ಚಿರತೆ ದಾಳಿಗೆ ಬಲಿಯಾದ ಎಮ್ಮೆ ಕರು

28

Get real time updates directly on you device, subscribe now.


ತುರುವೇಕೆರೆ: ತಾಲೂಕಿನ ಹಬುಕನಹಳ್ಳಿ ಸುತ್ತ ಮುತ್ತಲ ಹತ್ತಾರು ಗ್ರಾಮಗಳಲ್ಲಿ ಕಳೆದ ಒಂದೆರೆಡು ತಿಂಗಳಿನಿಂದ ಚಿರತೆ ಹಾವಳಿ ಹೆಚ್ಚಾಗಿದೆ, ಜನ ಸಾಮಾನ್ಯರು ಓಡಾಡಲು ಹೆದರಿಕೆಯಾಗುತ್ತಿದೆ ಎಂದು ಹಬುಕನಹಳ್ಳಿ ಸುತ್ತಮುತ್ತಲ ಜನರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಒಂದೆರೆಡು ದಿನಗಳ ಹಿಂದೆಯಷ್ಟೇ ಹಬುಕನಹಳ್ಳಿ ಬಸವೇಶ್ವರ ನಗರದ ಪ್ರಕಾಶ್ ಎಂಬುವವರಿಗೆ ಸೇರಿದ ಎಮ್ಮೆಯ ಕರುವನ್ನು ಚಿರತೆ ತಿಂದು ಹಾಕಿದೆ, ಮನೆ ಮುಂದೆ ಕಟ್ಟಿದ್ದ ಎಮ್ಮೆ ಕರುವನ್ನು ರಾತ್ರಿ ವೇಳೆ ಗ್ರಾಮದೊಳಗೆ ಬಂದು ತಿಂದು ಹಾಕಿದೆ, ಕಳೆದ ಒಂದು ತಿಂಗಳ ಹಿಂದೆ ಸಹ ಚಿರತೆ ಗ್ರಾಮದೊಳಗೆ ಬಂದು ನಾಯಿ ಮತ್ತು ಮೇಕೆ ತಿಂದು ಹಾಕಿದೆ.
ಕತ್ತಲು ಆಗುತ್ತಿದ್ದಂತೆ ರೈತಾಪಿಗಳು ತಮ್ಮ ಜಮೀನಿನ ಕಡೆ ಓಡಾಡುವುದನ್ನೇ ಬಿಟ್ಟಿದ್ದಾರೆ, ಐದಾರು ಚಿರತೆ ಈ ಪ್ರದೇಶಗಳಲ್ಲಿ ಓಡಾಡುತ್ತಿವೆ, ಈ ಕುರಿತು ಅರಣ್ಯ ಇಲಾಖೆಯ ಗಮನಕ್ಕೆ ತಂದರೆ ಚಿರತೆಯ ಫೋಟೋ ಅಥವಾ ವೀಡಿಯೋ ಮಾಡಿ ಕಳಿಸಿ ಎಂದು ಬೇಜವಾಬ್ದಾರಿ ತನದಿಂದ ಉತ್ತರಿಸುತ್ತಾರೆಂದು ಗ್ರಾಮದ ಯುವಕ ಜೀವನ್ ದೂರಿದರು.

ಚಿರತೆ ಬರುವುದೇ ರಾತ್ರಿ ವೇಳೆ, ಯಾರು ತಾನೇ ಆಗ ವೀಡಿಯೋ ಮಾಡಲು ಸಾಧ್ಯ, ಈ ಕನಿಷ್ಠ ಜ್ಞಾನವೂ ಅರಣ್ಯ ಇಲಾಖೆಯವರಿಗೆ ಇಲ್ಲವಲ್ಲ ಎಂದು ಜೀವನ್ ವಿಷಾದಿಸಿದರು.
ಗುರುತು ಕಳೆದ ಮೂರ್ನಾಲ್ಕು ದಿನಗಳಿಂದ ತಮ್ಮ ಗ್ರಾಮದೊಳಗೆ ಚಿರತೆ ಓಡಾಡುತ್ತಿದೆ, ಮಳೆ ಬಂದಿರುವುದರಿಂದ ಮಣ್ಣು ತೇವವಾಗಿದ್ದು ಚಿರತೆಯ ಕಾಲಿನ ಗುರುತು ಕಾಣ ಸಿಗುತ್ತಿವೆ, ಚಿರತೆ ಮನುಷ್ಯರ ಬೇಟೆಯಾಡುವ ಮುನ್ನ ಅರಣ್ಯ ಇಲಾಖೆಯವರು ಎಚ್ಚೆತ್ತು ಬೋನು ಇಟ್ಟು ಚಿರತೆ ಹಿಡಿಯಬೇಕೆಂದು ಜೀವನ್ ಆಗ್ರಹಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!