ಹೆಣ್ಣು ಎಲ್ಲದರಲ್ಲೂ ಸರಿಸಮಾನಳು: ಡಾ.ನಳಿನಾ

31

Get real time updates directly on you device, subscribe now.


ತುಮಕೂರು: ಒಬ್ಬ ಯಶಸ್ಸಿನ ಪುರುಷನ ಹಿಂದೆ ಒಬ್ಬಳು ಹೆಂಗಸು, ಹಾಗೆ ಒಂದು ಹೆಂಗಸಿನ ಹಿಂದೆ ಒಬ್ಬ ಪುರುಷ ಇದ್ದರೆ ಅದು ಸಬಲೀಕರಣ ಎಂದು ತುಮಕುರಿನ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ನಳಿನ.ಎನ್. ಹೇಳಿದರು.

ನಗರದ ಶ್ರೀಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಐಕ್ಯೂಎಸಿ ಹಾಗೂ ಮಹಿಳಾ ಸಬಲೀಕರಣದ ವತಿಯಿಂದ ಡಾ.ಎಚ್.ಎಂ.ಗಂಗಾಧರಯ್ಯ ಸಭಾಂಗಣದಲ್ಲಿ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಭಾರತೀಯರು ಪುರಾತನ ಕಾಲದಿಂದಲೂ ಹೆಣ್ಣನ್ನು ದೇವಿ ಸ್ವರೂಪವಾಗಿ ಕಂಡಿದ್ದಾರೆ, ಹೆಣ್ಣು ಎಲ್ಲದರಲ್ಲೂ ಸರಿಸಮಾನಳು, ಪ್ರಮುಖವಾಗಿ ಹೆಣ್ಣಿಗೆ ಭೌತಿಕ ಸಬಲೀಕರಣ, ಸರಿ, ತಪ್ಪುಗಳನ್ನು ಗುರುತಿಸುವಂಥ ಸಾಮರ್ಥ್ಯವಿದೆ, ರಾಜಕೀಯ ಸಬಲೀಕರಣ ಹೆಣ್ಣು ಮಕ್ಕಳಿಗೆ 33% ಅಭಿವ್ಯಕ್ತಿ ಹೇಳಿಕೊಳ್ಳುವ ಸಬಲೀಕರಣ ಬೇಕಿದೆ ಎಂದು ಡಾ.ನಳಿನ.ಎನ್. ಪ್ರತಿಪಾದಿಸಿದರು.

ಸಾಮಾಜಿಕ ಸಬಲೀಕರಣ ಅಬದ್ಧತೆಯ ನೆಲೆಗೊಂಡಿದೆ, ಹೆಣ್ಣನ್ನು ಸಮಾಜದಲ್ಲಿ ನೋಡುವ ದೃಷ್ಟಿಕೋನ ಬದಲಾಗಬೇಕು, ಶಿಕ್ಷಣ ಪಡೆಯಬೇಕು, ಆಗ ಮಾತ್ರ ಹೆಣ್ಣು ಪ್ರಪಂಚದಲ್ಲಿ ಉನ್ನತ ಸ್ಥಾನಕ್ಕೆ ಬರಲು ಸಾಧ್ಯ, ಹೆಣ್ಣು ಎಂದು ಹಿಂಜರಿಯದೆ ಆತ್ಮವಿಶ್ವಾಸ ಮುಂದೆ ಇಟ್ಟು ಬಂದಂತಹ ಅವಕಾಶ ಸದುಪಯೋಗ ಪಡಿಸಿಕೊಂಡು ಪುರುಷರಿಗೆ ಸರಿ ಸಮಾನವಾಗಿ ಸಮಾಜದಲ್ಲಿ ಯಶಸ್ವಿಯಾಗಿ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.
ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ಪ್ರೊ.ರಮೇಶ್ ಮಣ್ಣೆ ಮಾತನಾಡಿ, ಎಷ್ಟೋ ಹೆಣ್ಣು ಮಕ್ಕಳಿಗೆ ಶಿಕ್ಷಣ ಕಲಿಯುವ ಅವಕಾಶ ಸಿಗುವುದಿಲ್ಲ, ಸಿಕ್ಕಿರುವ ಅವಕಾಶವನ್ನು ಗಮನದಲ್ಲಿ ಇಟ್ಟುಕೊಂಡು ಗುರಿಯ ಕಡೆಗೆ ಗಮನಹರಿಸಿ, ಆಲೋಚನೆಗಳು ಸ್ವಂತಿಕೆ ಆಗಿರಲಿ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಹೇಮಲತ.ಪಿ. ಸಮಾರಂಭದ ಅಧ್ಯಕ್ಷತೆ ವಹಿಸಿ ನಾವೆಲ್ಲರೂ ಶಿಕ್ಷಣ ಪಡಿಯಬೇಕೆಂದರೆ ತಂದೆ ತಾಯಿ ಕಾರಣ, ಒಳ್ಳೆಯ ವಿದ್ಯಾಭ್ಯಾಸ ಪಡೆದುಕೊಂಡು ಸಮಾಜದಲ್ಲಿ ಒಂದು ಉನ್ನತ ಸ್ಥಾನದಲ್ಲಿ ಕೆಲಸ ಮಾಡಿದರೆ ನಾವು ಪೋಷಕರಿಗೆ ಕೊಟ್ಟಂತ ಉಡುಗೊರೆಯ ಸಬಲೀಕರಣ ಎಂದರು.

ಕಾರ್ಯಕ್ರಮದಲ್ಲಿ ರೇಷ್ಮೆ ಕೃಷಿ ವಿಭಾಗದ ಮುಖ್ಯಸ್ಥ ಪ್ರೊ.ಜಿ.ಹನುಮಂತ ರಾಯಪ್ಪ, ಪ್ರಾಧ್ಯಾಪಕ ವಿನಯ್ ಕುಮಾರ್, ಐಕ್ಯೂಎಸಿ ಸಂಯೋಜಕ ಸೈಯದ್ ಬಾಬು, ಮಹಿಳಾ ಸಬಲೀಕರಣ ಘಟಕ ಸಂಚಾಲಕರಾದ ಎಚ್.ಬಿ.ಆಶಾ.ಎಚ್.ಎಲ್. ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!