ಬುದ್ಧನ ತತ್ವಗಳು ನಮಗೆ ಮಾರ್ಗದರ್ಶನ: ಪರಂ

ಆಸೆಯೇ ಪ್ರಪಂಚದ ದುಃಖಕ್ಕೆ ಕಾರಣ ಎಂದು ತಿಳಿಸಿದ್ದು ಬುದ್ಧ

31

Get real time updates directly on you device, subscribe now.


ತುಮಕೂರು: ವಿಶ್ವಕ್ಕೆ ಶಾಂತಿ ಹಾಗೂ ನೆಮ್ಮದಿ ತಂದುಕೊಟ್ಟಿದ್ದು ಭಗವಾನ್ ಬುದ್ಧ, ಗೌತಮ ಬುದ್ಧನ ತತ್ವಗಳನ್ನು ನಾವು ನಮ್ಮ ಜೀವನಲ್ಲಿ ಅಳವಡಿಸಿಕೊಂಡರೆ ಯಶಸ್ಸು ದೊರೆಯುವುದು ಕಂಡಿತ, ಆತನ ತತ್ವ ಹಾಗೂ ಆದರ್ಶಗಳಿಂದ ಲಾಭವೇ ಹೊರತು ನಷ್ಟವಿಲ್ಲ, ಪ್ರಪಂಚದ ಇತಿಹಾಸದಲ್ಲಿ ಮನುಕುಲ ನೆರವಿಗೆ ಸಂಭಂದಿಸಿದ ಯಾವುದಾದರು ಘಟನೆಗಳು ನಡೆದಿವೆ ಎಂದರೆ ಅದು ಬುದ್ಧನಿಂದ ಮಾತ್ರ, ಇಡೀ ವಿಶ್ವವೇ ಸ್ಮರಿಸುವ ಘಟನೆಗಳು ನಡೆದಿರುವುದು ಮನುಕುಲಕ್ಕೆ ಮಾದರಿಯಾಗಿವೆ, ಇನ್ನ 35ನೇ ವಯಸ್ಸಿನಲ್ಲಿ ಜ್ಞಾನೋದಯವಾಗಿ ಮನುಕುಲದ ಒಳಿತಿಗಾಗಿ ನಡೆದ ಬುದ್ಧನ ತತ್ವಗಳೇ ನಮಗೆ ಮಾರ್ಗದರ್ಶನ ಎಂದು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕುಲಾಧಿಪತಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ನಗರದ ಹೊರ ಹೊಲಯದ ಸಿದ್ಧಾರ್ಥ ನಗರದಲ್ಲಿನ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಬುದ್ಧ ವಿಹಾರದಲ್ಲಿ ಏರ್ಪಡಿಸಿದ್ದ 2568ನೇ ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕೂಡ ಬುದ್ಧ ತತ್ವಗಳ ಅಡಿಯಲ್ಲೆ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಸಾವಿರಾರು ವರ್ಷಗಳ ಹಿಂದೆ ಮಾನವ ಕುಲಕ್ಕೆ ಸಂಬಂಧಿಸಿದ ಅನೇಕ ಘಟನೆ ಪ್ರಪಂಚದಲ್ಲಿ ನಡೆದು ಹೋಗಿವೆ, ಶಾಂತಿ, ಅಹಿಂಸೆ ಮತ್ತು ಸತ್ಯದ ಬದುಕನ್ನು ಪರಿಚಯಿಸಿದ ಭಗವಾನ್ ಬುದ್ಧನನ್ನು ಇಂದಿಗೂ ಸ್ಮರಿಸಲಾಗುತ್ತಿದೆ, ಬುದ್ಧ ಜನಿಸಿದ ದಿನದಂದೇ ಪ್ರಪಂಚದಲ್ಲಿ ಆಗುವ ಬದಲಾವಣೆಯ ಶಕುನಗಳನ್ನು ಆತನ ಪಾಲಕರು ಗ್ರಹಿಸಿದ್ದರು, ಪ್ರಪಂಚದ ಕಷ್ಟ, ನೋವು ಕಾಣದಂತೆ ಅರಮನೆಯಲ್ಲಿ ಬುದ್ಧನನ್ನು ಬೆಳೆಸಿದರು, ಆದರೆ ಪ್ರಕೃತಿಯ ನಿಯಮ ತಡೆಯಲಾಗಲಿಲ್ಲ, ರೋಗಿ, ವೃದ್ಧ, ಶವವನ್ನು ಕಂಡು ಲೌಕಿಕ ಜೀವನ ತ್ಯಜಿಸಿದರು, ಪ್ರಪಂಚ ದುಃಖದಿಂದ ಕೂಡಿದೆ, ಇದಕ್ಕೆ ಆಸೆಯೇ ಮೂಲ ಕಾರಣ ಎಂಬುದನ್ನು ಗ್ರಹಿಸಿದರು ಎಂದು ತಿಳಿಸಿದರು.
ನನ್ನ ತಂದೆಯವರಾದ ಎಚ್.ಎಂ.ಗಂಗಾಧರಯ್ಯ ಅವರು ಪ್ರತಿದಿನ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಬುದ್ಧನ ಕುರಿತ ಪುಸ್ತಕಗಳನ್ನು ಓದುತ್ತಿದ್ದರು, ಇದರ ಫಲವಾಗಿಯೇ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ರೂಪುಗೊಂಡಿತು, ಬುದ್ಧನ ತತ್ವಗಳನ್ನು ಅರ್ಥ ಮಾಡಿಕೊಂಡು, ಅದರ ಆಧಾರದ ಮೇಲೆ ಸಂಸ್ಥೆ ನಡೆಯಬೇಕು ಎಂಬುದು ಅವರ ಆಶಯ, ಬುದ್ಧನ ತತ್ವಗಳ ಮಾರ್ಗದಲ್ಲಿಯೇ ನಡೆಯುವಂತೆ ನಮಗೆ ಹೇಳಿದ್ದಾರೆ ಎಂದು ಹೇಳಿದರು.

ಬೀದರ್ ಚಾಂದಿಯಾ ಬಂತಜೀ ಸ್ವಾಮೀಜಿ ಮಾತನಾಡಿ, ರಾಜನ ಮಗನಾಗಿದ್ದ ಗೌತಮ ತನ್ನ ಸಂಪತ್ತನ್ನು ತ್ಯಜಿಸಿ ಹೊರ ನಡೆದು ಶಾಂತಿಯ ಕಡೆಗೆ ಹೇಗೆ ನಡೆದನೋ ಅದೇ ರೀತಿ ನಾವು ಕೂಡ ಯಾವುದಕ್ಕೂ ಆಸೆ ಪಡದೆ ಇರುವುದರಲ್ಲಿ ತೃಪ್ತಿ ಪಟ್ಟಾಗ ಮಾತ್ರ ನಮ್ಮ ಜೀವಸವೂ ಸುಖಮಯವಾಗಿ ಇರುತ್ತದೆ, ಆಸೆಯೇ ದುಃಖಕ್ಕೆ ಮೂಲ ಎಂದು ಬುದ್ಧ ತಿಳಿಸಿ ಕೊಟ್ಟಿದ್ದಾನೆ ಎಂದರು.

ಕಾರ್ಯಕ್ರಮದಲ್ಲಿ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಕನ್ನಿಕಾ ಪರಮೇಶ್ವರಿ, ಸಾಹೇ ವಿವಿಯ ಉಪ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ರಿಜಿಸ್ಟ್ರಾರ್ ಎಂ.ಝಡ್.ಕುರಿಯನ್, ಕುಲಪತಿಗಳ ಸಲಹೆಗಾರ ಡಾ.ವಿವೇಕ್ ವೀರಯ್ಯ, ಶ್ರೀಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ನಂಜುಂಡಪ್ಪ, ಸಿದ್ದಾರ್ಥ ಮೆಡಿಕಲ್ ಕಾಲೇಜು, ಡೆಂಟಲ್, ಇಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರು, ಪ್ರಾಧ್ಯಾಪಕರು ಸೇರಿದಂತೆ ಸಂಸ್ಥೆಯ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Get real time updates directly on you device, subscribe now.

Comments are closed.

error: Content is protected !!