ಕುಣಿಗಲ್: ಭ್ರಷ್ಟ ಕಾಂಗ್ರೆಸ್ ಸರ್ಕಾರ ಹೈನುಗಾರರಿಗೆ ಪ್ರೋತ್ಸಾಹ ಧನ ನೀಡಲಾರದೆ ಈಗ ಹಾಲು ಖರೀದಿಗೆ ಏಕರೂಪ ತತ್ರಾಂಶ ಅಳವಡಿಸಿ ಹೈನುಗಾರರ ಪಾಲಿಗೆ ಮರಣ ಶಾಸನ ಜಾರಿಗೊಳಿಸಲು ಹೊರಟಿರುವುದು ಖಂಡನೀಯ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಜಗದೀಶ್ ಹೇಳಿದರು.
ಜೆಡಿಎಸ್ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರೈತ ವಿರೋಧಿ ನೀತಿ ಜಾರಿಗೊಳಿಸುತ್ತಾ ರೈತ ವಿರೋಧಿ ಸರ್ಕಾರವಾಗಿದೆ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಭಾಗ್ಯಗಳಿಗೆ ಅನುದಾನ ಹೊಂದಿಸಲಾಗದೆ ಹೈನುಗಾರರಿಗೆ ಬಾಕಿ ಇರುವ 708 ಕೋಟಿ ಪ್ರೋತ್ಸಾಹ ಧನ ನೀಡಲಾಗದೆ ಇದೀಗ ಸಹಕಾರಿ ಒಕ್ಕೂಟದ ಮೂಲಕ ಹಾಲು ಹಾಕುವ ಹೈನುಗಾರಿಗೆ ಹಾಲು ಹಾಕುವ ಸಮಯದಲ್ಲಿ ಏಕರೂಪ ತತ್ರಾಂಶ ಜಾರಿಗೊಳಿಸಲು ಮುಂದಾಗಿದೆ, ಸರ್ಕಾರದ ಹೊಸ ನಿಯಮದ ಪ್ರಕಾರ ಹಾಲು ಸಹಕಾರ ಸಂಘಗಳಲ್ಲಿ ಏಕರೂಪ ತತ್ರಾಂಶ ಅಳವಡಿಸಿ ಮೂರು ಡಿಗ್ರಿಗಿಂತ ಕಡಿಮೆ ಜಿಡ್ಡು (ಫ್ಯಾಟ್) ಇರುವ ಹಾಲನ್ನು ತಿರಸ್ಕರಿಸಲಾಗುತ್ತದೆ, ಸರ್ಕಾರವೆ ಎಚ್ ಎಫ್ ತಳಿ ಹಸುಗಳನ್ನು ಸಾಲ ಸೌಲಭ್ಯದ ಮೂಲಕ ವಿತರಿಸಿದ್ದು ಈ ಜಾತಿಯ ಹಸುಗಳು ಹೆಚ್ಚಿನ ಹಾಲು ನೀಡಿದರೂ ಜಿಡ್ಡಿನ ಅಂಶ ಕಡಿಮೆ ಇರುತ್ತದೆ, ಇದರಿಂದ ಸಾವಿರಾರು ಹೈನುಗಾರರು ಬೀದಿಗೆ ಬೀಳುವಂತಾಗುತ್ತದೆ, ರಾಜ್ಯಾದ್ಯಂತ ಬಹುತೇಕ ರೈತರು ಹೈನುಗಾರಿಕೆ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ, ತಾಲೂಕಿನಲ್ಲಿ ದಿನಕ್ಕೆ ಒಂದುವರೆಯಿಂದ ಎರಡು ಲಕ್ಷ ಲೀಟರ್ ಹಾಲು ಉತ್ಪಾದಿಸಿ ಸಹಕಾರ ಸಂಘದ ಮೂಲಕ ಒಕ್ಕೂಟಕ್ಕೆ ಹಾಕುತ್ತಿದ್ದಾರೆ, ಬಹುತೇಕ ಹೈನುಗಾರರು ಸರ್ಕಾರವೇ ಸಾಲ ಸೌಲಭ್ಯ ಕಲ್ಪಿಸಿದ ಎಚ್ ಎಫ್ ಹಸುಗಳನ್ನು ಸಾಲ ಪಡೆದು ಹೈನುಗಾರಿಕೆ ಮಾಡುತ್ತಿದ್ದಾರೆ, ಈ ಆದೇಶವನ್ನು ಸಹಕಾರ ಇಲಾಖೆ ಮೂಲಕ ಚುನಾವಣೆ ಪೂರ್ವದಲ್ಲೆ ಆದೇಶ ಮಾಡಿದ್ದು ಜಾರಿಗೊಳಿಸದೆ ಲೋಕಸಭೆ ಚುನಾವಣೆಯಲ್ಲಿ ಹೈನುಗಾರರು ಬುದ್ಧಿ ಕಲಿಸುತ್ತಾರೆ ಎಂದು ಚುನಾವಣೆ ನಂತರ ಜಾರಿಗೊಳಿಸಲು ಒತ್ತಡ ಹಾಕಲಾಗುತ್ತಿದೆ,
ಸಹಕಾರ ಸಚಿವ ಕೆ.ಎನ್.ರಾಜಣ್ಣ ಜಿಲ್ಲೆಯಲ್ಲಿ ಮೊದಲು ಜಾರಿಗೊಳಿಸಲು ಮುಂದಾಗುತ್ತಿದ್ದಾರೆ, ಇದರಿಂದ ಸಾವಿರಾರು ಹೈನುಗಾರರ ಬದುಕು ದುಸ್ತರವಾಗುತ್ತದೆ ಎಂದರು.
ಜಿಲ್ಲಾಧಿಕಾರಿಗಳು ಕೇವಲ ಪತ್ರಿಕೆ ಹೇಳಿಕೆಗೆ ಸೀಮಿತವಾಗಿದ್ದಾರೆ, ತಾಲೂಕಿನ ಶಾಸಕ ಡಾ.ರಂಗನಾಥ್, ಹೈನುಗಾರರಿಗೆ, ರೈತರಿಗೆ ಅವರದೆ ಸರ್ಕಾರ ಮಾರಕವಾಗುವಂತೆ ನಡೆದುಕೊಳ್ಳುತ್ತಿದ್ದರೂ ಬ್ಯಾಂಕುಗಳು ರೈತರ ಹಣ ಜಮೆ ಮಾಡಿ ಕೊಳ್ಳುತ್ತಿದ್ದರೂ ಪ್ರಶ್ನೆ ಮಾಡದೆ ವಿವಿಧ ಯೋಜನೆಯ ಕಿಕ್ ಬ್ಯಾಕ್ ಹಣ ಪಡೆಯುವುದರಲ್ಲೆ ಮಗ್ನವಾಗಿದ್ದಾರೆ, ತಾಲೂಕಿನ ಶಾಸಕರಿಗೆ ರೈತರ, ಹೈನುಗಾರರ ಬಗ್ಗೆ ಕನಿಷ್ಠ ಕಾಳಜಿ ಇಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಎಲ್.ಹರೀಶ್, ತರೀಕೆರೆ ಪ್ರಕಾಶ್, ಯಡಿಯೂರು ದೀಪು, ರಂಗಸ್ವಾಮಿ, ನವೀನ್, ಮಂಜುನಾಥ ಇತರರು ಇದ್ದರು.
Comments are closed.