ತುಮಕೂರು: ಜಗತ್ತಿನಲ್ಲಿ ನರ್ಸಿಂಗ್ ವೃತ್ತಿ ಅತ್ಯುತ್ತಮ ಪಾವಿತ್ರತೆಯಿಂದ ಕೂಡಿದೆ, ನರ್ಸಿಂಗ್ ವಿಭಾಗದಲ್ಲಿ ಮದರ್ ಥೆರೆಸಾ ಅವರಂತಹ ಸೇವೆ ಅಪಾರವಾಗಿದ್ದು, ಅವರ ಸೇವಾ ಗುಣಗಳನ್ನು ದಾದಿಯರು ಬೆಳೆಸಿಕೊಳ್ಳಬೇಕು ಎಂದು ಸಾಹೆ ವಿವಿಯ ಉಪ ಕುಲಪತಿ ಡಾ.ಬಿ.ಕೆ. ಲಿಂಗೇಗೌಡ ಕರೆ ನೀಡಿದರು.
ನಗರದ ಅಗಳಕೋಟೆಯ ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾ ವಿದ್ಯಾಲಯದ ನಾಗಾರ್ಜುನ ಹಾಲ್ ನಲ್ಲಿ ನಡೆದ ಅಂತಾರಾಷ್ಟ್ರೀಯ ದಾದಿಯರ ದಿನದ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಕೇವಲ ಆಸ್ಪತ್ರೆ ಮಾತ್ರ ಅಲ್ಲದೆ ಮನೆಗಳ ಅಕ್ಕ ಪಕ್ಕ ಕೂಡ ದಾದಿಯರು ಸೇವೆ ಮಾಡಿ ಜಾಗೃತಿ ಮೂಡಿಸಿದಾಗ ಮಾತ್ರ ಕಾಯಿಲೆ ತಡೆಗಟ್ಟಲು ಸಾಧ್ಯ, ನೀವು ತೊಡುವ ಶುಭ್ರ ಬಟ್ಟೆಯ ರೀತಿಯಲ್ಲೇ ನಿಮ್ಮ ಸೇವೆ ಕೂಡ ಶುಭ್ರವಾಗಿರಬೇಕು, ರೋಗಿಗಳ ಸೇವೆ ಮಾಡುವಾಗ ಯಾವುದೇ ಮುಜುಗರ ಪಡದೆ ಸೇವೆ ಸಲ್ಲಿಸಬೇಕು ಎಂದರು.
ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ಪ್ರಾಂಶುಪಾಲ ಡಾ.ಸಾಣಿಕೊಪ್ಪ ಮಾತನಾಡಿ, ದಾದಿಯರ ಸೇವೆ ಅಗಾಧವಾದುದು, ಆಸ್ಪತ್ರೆಯ ಯಾವುದೇ ವಿಭಾಗದಲ್ಲಿ ಅವರು ಇಲ್ಲಾ ಎಂದರೆ ಕಷ್ಟ, ದಾದಿಯರನ್ನುರೋಗಿಗಳ ಮೊದಲ ವೈದ್ಯ ಎಂದರೆ ಯಾವುದೇ ತಪ್ಪಾಗುವುದಿಲ್ಲ, ಬೆಳಗ್ಗೆ ರಾತ್ರಿ ಎನ್ನದೆ ರೋಗಿಗಳ ಸೇವೆಗೆ ಸಿದ್ಧರಾಗಿರುತ್ತಾರೆ, ಕೊರೊನ ಸಮಯದಲ್ಲಂತೂ ಅವರ ಸೇವೆ ಅಪಾರ, ವೈದ್ಯರು ಕೂಡ ಕೊರೊನ ಸೋಂಕಿತ ರೋಗಿಗಳನ್ನ ಚಿಕಿತ್ಸೆ ಮಾಡಲು ಹೆದರುತ್ತಿದ್ದ ವೇಳೆಯಲ್ಲಿ ದಾದಿಯತು ಭಯ ಪಡದೆ ರೋಗಿಗಳ ಸೇವೆ ಮಾಡಿ ಕೊರೊನ ತಡೆಗಟ್ಟುವಲ್ಲಿ ಶ್ರಮಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಾಹೆ ವಿವಿಯ ಪರೀಕ್ಷಾ ಮೇಲ್ವಿಚಾರಕ ಡಾ.ಗುರುಶಂಕರ್, ಉಪ ಪ್ರಾಂಶುಪಾಲ ಡಾ.ಜಿ.ಎನ್.ಪ್ರಭಾಕರ್, ವೈದ್ಯಕೀಯ ಅಧೀಕ್ಷಕ ಡಾ.ಎನ್.ಎಸ್.ವೆಂಕಟೇಶ್, ಸಿಇಓ ಡಾ.ಕಿರಣ್ಕುಮಾರ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಸುಜಾತ, ನರ್ಸಿಂಗ್ ವಿಭಾಗದ ಮುಖ್ಯಸ್ಥೆ ನಾಗರತ್ನಮ್ಮ ಮತ್ತು ನರ್ಸಿಂಗ್ ಸಿಬ್ಬಂದಿ ಹಾಜರಿದ್ದರು.
Comments are closed.