ತುಮಕೂರು: ಭಾರತೀಯ ಕ್ರಿಕೆಟ್ ಸಂಸ್ಥೆ ಬಿಸಿಸಿಐನ ವತಿಯಿಂದ ಆಯೋಜಿಸಿರುವ ಐಪಿಎಲ್- 2024ರ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ವೀಕ್ಷಿಸಲು ಟಾಟಾ ಐಪಿಎಲ್ ಫ್ಯಾನ್ ಪಾರ್ಕ್ ವತಿಯಿಂದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ 32*18 ಅಡಿ ಅಳತೆ ದೊಡ್ಡ ಪರದೆಯ ವ್ಯವಸ್ಥೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ತುಮಕೂರು ಜಿಲ್ಲಾ ಉಸ್ತುವಾರಿ ಸುನೀಲ್ ಪಾಟೀಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಟಾಟಾ ಐಪಿಎಲ್ 2024ರ ಕ್ರೆಜ್ ಹೆಚ್ಚಿಸುವ ಸಲುವಾಗಿ ಈ ವರ್ಷ ದೇಶದ ಐವತ್ತು ಕಡೆಗಳಲ್ಲಿ ಈ ರೀತಿಯ ದೊಡ್ಡ ಪರದೆಗಳ ಮೂಲಕ ಐಪಿಎಲ್ ಫ್ಯಾನ್ ಗಳಿಗೆ ಮನರಂಜನೆ ನೀಡಲು ವ್ಯವಸ್ಥೆ ಮಾಡಿದೆ, ಮೇ 24 ರಂದು ನಡೆಯುವ ಸೆಮಿಫೈನಲ್ ಮತ್ತು ಮೇ 26 ರಂದು ನಡೆಯುವ ಫೈನಲ್ ಮ್ಯಾಚ್ ನ್ನು ದೊಡ್ಡ ಪರದೆಯ ಮೇಲೆ 4- 5 ಸಾವಿರ ಜನರಿಗೆ ವೀಕ್ಷಿಸಲು ವ್ಯವಸ್ಥೆ ಮಾಡಿದೆ ಎಂದರು.
ಐಪಿಎಲ್ ಫ್ಯಾರ್ಕ್ ಆಯೋಜನೆ ಮಾಡಿರುವ ಮೆಗಾ ಸ್ಕ್ರೀನ್ ಮನರಂಜನಾ ಆಟಕ್ಕೆ ಉಚಿತ ಪ್ರವೇಶವಿದ್ದು, ಆಟ ವೀಕ್ಷಿಸಲು ಬರುವ ಫ್ಯಾನ್ ಗಳಿಗೆ ಕೂಪನ್ ನೀಡಲಾಗುವುದು, ಕೂಪನ್ ನಲ್ಲಿ ಡ್ರಾ ವಿಜೇತ ಒಬ್ಬರಿಗೆ ಅಂತಾರಾಷ್ಟ್ರೀಯ ಆಟಗಾರರು ಸಹಿ ಮಾಡಿರುವ ಟೀ ಶರ್ಟ್ ದೊರೆಯಲಿದೆ, ದೊಡ್ಡ ಪರದೆಯ ಮೇಲೆ ಐಪಿಎಲ್ ಸೆಮಿ ಫೈನಲ್ ಮತ್ತು ಫೈನಲ್ ಮ್ಯಾಚ್ ಗಳನ್ನು ವೀಕ್ಷಿಸುವುದರಿಂದ ಸ್ಟೇಡಿಯಂನಲ್ಲಿ ನೋಡಿದ ಅನುಭವವನ್ನೇ ಕೊಡಲಿದೆ, ಅದಕ್ಕೆ ಬೇಕಾದ ಎಲ್ಲಾ ರೀತಿಯ ಡಿಜೆ, ಸೌಂಡ್ ಸಿಸ್ಟಮ್ ನ್ನು ಟಾಟಾ ಐಪಿಎಲ್- 2024 ಫ್ಯಾನ್ ಪಾರ್ಕ್ ವ್ಯವಸ್ಥೆ ಮಾಡಿದೆ, ಹೆಚ್ಚಿನ ಜನರು ಜೂನಿಯರ್ ಕಾಲೇಜು ಮೈದಾನಕ್ಕೆ ಭೇಟಿ ನೀಡಿ ದೊಡ್ಡ ಪರದೆಯ ಮೇಲೆ ಐಪಿಎಲ್ ಟೂರ್ನಿ ವೀಕ್ಷಿಸುವ ಮೂಲಕ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಬಿಸಿಸಿಐ ನ ಕ್ರಿಕೆಟ್ ವ್ಯವಸ್ಥಾಪಕ ಆನಂತ ದತ್ ಇದ್ದರು.
Comments are closed.