ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಸಮಸ್ಯೆ ಸೃಷ್ಟಿಸುತ್ತಿದೆ: ವೈಎಎನ್

22

Get real time updates directly on you device, subscribe now.


ಕುಣಿಗಲ್: ರಾಜ್ಯಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಗೊಂದಲಕಾರಿ ನೀತಿ ಅನುಸರಿಸಿ ಮನ ಬಂದಂತೆ ಆದೇಶ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಸೃಷ್ಟಿಸಿ, ಶಿಕ್ಷಕರು, ಉಪನ್ಯಾಸಕರನ್ನು ಬಲಿಪಶು ಮಾಡಲು ಹೊರಟಿದೆ ಎಂದು ವಿಧಾನ ಪರಿಷತ್ ಆಗ್ನೇಯ ಶಿಕ್ಷಕ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣ ಸ್ವಾಮಿ ಹೇಳಿದರು.

ಪಟ್ಟಣದ ಗೌತಮ ಅನುದಾನಿತ ಪ್ರೌಢಶಾಲೆಯಲ್ಲಿ ಮತಯಾಚನೆ ಮಾಡಿ ಮಾತನಾಡಿ, ರಾಜ್ಯದಲ್ಲಿ ಹಿಂದೆಂದೂ ಇಂತಹ ಶಿಕ್ಷಣ ಮಂತ್ರಿಯನ್ನು ಕಂಡಿರಲಿಲ್ಲ, ಸ್ಪಷ್ಟವಾಗಿ ಕನ್ನಡ ಮಾತಾಡಲು ಬಾರದ ಮಂತ್ರಿಗಳು ಮನಬಂದಂತೆ ಕಾನೂನು ಮಾರ್ಪಾಡಿನಿಂದ ಶಿಕ್ಷಕರು ಪರದಾಡುವಂತಾಗಿದೆ, ರಾಷ್ಟ್ರೀಯ ಶಿಕ್ಷಣ ನೀತಿ ತೆಗೆದು ಹಾಕಿ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ಹೇಳಿ ಸಮರ್ಪಕ ಶೀಕ್ಷಣ ನೀತಿ ಜಾರಿಗೊಳಿಸಿಲ್ಲ, ಎರಡು ಮೂರು ಪರೀಕ್ಷೆ ನಡೆಸಿ 20 ಅಂಕ ಕೃಪಾಂಕ ನೀಡಿ ಛೀಮಾರಿ ಹಾಕಿಸಿಕೊಂಡಿದ್ದಾರೆ, ಪರೀಕ್ಷಾ ವ್ಯವಸ್ಥೆಯನ್ನೆ ಹಾಳುಗೆಡವಿ ಶಿಕ್ಷಕರನ್ನು ಕಷ್ಟಕ್ಕೆ ದೂಡಿದ್ದು, 5,8,9 ಕ್ಕೆ ಬೋರ್ಡ್ ಪರೀಕ್ಷೆ ಮಾಡಿಸುವುದಾಗಿ ಹೇಳಿ ನ್ಯಾಯಾಲಯದಿಂದ ಕಾಂಗ್ರೆಸ್ ಸರ್ಕಾರ ಛೀಮಾರಿ ಹಾಕಿಸಿಕೊಂಡಿದೆ ಎಂದರು.

ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ, ತಾಲೂಕು ಬಿಜೆಪಿ ಅಧ್ಯಕ್ಷ ಬಲರಾಮ, ವೃತ್ತಿ ಶಿಕ್ಷಕರ ಸಂಘದ ಜಿ.ಡಿ.ಗಂಗಾಧರ, ಹುಲಿಯೂರು ದುರ್ಗ ಬಿಜೆಪಿ ಮುಖಂಡ ನಟರಾಜ್, ನಿವೃತ್ತ ಬಿಇಒ ಕೃಷ್ಣಪ್ಪ ಇತರರು ಇದ್ದರು, ಮತಯಾಚನೆ ನಂತರ ಮಾಜಿ ಸಚಿವ ಡಿ.ನಾಗರಾಜಯ್ಯ ಅವರನ್ನು ಭೇಟಿ ಮಾಡಿ ಜೆಡಿಎಸ್ ಪಕ್ಷದ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಚರ್ಚೆ ನಡೆಸಿದರು.

Get real time updates directly on you device, subscribe now.

Comments are closed.

error: Content is protected !!