ಅಪಘಾತದಲ್ಲಿ ಮಹಿಳೆ ಸಾವು

25

Get real time updates directly on you device, subscribe now.


ಮಧುಗಿರಿ: ಚಲಿಸುತ್ತಿದ್ದ ಎರಡು ದ್ವಿಚಕ್ರ ವಾಹನ ಸವಾರರು ಮುಖಾ ಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಓರ್ವ ಮಹಿಳೆ ಮೃತಪಟ್ಟಿದ್ದು 3 ಜನರಿಗೆ ಗಂಭೀರ ಗಾಯಗಳಾಗಿವೆ.
ಮಧುಗಿರಿ ತಾಲ್ಲೂಕಿನ ಪುರವರ ಗ್ರಾಮದ ಹೊರ ವಲಯದ ಜಯಮಂಗಲಿ ನದಿ ಸೇತುವೆ ಬಳಿ ಘಟನೆ ಜರುಗಿದ್ದು ಪುರವರ ಹೋಬಳಿಯ ಕೃಷ್ಣಯ್ಯಪಾಳ್ಯದಿಂದ ಜೋಗೇನಹಳ್ಳಿ ಗ್ರಾಮಕ್ಕೆ ಬರುತಿದ್ದ ತಾಯಿ ಮಗ ಹಾಗೂ ಕೊಡಿಗೇನ ಹಳ್ಳಿಯಿಂದ ಮಧುಗಿರಿಗೆ ತೆರಳುತ್ತಿದ್ದ ಇಬ್ಬರು ಸ್ನೇಹಿತರ ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ.
ಡಿಕ್ಕಿಯಾದ ರಭಸಕ್ಕೆ ಜೋಗೇನಹಳ್ಳಿ ಗ್ರಾಮದ ಹನುಮಕ್ಕ (45) ಸ್ಥಳದಲ್ಲೇ ಮೃತಪಟ್ಟಿದ್ದು ಮೃತ ಮಹಿಳೆ ಮಗನಿಗೆ (25) ಗಂಭೀರ ಗಾಯಗಳಾಗಿವೆ, ಮತ್ತೊಂದು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತಿದ್ದ ಉಪ್ಪಾರಹಳ್ಳಿ ಗ್ರಾಮದ ಹನುಮಂತ ರೆಡ್ಡಿ (65), ಗಂಗಾಧರಪ್ಪ (67) ಎಂಬುವವರಿಗೂ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದು ಸ್ಥಳಕ್ಕೆ ಕೊಡಿಗೇನಹಳ್ಳಿ ಪಿಎಸೈ ಮೆಹಬೂಬ್ ಖಾನ್ ಭೇಟಿ ನೀಡಿ ಗಾಯಾಳುಗಳನ್ನು ಹಾಗೂ ಮೃತ ಮಹಿಳೆಯನ್ನು ಮಧುಗಿರಿ ಸಾರ್ವಜನಿಕರ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Get real time updates directly on you device, subscribe now.

Comments are closed.

error: Content is protected !!