ಉದ್ಯಮ ಬೆಳೆಸುವುದೆಂದರೆ ಉದ್ಯಾನ ಬೆಳೆಸಿದಂತೆ

19

Get real time updates directly on you device, subscribe now.


ತುಮಕೂರು: ಉದ್ಯಮ ಬೆಳೆಸುವುದೆಂದರೆ ಉದ್ಯಾನ ವನ ಬೆಳೆಸಿದಂತೆ, ತಾಳ್ಮೆ, ಪ್ರೀತಿ, ಶಿಸ್ತು, ಕಾಳಜಿ, ನಂಬಿಕೆ ಇರಬೇಕು ಎಂದು ಕೈಗಾರಿಕೋದ್ಯಮಿ,ಎಚ್.ಜಿ.ಚಂದ್ರಶೇಖರ್ ಹೇಳಿದರು.
ತುಮಕೂರು ವಿವಿ ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ವಿಭಾಗ ಆಯೋಜಿಸಿದ್ದ ಉದ್ಯಮಶೀಲತೆ ಅಭಿವೃದ್ಧಿ ಕುರಿತು ವಿಶೇಷ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ವಾಣಿಜ್ಯೋದ್ಯಮದ ಸಾಧಕ ಹಾಗೂ ಬಾಧಕ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಉದ್ಯಮಿಯಾದವನಿಗೆ ಸ್ಪರ್ಧಾ ಮನೋಭಾವ ಇರಬೇಕು, ವಾಣಿಜೋದ್ಯಮ ಸಮುದ್ರವಿದ್ದಂತೆ, ಅಪಾರ ಬುದ್ಧಿಶಕ್ತಿಯೊಂದಿಗೆ ಈಜಬೇಕು, ಉದ್ಯಮ ವಿಸ್ತರಿಸಲು ಸಂಪರ್ಕಗಳು ಅವಶ್ಯಕ, ಜನರ ಬಳಕೆ, ಬಯಕೆಗೆ ಅನುಗುಣವಾಗಿ ಮಾರುಕಟ್ಟೆಯ ನಾಡಿಮಿಡಿತ ಅರಿತಿರಬೇಕು ಎಂದರು.

ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಬದ್ಧತೆ ಮತ್ತು ಉತ್ಸಾಹವಿಲ್ಲದಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ಪ್ರಗತಿಯತ್ತ ಮುನ್ನಡೆಯಬೇಕಾದರೆ ಪರಿಶ್ರಮ ಅಗತ್ಯ, ಈ ದಿನಗಳಲ್ಲಿ ಉದ್ಯೋಗ ಪಡೆಯುವುದು ಸವಾಲಾಗಿದೆ, ವಿದ್ಯಾರ್ಥಿಗಳು ಕೌಶಲ್ಯದ ಬದಲು ಉದ್ಯೋಗಗಳತ್ತ ಮಾತ್ರ ಗಮನ ಹರಿಸುತ್ತಾರೆ, ಬುದ್ಧಿಯನ್ನು ಮಾರಾಟ ಮಾಡದೆ, ಆಲೋಚನೆಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದರು.

ತುಮಕೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷೆ ಪ್ರೊ.ನೂರ್ ಅಫ್ಜಾ, ಕಾನೂನು ಅಧ್ಯಯನ ವಿಭಾಗದ ಸಂಯೋಜಕ ಪ್ರೊ.ಎ.ಮೋಹನ್ ರಾಮ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!