ಕುಣಿಗಲ್: ಬುಧವಾರ ತಾಲೂಕಿನ ಟಿ.ಹೊಸಹಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಆರಂಭ ಆಗಬೇಕಿದ್ದ ಮೇವು ಬ್ಯಾಂಕ್ ಅನಿವಾರ್ಯ ಕಾರಣಗಳಿಂದ ಕಂದಾಯ ಇಲಾಖೆ ಅದಿಕಾರಿಗಳು ಮುಂದೂಡಿದ್ದು ಗುರುವಾರ ಗ್ರೇಡ್-2 ತಹಶೀಲ್ದಾರ್ ಮೇವು ವಿತರಣೆಗೆ ಚಾಲನೆ ನೀಡಿದರು.
ಬುಧವಾರ ಮೇವು ಬ್ಯಾಂಕ್ ಆರಂಭವಾಗುತ್ತದೆ ಎಂದು ಪ್ರಚಾರ ಮಾಡಲಾಗಿತ್ತು, ಆದರೆ ಅನಿವಾರ್ಯ ಕಾರಣಗಳಿಂದ ಆರಂಭ ಮುಂದೂಡಿದ್ದು ಜಾನುವಾರು ಮಾಲೀಕರ ಅಸಮಾಧಾನಕ್ಕೆ ಕಾರಣವಾಗಿತ್ತು, ಬುಧವಾರವೇ ಮೇವು ಪಡೆಯಲು ಹಲವಾರು ಜಾನುವಾರು ಮಾಲೀಕರು ಅಗತ್ಯ ದಾಖಲೆ, ವಾಹನಗಳೊಂದಿಗೆ ಮೇವು ಬ್ಯಾಂಕ್ ಸ್ಥಳಕ್ಕೆ ಆಗಮಿಸಿ ಬರಿಗೈಲಿ ವಾಪಸಾಗಿದ್ದರು, ಆದರೆ ಗುರುವಾರ ತಾಲೂಕು ಆಡಳಿತ ಮೇವು ವಿತರಣೆಗೆ ಚಾಲನೆ ನೀಡಿದ್ದುಗ್ರೇಡ್- 2 ತಹಶೀಲ್ದಾರ್ ಯೋಗೇಶ್, ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ದಿವಾಕರ್, ಇತರೆ ಸಿಬ್ಬಂದಿ ಆಗಮಿಸಿ ಜಾನುವಾರು ಮಾಲೀಕರಿಂದ ಅಗತ್ಯ ದಾಖಲೆ ಪಡೆದು ಮೇವು ವಿತರಿಸಿದರು.
ಒಂದೆಡೆ ಬರಗಾಲದಿಂದ ಕಂಗೆಟ್ಟಿದ್ದ 40ಕ್ಕೂ ಹೆಚ್ಚು ಜಾನುವಾರು ಮಾಲೀಕರು ಅಗತ್ಯ ದಾಖಲೆ ಹಾಜರುಪಡಿಸಿ ಮೇವು ಪಡೆದರು. ಪಶುಸಂಗೋಪನೆ, ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.
Get real time updates directly on you device, subscribe now.
Prev Post
Next Post
Comments are closed.