ತುಮಕೂರು: ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದ ಜೆ.ಸಿ.ಮಾಧುಸ್ವಾಮಿ ಲೋಕಸಭೆ ಚುನಾವಣೆಯಲ್ಲೂ ಟಿಕೆಟ್ ಸಿಗದೆ ಬಿಜೆಪಿ ನಾಯಕರ ಮೇಲೆ ತೀವ್ರ ಅಸಮಾಧಾನ ಹೊಂದಿದ್ದರು, ಬಿಜೆಪಿ ಹೈಕಮಾಂಡ್ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಮಣೆ ಹಾಕಿದ್ದು, ಹೈಕಮಾಂಡ್ ನಿರ್ಧಾರಕ್ಕೆ ಮಾಧುಸ್ವಾಮಿ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರು.
ಮಾಧುಸ್ವಾಮಿ ಕೋಪ ಶಮನ ಮಾಡಲು ಸ್ಥಳೀಯ ಕಮಲ ನಾಯಕರು ಎಷ್ಟೇ ಪ್ರಯತ್ನಪಟ್ಟರು ಯಶಸ್ವಿಯಾಗಲಿಲ್ಲ, ಪಕ್ಷ ಸೇರ್ಪಡೆಗೆ ಕಾಂಗ್ರೆಸ್ ನಿಂದ ಆಫರ್ ಬಂದಿದ್ದ ಸಂದರ್ಭದಲ್ಲಿ ಬಿಎಸ್ವೈ ಅವರ ಒಂದು ಫೋನ್ ಕೆರೆ ಕೋಪ ಶಮನವಾಗದಿದ್ರು ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಪರವಾಗಿ ಚುನಾವಣೆ ಮಾಡದೆ ಮೌನವಾಗಿಯೇ ಉಳಿಯುವಂತೆ ಆಯಿತು, ಪಕ್ಷ ತೊರೆಯದಂತೆ ಮನವೊಲಿಸಿದ್ದು ಬಿಟ್ಟರೆ ಬೇರೇನೂ ಆಗಲಿಲ್ಲ ಎಂಬುದು ಬಿಜೆಪಿಗರ ಮಾತು.
ಮಾಧುಸ್ವಾಮಿ ವರ್ತನೆಗೆ ಕಿಡಿ
ಬಸವರಾಜು ಬೊಮ್ಮಾಯಿ ಅವರ ಅವಧಿಯಲ್ಲಿ ಜೆ.ಸಿ.ಮಾಧುಸ್ವಾಮಿ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಸಾಕಷ್ಟು ದೂರು ಕೇಳಿ ಬಂದಿದ್ದವು, ಸಚಿವ ಸ್ಥಾನದಿಂದ ವಜಾ ಮಾಡುವಂತೆ ಒತ್ತಾಯವೂ ಇತ್ತು, ತಾನು ಕಾನೂನು ಪಂಡಿತ, ನನ್ನ ಬಿಟ್ಟರೆ ಮಿಕ್ಕವರು ದಡ್ಡರು ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ ಎಂದು ದೂರಿದ್ದರು, ಆದರೆ ಇದ್ಯಾವುದಕ್ಕೂ ಕೇರ್ ಮಾಡದ ಮಾಧುಸ್ವಾಮಿ ಬಿಜೆಪಿ ಹೈಕಮಾಂಡ್ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು.
ಎಂಎಲ್ಸಿಗೂ ಆಕಾಂಕ್ಷಿ!
ಪ್ರಸ್ತುತ ಪದವೀಧರರ ಎಂಎಲ್ಸಿ ಚುನಾವಣೆಯಲ್ಲಿ ಇವರ ಹೆಸರು ಮುಂಚೂಣಿಯಲ್ಲಿತ್ತು, ಆದರೆ ಲೋಕಸಭಾ ಚುನಾವಣೆಯಲ್ಲಿ ಇವರ ವರ್ತನೆ, ಉಡಾಫೆ ಹೇಳಿಕೆಗೆ ಸ್ಥಳೀಯ ಬಿಜೆಪಿ ನಾಯಕರು ಗರಂ ಆಗಿದ್ದರು, ಮಾಧುಸ್ವಾಮಿ ನಡವಳಿಕೆಯನ್ನು ರಾಜ್ಯ ನಾಯಕರಲ್ಲಿ ದೂರಿ ಎಂಎಲ್ಸಿ ಚುನಾವಣೆಯಲ್ಲಿ ಕೈ ಬಿಡುವಂತೆ ಮಾಡಿದರು.
ಮಾಧುಸ್ವಾಮಿಯಿಂದ ಪಕ್ಷ ದ್ರೋಹ!
ಜಿಲ್ಲಾ ಬಿಜೆಪಿ ವಲಯದಲ್ಲಿ ಬಿರುಕು ಮೂಡಲು ಮಾಧುಸ್ವಾಮಿ ಅವರೇ ಕಾರಣ ಎಂದು ಸ್ಥಳೀಯ ಬಿಜೆಪಿ ನಾಯಕರು ದೂರಿದ್ದಾರೆ, ಸೋಮಣ್ಣ ಅವರಿಗೆ ಬೆಂಬಲ ನೀಡುವ ಬಗ್ಗೆ ನಾನು ಚಿಂತಿಸಿಲ್ಲ, ಒಂದು ವೋಟ್ನಲ್ಲಿ ಏನಾಗುತ್ತೆ ಬಿಡಿ ಎಂದು ಸೋಮಣ್ಣಗೆ ಟಾಂಗ್ ಕೊಟ್ಟಿದ್ದರು, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ, ವೈಯಕ್ತಿಕ ವರ್ಚಸ್ಸು ಕಳೆದುಕೊಂಡಿದ್ದಾರೆ, ಇಂತಹವರು ಬಿಜೆಪಿಯಲ್ಲಿ ಇರಬೇಕಾ ಎಂದು ವ್ಯಾಪಕ ಚರ್ಚೆ ನಡೆಸಿದ್ದರು ಎನ್ನಲಾಗಿದೆ.
ಮಾಧುಸ್ವಾಮಿ ಉಚ್ಛಾಟನೆ?
ಜಿಲ್ಲಾ ಬಿಜೆಪಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿಲ್ಲ, ನಾಯಕರೊಂದಿಗೆ ಸದಾ ಮುನಿಸಿನ ಭಾವನೆ ತೋರುತ್ತಾರೆ, ಅಲ್ಲದೆ ಪಕ್ಷ ದ್ರೋಹಿ ಚಟುವಟಿಕೆ ನಡೆಸಿದ್ದಾರೆ, ನುರಿತು ರಾಜಕಾರಣಿ ಪಕ್ಷದ ನಿಷ್ಠೆಗಾದ್ರು ತುಮಕೂರು ಲೋಕಾಸಭಾ ಕ್ಷೇತ್ರದ ಅಭ್ಯರ್ಥಿ ಪರವಾಗಿ ಕೆಲಸ ಮಾಡಬಹುದಿತ್ತು, ಆದರೆ ಉಡಾಫೆಯಾಗಿ ವರ್ತಿಸಿದ್ದಾರೆ, ಇಂತಹವರು ಪಕ್ಷದಲ್ಲಿ ಇರಬಾರದು, ಮಾಧಸ್ವಾಮಿ ಅವರನ್ನು ಈ ಕೂಡಲೇ ಬಿಜೆಪಿಯಿಂದ ಉಚ್ಛಾಟನೆ ಮಾಡಿ ಎಂದು ಜಿಲ್ಲಾ ಬಿಜೆಪಿ ನಿಯೋಗ ತೆರಳಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ, ನಿಯೋಗದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿ, ಶಾಸಕ ಜ್ಯೋತಿಗಣೇಶ್, ಶಾಸಕ ಬಿ.ಸುರೇಶ್ ಗೌಡ, ಬಿಜೆಪಿ ರಾಜ್ಯ ಕಾರ್ಯದರ್ಶಿ ಗಂಗರಾಜು ಇನ್ನೂ ಹಲವು ಮಂದಿ ಇದ್ದರು ಎನ್ನಲಾಗಿದೆ.
ನಾರಾಯಣ ಸ್ವಾಮಿ ಸಪೋರ್ಟ್ ಇಲ್ಲ..
ಆಗ್ನೇಯ ಶಿಕ್ಷಕರ ಕ್ಷೇತ್ರ ಸೇರಿದಂತೆ ರಾಜ್ಯದ 6 ಶಿಕ್ಷಕರ ಕ್ಷೇತ್ರಗಳಿಗೆ ಈ ಬಾರಿ ಚುನಾವಣೆ ನಡೆಯುತ್ತಿದ್ದು, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಒಳಗೊಂಡ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ವೈ.ಎ.ನಾರಾಯಣ ಸ್ವಾಮಿ ಸ್ಪರ್ಧಿಸಿದ್ದು, ಬೆಂಬಲ ಕೋರಿ ಜೆ.ಸಿ.ಮಾಧುಸ್ವಾಮಿ ಅವರನ್ನು ಭೇಟಿ ಮಾಡಿದರೆ ಅವರು ಬಿಜೆಪಿ ಪಕ್ಷದಲ್ಲೇ ಇಲ್ಲವೆಂಬಂತೆ ವರ್ತಿಸಿದ್ದಾರೆ ಎನ್ನಲಾಗಿದೆ, ಇದೆಲ್ಲಾ ಕಾರಣದಿಂದ ಮಾಧುಸ್ವಾಮಿ ವಿರುದ್ಧ ಸಮರ ಶುರುವಾಗಿದೆ, ಇದು ಇನ್ನೂ ಎಲ್ಲಿಗೆ ಬಂದು ನಿಲ್ಲುತ್ತೆ ಎಂಬುದು ಕಾದು ನೋಡಬೇಕಿದೆ.
Comments are closed.