ತುಮಕೂರು: ಗೌರ್ನಮೆಂಟ್ ಟೂಲ್ಸ್ ಅಂಡ್ ಟ್ರೈನಿಂಗ್ ಸೆಂಟರ್ ವತಿಯಿಂದ ಈ ಹಿಂದೆ ಇದ್ದ ಡಿಪ್ಲೋಮಾ ಇನ್ ಟೂಲ್ ಮತ್ತು ಡೈ ಮೆಕಿಂಗ್ ವಿಷಯದ ಜೊತೆಗೆ, ಹೊಸದಾಗಿ ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ಇನ್ ಮೆಕಟ್ರಾನಿಕ್ಸ್ ಎಂಬ ಎರಡು ಕೋರ್ಸ್ ಆರಂಭಿಸಿದ್ದು, ಪ್ರವೇಶಕ್ಕೆ ಅನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನವಾಗಿದೆ ಎಂದು ಜಿಟಿಟಿಸಿ ಪ್ರಾಂಶುಪಾಲ ಅಶ್ವಿನ್ ಕುಮಾರ್ ಎಸ್. ಸೋಮಣ್ಣನವರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ವರ್ಷದ ಕ್ಲಾಸ್ ಮತ್ತು ಒಂದು ವರ್ಷದ ಕೈಗಾರಿಕಾ ತರಬೇತಿ ಸೇರಿ ನಾಲ್ಕು ವರ್ಷದ ಡಿಪ್ಲೋಮಾ ಕೋರ್ಸ್ಗಳಿಗೆ ಸೇರ್ಪಡೆಗೊಂಡು ಪಾಸಾಗಿರುವ ಎಲ್ಲಾ ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಉದ್ಯೋಗ ಪಡೆದಿದ್ದು, ಶೇ.100 ರಷ್ಟು ಉದ್ಯೋಗ ದೊರೆತಿರುವುದು ಹೆಮ್ಮೆಯ ವಿಚಾರ ಎಂದರು.
ಡೆನ್ಮಾರ್ಕ್ ದೇಶದ ಸಹಯೋಗದಲ್ಲಿ 2002 ರಲ್ಲಿ ರಾಜ್ಯದಲ್ಲಿ ಆರಂಭವಾದ ಜಿಟಿಟಿಸಿ ಇಂದು ರಾಜ್ಯದ 32 ಜಿಲ್ಲೆಗಳಲ್ಲಿಯೂ ನಡೆಯುತ್ತಿದೆ, ತುಮಕೂರು ಜಿಲ್ಲೆಯಲ್ಲಿ 2009ರಲ್ಲಿ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಆರಂಭವಾಗಿರುವ ಜಿಟಿಟಿಸಿ ಸಾವಿರಾರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಉದ್ಯೋಗ ಕಲ್ಪಿಸಿದೆ, ಡಿಪ್ಲೋಮಾ ಕೊನೆಯ ವರ್ಷದ ಕೈಗಾರಿಕಾ ತರಬೇತಿಯಲ್ಲಿ ಶಿಕ್ಷಣಾರ್ಥಿಗೆ ಮಾಸಿಕ 14 ಸಾವಿರದಿಂದ 20 ಸಾವಿರದ ವರೆಗೆ ಶಿಷ್ಯ ವೇತನ ದೊರೆಯಲಿದೆ, ಇದರ ಜೊತೆಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗದ ಇಲಾಖೆಯಿಂದ ವಿದ್ಯಾರ್ಥಿ ವೇತನವೂ ಲಭ್ಯವಾಗಲಿದೆ ಎಂದು ಪ್ರಾಂಶುಪಾಲ ಅಶ್ವಿನ್ ಕುಮಾರ್ ಸೋಮಣ್ಣನವರ್ ತಿಳಿಸಿದರು.
ಜಿಟಿಟಿಸಿ ಯು ರಾಜ್ಯದ ಸುಮಾರು 130ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಇಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಕೊನೆಯ ವರ್ಷದ ತರಬೇತಿ ಪಡೆಯಲು ಕಂಪನಿಗಳಿಗೆ ಕಳುಹಿಸಿ ಕೊಡಲಾಗುವುದು, ಪ್ರತಿವರ್ಷ ತುಮಕೂರು ಜಿಟಿಟಿಸಿಯಿಂದ 80ಕ್ಕೂ ಹೆಚ್ಚು ಮಕ್ಕಳು ಕಿರ್ಲೊಸ್ಕರ್ ಕಂಪನಿಯಲ್ಲಿ ತರಬೇತಿ ಪಡೆದಿದ್ದು, ಬಹುತೇಕರು ಉದ್ಯೋಗ ಪಡೆದಿದ್ದಾರೆ, ಮುಂದಿನ ಶೈಕ್ಷಣಿಕ ವರ್ಷದಿಂದ ಹಾಸ್ಟಲ್ ಕೂಡ ಆರಂಭವಾಗಲಿದೆ, ಹೊಸ ಕೋರ್ಸುಗಳಿಗೂ ನುರಿತ ಭೋದಕರಿದ್ದು, ರಾಷ್ಟ್ರ ಮಟ್ಟದ ತಾಂತ್ರಿಕ ಮೇಳಗಳಲ್ಲಿ ತುಮಕೂರು ಜಿಟಿಟಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವುದು ಸಂತೋಷದ ವಿಷಯವಾಗಿದೆ ಎಂದು ಪ್ರಾಂಶುಪಾಲ ಅಶ್ವಿನ್ ಕುಮಾರ್ ಎಸ್.ಸೋಮಣ್ಣನವರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪನ್ಯಾಸಕರಾದ ಗಿರಿಧರ್, ಹೇಮಂತ್ ಇದ್ದರು.
Comments are closed.