ತಗ್ಗು ಪ್ರದೇಶಗಳಿಗೆ ಮಳೆ ನೀರು- ಶಾಸಕರಿಂದ ಪರಿಶೀಲನೆ

34

Get real time updates directly on you device, subscribe now.


ತುಮಕೂರು: ನಗರದಲ್ಲಿ ಭಾರಿ ಮಳೆಯಿಂದಾಗಿ ಹಲವೆಡೆ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರಿನಿಂದ ಜನರ ಜೀವನ ಅಸ್ತವ್ಯಸ್ತಗೊಂಡ ಹಿನ್ನಲೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ನಗರದ ಹಲವೆಡೆ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ಸಮರೋಪಾದಿಯಲ್ಲಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಉಪ್ಪಾರಹಳ್ಳಿಯ ಮುಖ್ಯರಸ್ತೆ ಹಾಗೂ ಶೆಟ್ಟಿಹಳ್ಳಿ ಗೇಟ್ ಅಂಡರ್ ಪಾಸ್ ಬಳಿ ಇರುವ ರಾಜ ಗಾಲುವೆಯಿಂದ ಬರುವಂತಹ ಮಳೆ ನೀರು ಸೆಕ್ರೆಡ್ ಹಾರ್ಟ್ ಕಾಲೇಜಿನ ಹಿಂಭಾಗದ ಮನೆಗಳಿಗೆ ನುಗ್ಗಿದೆ ಎಂದು ಶಾಸಕರಿಗೆ ಕರೆ ಬಂದ ಹಿನ್ನಲೆಯಲ್ಲಿ ಸಮಸ್ಯೆಯನ್ನು ಖುದ್ದು ತಿಳಿಯಲು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಹಾ ನಗರ ಪಾಲಿಕೆ ಹಾಗೂ ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಮುಂದೆ ಈ ಸಮಸ್ಯೆ ಉಂಟಾಗದಂತೆ ರಾಜ ಗಾಲುವೆಗೆ ಮಳೆ ನೀರು ತಲುಪಲು ಪರ್ಯಾಯ ಚರಂಡಿ ವ್ಯವಸ್ಥೆ ಮಾಡಲು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಮುಂಜಾಗ್ರತವಾಗಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮಹಾ ನಗರ ಪಾಲಿಕೆಯ ಅಧಿಕಾರಿಗಳು ಜಾಗ್ರತೆ ವಹಿಸಬೇಕು, ರಾಜ ಗಾಲುವೆಗಳಲ್ಲಿ, ಚರಂಡಿಗಳಲ್ಲಿ ಹೂಳು ತುಂಬಿರುವುದನ್ನು ಸ್ವಚ್ಛಗೊಳಿಸಿ ಮಳೆ ನೀರು ಸರಾಗವಾಗಿ ಹರಿಯಲು ಕ್ರಮ ವಹಿಸಿ, ಮಳೆಯಿಂದ ತೊಂದರೆ ಉಂಟಾದರೆ 24 ಗಂಟೆ ಸಾರ್ವಜನಿಕರಿಗೆ ಸಹಾಯ ಹಸ್ತ ಚಾಚಲು ಸಹಾಯವಾಣಿ ನಂಬರ್ ಹಾಗೂ ಆಯಾ ವಾರ್ಡ್ಗಳ ಇಂಜನಿಯರ್ ಫೋನ್ ನಂಬರ್ ಗಳನ್ನು ಸಾರ್ವಜನಕರಿಗೆ ಸುಲಭವಾಗಿ ಸಿಗುವಂತೆ ವ್ಯವಸ್ಥೆ ಮಾಡಿ ಸಮಸ್ಯೆ ಉಂಟಾದ ತಕ್ಷಣವೇ ಸಮಸ್ಯೆ ಬಗೆಹರಿಸಲು ಕಾರ್ಯ ಪ್ರವೃತ್ತರಾಗುವಂತೆ ಅಧಿಕಾರಿಗಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದರು.

ಈ ಸಂದರ್ಭದಲ್ಲಿ ಮಹಾ ನಗರ ಪಾಲಿಕೆ ಅಧಿಕಾರಿಗಳು ಹಾಗೂ ಪಿಡಬ್ಲ್ಯುಡಿ ಅಧಿಕಾರಿಗಳು, ಮಾಜಿ ಮಹಾ ನಗರ ಪಾಲಿಕೆ ಸದಸ್ಯರಾದ ಸಿ.ಎನ್.ರಮೇಶ್, ವಿಷ್ಣುವರ್ಧನ್, ವಿಶ್ವಣ್ಣ, ಮುಖಂಡರಾದ ಗೀರಿಶ್, ಮಧು, ದೇವರಾಜು, ಕುಮಾರ್, ವಿರುಪಣ್ಣ, ನಟರಾಜು, ಪ್ರಸಾದ್, ಶಂಕರಣ್ಣ, ರಾಮಣ್ಣ, ಮಂಜು, ಅನಿಲ್, ಲಕ್ಷ್ಮಣ್, ಶ್ರೀಕಾಂತ್, ಕುಮಾರ್, ಕುಮಾರ್, ಗುರು, ಮಧು, ಸಿದ್ದರಾಜು ಮುಂತಾದವರು ಇದ್ದರು.

Get real time updates directly on you device, subscribe now.

Comments are closed.

error: Content is protected !!