ತುರುವೇಕೆರೆ: ರಾಜಕೀಯ ಸ್ವಾರ್ಥಕ್ಕಾಗಿ ತನ್ನ ಸಹಚರರಿಗೆ ಕುಮ್ಮಕ್ಕು ನೀಡುವ ಏನೂ ಅರಿಯದ ನನ್ನ ಮಗನನ್ನು ಬಲಿಪಡೆದುಕೊಳ್ಳಲು ಸಂಚು ರೂಪಿಸಿದ್ದ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ಮೀರ್ ಸಾಧಿಕ್ ರಾಜಕಾರಣಿ ಎಂದು ಶಾಸಕ ಮಸಾಲ ಜಯರಾಮ್ ಕಿಡಿಕಾರಿದ್ದಾರೆ.
ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನಿಗೆ ನಾನು ಸಿ.ಎಸ್.ಪುರ ಹೋಬಳಿ ವ್ಯಾಫ್ತಿಯಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳನ್ನು ಕಂಡು ರಾಜಕೀಯವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಭೀತಿ ಶುರುವಾಗಿದೆ. ಈ ಹಿನ್ನಲೆಯಲ್ಲಿ ತನ್ನ ಹಿಂಬಾಲಕರನ್ನು ನನ್ನ ಕಾರ್ಯಕರ್ತರ ಹಾಗೂ ಕುಟುಂಬದವರ ವಿರುದ್ದ ಎತ್ತಿ ಕಟ್ಟುವ ಮೂಲಕ ಅಶಾಂತಿ ಮೂಡಿಸುತ್ತಿದ್ದಾರೆ. ಮಗನ ಮೇಲೆ ಹಲ್ಲೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ತಿಳಿದೂ ಸಹ ಕೈ ಕಟ್ಟಿ ಕೂರುವ ಕಠೋರ ಹೃದಯಿ ತಂದೆ ನಾನಲ್ಲ, ನನ್ನ ಕ್ಷೇತ್ರದ ಕಾಳಜಿ ಜೊತೆಗೆ ನನ್ನ ಮಗನ ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ ಆಗಿದೆ. ಮಗನ ರಕ್ಷಣೆ ವೇಳೆ ಸಕಾಲದಲ್ಲಿ ಆ ಜಾಗ ತಲುಪದಿದ್ದರೆ ಭಾರಿ ಅನಾಹುತ ನೆಡೆಯುತ್ತಿತ್ತು ಎಂದು ದುಃಖದಿಂದ ನುಡಿದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನ ದುರ್ನಡತೆಯನ್ನು ಸಹಿಸದ ಜನತೆ ಈಗಾಗಲೇ ಕೊಂಡಜ್ಜಿ,ಬ್ಯಾಲಹಳ್ಳಿ, ತುರುವೇಕೆರೆ, ಮತ್ತಿಘಟ್ಟ ಮತ್ತಿತರ ಕಡೆ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಹೊಡಿ ಬಡಿ ಸಂಸ್ಕೃತಿ ಅವರಿಗೆ ನೌಕರರ ಸಂಘದ ಅಧ್ಯಕ್ಷನಾದಾಗಿನಿಂದಲೂ ಇದೆ. ಇದೇ ಚಾಳಿಯನ್ನು ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶುರು ಮಾಡಿದ್ದಾನೆ. ಆತನ ವಿರುದ್ದ ದಾಖಲಾಗಿರುವ ನೂರಾರು ಪ್ರಕರಣಗಳು ಆತನ ಕ್ರಿಮಿನಲ್ತನವನ್ನು ಸಾಕ್ಷೀಕರಿಸುತ್ತಿವೆ. ನನ್ನ ವಿರುದ್ದ ಒಂದೇ ಒಂದು ಪ್ರಕರಣ ವಿಲ್ಲದಿದ್ದರೂ ನನ್ನನ್ನು ಕ್ರಿಮಿನಲ್ ಎಂಬಂತೆ ಸಾರ್ವಜನಿಕವಾಗಿ ಬಿಂಬಿಸಲು ಸರ್ಕಸ್ ಮಾಡುತ್ತಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನಿಗೆ ತಾಕತ್ತಿದ್ದರೇ ನನ್ನನ್ನು ನೇರವಾಗಿ ಹಣಿಯಲಿ, ಅದನ್ನು ಬಿಟ್ಟು ಹಿಂದಿನಿಂದ ಬೆನ್ನಿಗೆ ಚೂರಿ ಹಾಕುವುದು ಒಬ್ಬ ನಾಯಕನ ಲಕ್ಷಣವಲ್ಲ, ರಾಜಕೀಯ ಧರ್ಮ ಸಿದ್ದಾಂತಗಳೇ ಗೊತ್ತಿಲ್ಲದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಕ್ಷೇತ್ರ ವ್ಯಾಪ್ತಿಯಲ್ಲಿ ಅಶಾಂತಿ ಮೂಡಿಸುವುದನ್ನು ನಿತ್ಯ ಕಾಯಕ ಮಾಡಿಕೊಂಡಿದ್ದಾನೆ. ಶಾಂತಿಯುತವಾಗಿದ್ದ ಕ್ಷೇತ್ರದಲ್ಲಿ ಅಶಾಂತಿ ಮೂಡಿಸುವ ಕುತಂತ್ರದ ರಾಜಕೀಯಕ್ಕೆ ಕೃಷ್ಣಪ್ಪ ಮುಂದಾಗಿದ್ದಾನೆ. ನಾನು ಇದುವರೆವಿಗೂ ಮೌನವಾಗಿ ಸಹಿಸಿದ ದಿನಗಳು ಮುಗಿದಿದೆ. ಇಂದಿನಿಂದ ನಿಜವಾದ ಆಟ ಶುರುವಾಗಿದೆ ರಾಜಕೀಯವಾಗಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನನ್ನು ಸಂಪೂರ್ಣವಾಗಿ ಮುಗಿಸುವುದಾಗಿ ಶಪಥ ಕೈಗೊಳ್ಳುತ್ತಿದ್ದೇನೆ, ಕೃಷ್ಣಪ್ಪನ ರಾಜಕೀಯ ಜೀವನಕ್ಕೆ ತೆರೆ ಎಳೆಯಲು ಶತಾಯು ಗಥಾಯು ಹೋರಾಟ ಮಾಡಿಯೇ ತೀರುತ್ತೇನೆ ಎಂದು ಎಂಟಿಕೆ. ವಿರುದ್ದ ತೀವ್ರ ವಾಗ್ದಾಳಿ ನೆಡೆಸಿದರು.
ಗ್ಟೋಷ್ಠಿಯಲ್ಲಿ ವಿ.ಬಿ.ಸುರೇಶ್, ಗ್ರಾಪಂ ಸದಸ್ಯ ಕಾಳಂಜಿಹಳ್ಳಿ ಸೋಮಶೇಖರ್, ವೆಂಕಟಾಪುರ ಪಾಟೀಲ್, ನಾಗಲಾಪುರ ಮಂಜಣ್ಣ, ಸಾಗರ್ ಯಾದವ್ ಮತ್ತಿತರಿದ್ದರು.
Get real time updates directly on you device, subscribe now.
Prev Post
Next Post
Comments are closed.