ಶಿರಾದಲ್ಲಿ ನಗರಸಭೆಯಿಂದ ಚರಂಡಿ ಸ್ವಚ್ಛತೆ

24

Get real time updates directly on you device, subscribe now.


ಶಿರಾ: ಎರಡು ದಿನಗಳ ಹಿಂದೆಯಷ್ಟೆ ನಗರದಲ್ಲಿ ಸುರಿದ ಮಳೆಯಲ್ಲಿ ರಾ.ಹೆ. 234 ರಿಂದ ಆರಂಭಗೊಳ್ಳುವ ಬಾಲಾಜಿ ನಗರದ ಪ್ರಮುಖ ರಸ್ತೆ ಸಮೀಪ ಅಂಗಡಿ ಮಳಿಗೆಗೆ ನುಗ್ಗಿದ್ದ ನೀರಿನ ವೀಡಿಯೋ ವೈರಲ್ ಆಗಿದ್ದು, ಎಚ್ಚೆತ್ತುಕೊಂಡ ನಗರಸಭಾ ಸದಸ್ಯರು ಈ ಭಾಗದಲ್ಲಿ ಚರಂಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು ಕಂಡು ಬಂದಿದೆ.
ಎರಡು ದಿನಗಳ ಹಿಂದಷ್ಟೆ ಸುರಿದ ಭಾರಿ ಮಳೆ ನಗರದ ಅಧ್ವಾನಗಳನ್ನು ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿತ್ತು, ಇದೇ ವೇಳೆ ರಾ.ಹೆ. 234ರಲ್ಲಿ ನಿಂತ ನೀರು ಬಾಲಾಜಿ ನಗರ ಮುಖ್ಯ ರಸ್ತೆಯ ಪಕ್ಕದ ಸೆಲ್ಲರ್ ಅಂಗಡಿ ಮಳಿಗೆಗೆ ಮೆಟ್ಟಿಲಿನ ಮೇಲಿಂದ ಜಲಪಾತದಂತೆ ಧುಮುಕುತ್ತಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಈ ಭಾಗದ ಬಹುತೇಕ ಚರಂಡಿಗಳು ಒತ್ತುವರಿ ಆಗಿದ್ದು, ಇರುವ ಕೆಲವೇ ಚರಂಡಿಗಳೂ ಕಸದಿಂದ ತುಂಬಿರುವ ಕಾರಣ ಮಳೆಯ ವೇಳೆ ಈ ಭಾಗದಲ್ಲಿ ಕೆರೆಯಂತೆ ನೀರು ಸಂಗ್ರಹಗೊಂಡಿತ್ತು.

ಇನ್ನೂ ಮೂರ್ನಾಲ್ಕು ದಿನ ಮಳೆ ಬರುವ ಸಾಧ್ಯತೆ ಇದ್ದು, ಮುಂಗಾರು ಮಳೆಯೂ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಾಮಿನಿ ಸದಸ್ಯರ ಒತ್ತಾಯದ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಪೌರಾಯುಕ್ತ ರುದ್ರೇಶ್ ಯಂತ್ರಗಳ ಮೂಲಕ ಚರಂಡಿ ಸ್ವಚ್ಛಗೊಳಿಸುವ ಕೆಲಸ ನಡೆಸಿದರು, ನಾಮಿನಿ ಸದಸ್ಯ ರಾಧಾಕೃಷ್ಣ, ಮುಖಂಡ ವಿಜಯರಾಜ್, ವಾಜರಹಳ್ಳಿ ರಮೇಶ್ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!