ತುಮಕೂರು: ಉತ್ತಮ ಇಂಜಿನಿಯರಿಂಗ್ ಶಿಕ್ಷಣದ ಅವಶ್ಯಕತೆಯಿರುವ ಎಲ್ಲಾ ಪ್ರತಿಭಾವಂತರಿಗೂ ಅವಕಾಶ ದೊರಕಿಸಲು ಸಂಸ್ಥೆಯಿಂದ ಸ್ಕಾಲರ್ ಶಿಪ್ ಟೆಸ್ಟ್ ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳು ಇದರ ಉತ್ತಮ ಪ್ರಯೋಜನ ಪಡೆದುಕೊಳ್ಳಬೇಕು, ಅತ್ಯುತ್ತಮ ಶೈಕ್ಷಣಿಕ ಅನುಭವದ ಅರ್ಪಣಾ ಮನೋಭಾವದ ವಿದ್ಯಾರ್ಹತೆಯ ಉಪನ್ಯಾಸಕರ ತಂಡವು ಸಂಸ್ಥೆಯಲ್ಲಿದ್ದು, ವಿದ್ಯಾರ್ಥಿಗಳಿಗೆ ಶ್ರೇಷ್ಠ ಬೋಧನಾ ವಿಧಾನಗಳ ಮೂಲಕ ತರಗತಿ ನಡೆಸಿ ಉತ್ತಮ ಫಲಿತಾಂಶ ಮತ್ತು ಉದ್ಯೋಗ ಲಭ್ಯತೆಗೆ ಹುರಿದುಂಬಿಸಲಾಗುತ್ತಿದೆ ಎಂದು ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಮುಖ್ಯಸ್ಥ ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದರು.
ನಗರದಲ್ಲಿ ಪ್ರತಿಕಾಗೋಷ್ಠಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಿಂದ ಸ್ಕಿಲ್ ಲ್ಯಾಬ್ ತರಬೇತಿಗೆಂದು ವಿಶೇಷ ಅನುಮತಿ ಹೊಂದಿರುವ ವಿದ್ಯಾಲಯ ಪ್ರತಿ ಸೆಮಿಸ್ಟರ್ ನಲ್ಲಿ ಸ್ಕಿಲ್ ಲ್ಯಾಬ್ ತರಬೇತಿ ನೀಡುವುದರ ಮೂಲಕ ಅತ್ಯಾಧುನಿಕ ವಿಷಯಗಳ ಕಲಿಕೆಗೆ ನೆರವಾಗಿ ತನ್ಮೂಲಕ ಉದ್ಯೋಗ ಲಭ್ಯತೆಗೆ ಸುಗಮ ಮಾರ್ಗವನ್ನುಂಟು ಮಾಡಿದೆ ಎಂದರು.
ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕ ಎಂ.ಎಸ್.ಪಾಟೀಲ್ ಮಾತನಾಡಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದು ಪ್ರತಿ ವರ್ಷ ಹಲವಾರು ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆಂದು ತಿಳಿಸಿ ಕಾಲೇಜಿನಲ್ಲಿ ವ್ಯಾಸಂಗಕ್ಕೆ ಅಗತ್ಯವಾದ ಉತ್ತಮ ಕಲಿಕಾ ವಾತಾವರಣ, ಲ್ಯಾಬ್ ಗಳು ಹಾಗೂ ಮತ್ತೆಲ್ಲಾ ಸೌಕರ್ಯ ಒದಗಿಸಿದ್ದು ಉದ್ಯೋಗ ನಿಯೋಜನೆ ಮತ್ತು ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಶ್ರೀದೇವಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ನರೇಂದ್ರ ವಿಶ್ವನಾಥ್ ಮಾತನಾಡಿ, ಪದವೀಧರರಾಗಿ ಹೊರಬರುವ ವಿದ್ಯಾರ್ಥಿಗಳಿಗೆ ಕಾಲೇಜಿನ ವತಿಯಿಂದ ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ, ಸಾಫ್ಟ್ ಸ್ಕಿಲ್ ತರಬೇತಿ ನೀಡಿ ಅರ್ಹ ವಿದ್ಯಾರ್ಥಿಗಳಿಗೆ ಶೇ.90 ರಷ್ಟು ಉದ್ಯೋಗ ನೀಡಿದ್ದು ಅವರ ವಾರ್ಷಿಕ ಸರಾಸರಿ ವರಮಾನ ಪ್ಯಾಕೇಜ್ ರೂ 4.50 ಲಕ್ಷ ಗಳಷ್ಟಿರುತ್ತದೆ, ಈ ಪ್ರಕ್ರಿಯೆಯನ್ನು ನಿರಂತರವಾಗಿಸಿ ಇನ್ನು ಹೆಚ್ಚಿನ ಉದ್ಯೋಗವಕಾಶ ಕೊಡಿಸಲು ಟ್ರೈನಿಂಗ್ ಮತ್ತು ಪ್ಲೇಸ್ಮೆಂಟ್ ವಿಭಾಗದಿಂದ ಸದಾ ಶ್ರಮಿಸಲಾಗುತ್ತಿದೆ, ಈ ವರ್ಷದ ಪ್ರವೇಶಾತಿಗಾಗಿ ಈಗಾಗಲೆ ನೋಂದಣಿ ಪ್ರಾರಂಭವಾಗಿದ್ದು, ಪಿಯುಸಿ ಯಲ್ಲಿ ಉತ್ತಮ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಕಾಲೇಜಿನಿಂದಲೇ 2024- 2025 ನೇ ಸಾಲಿಗೆ ದಿನಾಂಕ ಮೇ 19 ರಂದು ಬೆಳಗ್ಗೆ 10 ಗಂಟೆಗೆ ಬಿಇ ಸ್ಕಾಲರ್ ಷಿಪ್ ಟೆಸ್ಟ್ ನಡೆಸಲಾಗುತ್ತಿದೆ ಎಂದರು.
ಪ್ರತಿಕಾ ಗೋಷ್ಠಿಯಲ್ಲಿ ಶ್ರೀದೇವಿ ವೈದ್ಯಕೀಯ ಮಹಾ ವಿದ್ಯಾಲಯ ವೈದ್ಯಕೀಯ ನಿರ್ದೇಶಕ ಡಾ.ರಮಣ್ ಎಂ ಹುಲಿನಾಯ್ಕರ್, ಡಾ.ಸಿ.ನಾಗರಾಜ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಹಾಜರಿದ್ದರು.
Comments are closed.