ಆರೋಗ್ಯ ನಿರ್ವಹಣೆಗಾಗಿ ಅರ್ಹ ದಂಪತಿ ಕಾರ್ಡ್

26

Get real time updates directly on you device, subscribe now.


ಕುಣಿಗಲ್: ತಾಯಿ, ಮಗುವಿನ ಆರೋಗ್ಯ ಸಂರಕ್ಷಣೆ, ಆರೈಕೆ ನಿಟ್ಟಿನಲ್ಲಿ ಕೆಎಚ್ಪಿಟಿ ಸಂಸ್ಥೆಯು ಕುಣಿಗಲ್ ಮತ್ತು ತುಮಕೂರು ತಾಲೂಕುಗಳನ್ನು ಪೈಲಟ್ ಯೋಜನೆಗೆ ಆಯ್ಕೆ ಮಾಡಿರುವುದು ಸ್ವಾಗತಾರ್ಹ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಮರಿಯಪ್ಪ ಹೇಳಿದರು.

ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ವಿವಿಧ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಅರ್ಹ ದಂಪತಿಗೆ ಇಸಿ (ಅರ್ಹ ದಂಪತಿ ಕಾರ್ಡ್) ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರಸವ ಪೂರ್ವ ಆರೈಕೆ ನಿಟ್ಟಿನಲ್ಲಿ ದಂಪತಿಗೆ ಅಗತ್ಯ ಮಾಹಿತಿ ನೀಡುವುದು ಅತ್ಯಗತ್ಯವಾಗುತ್ತದೆ, ಈ ನಿಟ್ಟಿನಲ್ಲಿ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಹೆಲ್ದಿಯಂ ಕಂಪನಿ ಸಹಯೋಗದಲ್ಲಿ ಅರ್ಹ ದಂಪತಿ ಆರೋಗ್ಯ ನಿರ್ವಹಣೆ ನಿಟ್ಟಿನಲ್ಲಿ, ಸೂಕ್ತ ದಾಖಲೆ ನಿರ್ವಹಣೆಗೆ ಇಸಿ ಕಾರ್ಡ್ ಸಹಕಾರಿಯಾಗಿದೆ, ಅರ್ಹ ದಂಪತಿಗಳ ದಿನಾಚರಣೆ ಮೂಲಕ ದಂಪತಿಗೆ ಮಗುವನ್ನು ಹೊಂದುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ, ದಂಪತಿಗಳ ಸಮಗ್ರ ಆರೋಗ್ಯ ತಪಾಸಣೆ ಮಾಡಿ, ಅಗತ್ಯ ಬಿದ್ದಲ್ಲಿ ಕಾಲ ಕಾಲಕ್ಕೆ ಸಲಹೆ, ಸಮಾಲೋಚನೆ ನಡೆಸಿ ಮಗುವಿನ ಬೆಳವಣಿಗೆ ನಿಟ್ಟಿನಲ್ಲಿ ದಂಪತಿಯನ್ನು ಮಾನಸಿಕವಾಗಿ ಸಿದ್ಧಗೊಳಿಸಲು ಈ ಯೋಜನೆ ಉಪಯುಕ್ತವಾಗಿದೆ, ಅಶಾ ಕಾರ್ಯಕರ್ತೆಯರು ದಂಪತಿ ಆರೋಗ್ಯ ಮಾಹಿತಿ ಕಾರ್ಡ್ನಲ್ಲಿ ನಮೂದಿಸಿ ಅದಕ್ಕೆ ತಕ್ಕ ಸೂಚನೆ, ಸಲಹೆ ನೀಡಿದಾಗ ತಾಯಿಯು ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯಪೂರ್ಣ ಮಗು ಹುಟ್ಟಲು ಸಹಕಾರಿಯಾಗುತ್ತದೆ ಎಂದರು.

ಹೆಲ್ದಿಯಂ ಕಂಪನಿಯ ಹರೀಶ್ ಮಾತನಾಡಿ, ಉತ್ತಮ ಆರೋಗ್ಯ ಪೂರ್ಣ ಮಗು ಜನಿಸಲು ತಾಯಿಗೆ ಅಗತ್ಯ ಆರೋಗ್ಯ ಮಾಹಿತಿ ನೀಡುವ ಮತ್ತು ತಾಯಿ, ತಂದೆಯ ಆರೋಗ್ಯ ನಿರ್ವಹಣೆ ನಿಟ್ಟಿನಲ್ಲಿ ಇಸಿ ಕಾರ್ಡ್ ಮಹತ್ವದ ಪಾತ್ರ ವಹಿಸುತ್ತದೆ, ಮಗು ಹುಟ್ಟಿದ ಮೇಲೆ ತಾಯಿ ಕಾರ್ಡ್ ಅಗತ್ಯವಾದರೆ, ಪ್ರಸವಕ್ಕೆ ಪೂರ್ವವಾಗಿ ಇಸಿ ಕಾರ್ಡ್ ಅಗತ್ಯವಾಗುತ್ತದೆ, ಇದರಲ್ಲಿ ದಂಪತಿ ಆರೋಗ್ಯ ನಿಟ್ಟಿನಲ್ಲಿ ಸೂಕ್ತ ಮಾಹಿತಿ, ದಾಖಲೆ ನಿರ್ವಹಣೆಯಾಗಿ ಯಾವುದೆ ಆರೋಗ್ಯ ಸಮಸ್ಯೆ ಇದ್ದಲ್ಲಿ ಅದಕ್ಕೆ ಪರಿಹಾರ ಕಂಡುಕೊಂಡು ಆರೋಗ್ಯ ಪೂರ್ಣ ಪ್ರಸವಕ್ಕೆ ಸಹಕಾರಿಯಾಗುತ್ತದೆ ಎಂದರು.

ತುಮಕೂರು ಆಶಾ ಕಾರ್ಯಕರ್ತೆಯರ ಸಲಹೆಗಾರ್ತಿ ಪುಷ್ಪಲತ, ಕಲ್ಯಾಣ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ ಬಾಬು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!