ನಮ್ಮವರ ಮೇಲೆ ಹಲ್ಲೆ ಮಾಡ್ಸಿದ್ದು ಮಸಾಲೆ

ಕಾರ್ಯಕರ್ತರ ನೋವಿಗೆ ಸ್ಪಂದಿಸಿದೆ:ಎಂಟಿಕೆ

357

Get real time updates directly on you device, subscribe now.

ತುರುವೇಕೆರೆ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿ.ಎಸ್.ಪುರ ಹೋಬಳಿ ಗ್ರಾಪಂ ಸದಸ್ಯ ಕೃಷ್ಣಪ್ಪನ ಮೇಲೆ ನೆಡೆದಿರುವ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವ ಶಾಸಕ ಮಸಾಲ ಜಯರಾಮ್ ಮತ್ತು ಅವರ ಪುತ್ರನನ್ನು ಕೂಡಲೇ ಬಂಧಿಸಿದಿದ್ದರೇ ಜಿಲ್ಲಾ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಈ ಕುರಿತು ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಏ.6 ರಂದು ನಮ್ಮ ಪಕ್ಷದ ಕಾರ್ಯಕರ್ತ ಹಾಗೂ ಗ್ರಾಪಂ ಸದಸ್ಯ ಕೃಷ್ಣಪ್ಪನ ಮೇಲೆ ಶಾಸಕ ಮಸಾಲ ಜಯರಾಂ ಹಾಗೂ ಅವರ ಪುತ್ರ ಖುದ್ದು ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ತೀವ್ರತರಗೊಂಡು ಕೃಷ್ಣಪ್ಪ ಆಸ್ಪತ್ರೆ ಸೇರುವಂತಾಗಿದೆ. ಈ ಸಂಬಂಧ ಸಿ.ಎಸ್.ಪುರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ. ಆದರೂ ಸಹ ಸಿ.ಎಸ್. ಪುರದಲ್ಲಿ ಸಾರ್ವಜನಿಕವಾಗಿ ಮಸಾಲಜಯರಾಮ್ ಭಾಷಣ ಮಾಡಲು ಪೊಲೀಸ್ ಅವಕಾಶ ಮಾಡಿಕೊಡುವ ಮೂಲಕ ತಮ್ಮ ಕರ್ತವ್ಯವನ್ನು ಮರೆತಿದ್ದಾರೆ. ಪೊಲೀಸ್ ವಿಳಂಬ ನೀತಿಯ ವಿರುದ್ದ ಮತ್ತೆ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದರು.
ನಾನು 15 ವರ್ಷಗಳ ಕಾಲ ಈ ಕ್ಷೇತ್ರದ ಶಾಸಕನಾಗಿ ಕರ್ತವ್ಯ ನಿರ್ವಹಿಸಿದ್ದು ನನ್ನ ಆಡಳಿತಾವಧಿಯಲ್ಲಿ ಸಮಾಜದ ಶಾಂತಿಗೆ ಭಂಗ ತರುವ ಯಾವುದೇ ಪ್ರಕರಣಗಳು ವರದಿಯಾಗಲಿಲ್ಲ, ಆದರೇ ಮಸಾಲಜಯರಾಮ್ ಶಾಸಕರಾದ ನಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ.ರಾಜಕೀಯ ವೈರಿಗಳನ್ನು ಹಣಿಯಲು ಅವರ ಮೇಲೆ ಹಲ್ಲೆ ಮಾಡಿಸುವ ಸಂಸ್ಕೃತಿಯನ್ನು ಶಾಸಕ ಮಸಾಲಜಯರಾಮ್ ಹುಟ್ಟು ಹಾಕಿದ್ದಾರೆ. ನಾನು ನನ್ನ ಹಿಂಬಾಲಕರುಗಳನ್ನು ಬಿಟ್ಟು ಮಸಾಲಜಯರಾಮ್ ಹಂಬಾಲಕರ ಮೇಲೆ ಹಲ್ಲೆ ನೆಡೆಸುತ್ತಿರುವುದಾಗಿ ಆರೋಪಿಸಿರುವ ಶಾಸಕರ ಹೇಳಿಕೆಯಲ್ಲಿ ತಿರುಳಿಲ್ಲ ನನ್ನ ರಾಜಕೀಯ ಅಸ್ತಿತ್ವದ ಭಯ ನನಗಿಲ್ಲ, ಬದಲಿಗೆ ನನ್ನ ಕಾರ್ಯಕರ್ತರ ನೋವಿಗೆ ಸ್ಪಂದಿಸುವುದು ನನ್ನ ಕರ್ತವ್ಯ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ಗ್ಟೋಷ್ಠಿಯಲ್ಲಿ ಪ.ಪಂ. ಮಾಜಿ ಅಧ್ಯಕ್ಷ ವಿಜಯೇಂದ್ರ, ಮುಂಗಿಕುಪ್ಪೆ ಬಸವರಾಜು ಮತ್ತಿತರಿದ್ದರು.

Get real time updates directly on you device, subscribe now.

Comments are closed.

error: Content is protected !!