಾಡುತ್ತಿದ್ದು ಒಂದು ಕಡೆಯಾದರೆ ಇನ್ನೊಂದು ಕಡೆ ದೊಡ್ಡಮಲ್ಲಯ್ಯನ ಪಾಳ್ಯ ಗ್ರಾಮದ ಸಮೀಪ ನರ್ಸರಿಯಲ್ಲಿ ಸಸಿ ಬೆಳೆಸಲು ಇದೆ ಗ್ರಾಪಂನ ನೀರನ್ನ ಬಳಕೆ ಮಾಡುತ್ತಿದ್ದರೂ ಗ್ರಾಪಂ ಅಧಿಕಾರಿಗಳು ಮೌನವಾಗಿದ್ದಾರೆ, ಇವರ ಮೇಲೆ ಯಾವಾಗ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಪೊಲೀಸ್ ಠಾಣೆ ಮೆಟ್ಟಲೇರಿದ ಪ್ರಕರಣ
ತಾಲೂಕಿನಲ್ಲಿ ಬರಗಾಲದಿಂದ ಕುಡಿಯುವ ನೀರಿಗೆ ಹಾಹಕಾರ ಉಂಟಾಗಿದ್ದು, ಜಿಲ್ಲಾಡಳಿತ ನೀರಿನ ಸಮಸ್ಯೆ ಬಾರದಂತೆ ಕಾರ್ಯ ನಿರ್ವಹಿಸಿ ಎಂದು ತಿಳಿಸಿದ್ದಾರೆ, ಆದರೆ ಬೆಂಗಳೂರು ಮೂಲದ ವ್ಯಕ್ತಿ ತಮ್ಮ ತೋಟಕ್ಕೆ ಅಕ್ರಮವಾಗಿ ನೀರು ಬಳಕೆ ಮಾಡುತ್ತಿದ್ದಾರೆ ಎಂದು ಗ್ರಾಪಂ ಗಮನಕ್ಕೆ ಬಂದ ಮೇಲೆ ಗ್ರಾಪಂ ಅಧಿಕಾರಿಗಳು ಹಾಗೂ ಸದಸ್ಯರು ಕೊರಟಗೆರೆ ಪೊಲೀಸ್ ಠಾಣೆಗೆ ಲಿಖಿತ ಮೂಲಕ ಖಾಸಗಿ ವ್ಯಕ್ತಿ ಮೇಲೆ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

ಹಂಚಿಹಳ್ಳಿ ಗ್ರಾಮದಲ್ಲಿ ನಾಲ್ಕು ಬೋರ್ ವೆಲ್ ಇವೆ, ಒಂದು ಬೋರ್ ನಲ್ಲಿ ಮಾತ್ರ ನೀರು ಬರುತ್ತಿದ್ದು, ನಾಗೇನಹಳ್ಳಿ ಗ್ರಾಮದಿಂದ ಪೈಪ್ ಮಾಡಿ ನೀರು ಪೂರೈಕೆ ಮಾಡಲಾಗಿತ್ತು, ಓವರ್ ಹೆಡ್ ಟ್ಯಾಂಕ್ ಗೆ ನೀರು ಬಿಟ್ಟಾಗ ನೀರು ಬರದೆ ಇದ್ದಾಗ ಪರಿಶೀಲನೆ ಮಾಡಿದಾಗ ಮರಿಯಪ್ಪ ಎನ್ನುವವರ ತೋಟಕ್ಕೆ ನೀರು ಹೋಗುತ್ತಿರುವುದು ಬೆಳಕಿಗೆ ಬಂದಿದೆ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ.
-ಭೀಮರಾಜು, ಗ್ರಾಪಂ ಅಧ್ಯಕ್ಷ, ಹಂಚಿಹಳ್ಳಿ.

ಹಂಚಿಹಳ್ಳಿ ಗ್ರಾಮಕ್ಕೆ ಸುಮಾರು ಒಂದು ತಿಂಗಳಿಂದ ನೀರಿನ ಸಮಸ್ಯೆ ಉಂಟಾಗಿತ್ತು, ನೀರು ಎಲ್ಲಿಗೆ ಹೋಗುತ್ತಿದೆ ಎಂದು ಪರಿಶೀಲನೆ ಮಾಡಿದಾಗ ಅಕ್ರಮವಾಗಿ ಖಾಸಗಿ ವ್ಯಕ್ತಿಯ ತೋಟಕ್ಕೆ ಹೋಗುತ್ತಿರುವುದು ಕಂಡು ಬಂದಿದೆ, ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
-ರಮೇಶ್, ಪಿಡಿಒ, ಹಂಚಿಹಳ್ಳಿ ಗ್ರಾಪಂ.

Get real time updates directly on you device, subscribe now.

Comments are closed.

error: Content is protected !!