ಕೊರಟಗೆರೆ: ಪ್ರತಿ ವರ್ಷ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿತ್ತು, ಆದರೆ ಈ ವರ್ಷ ಗ್ರಾಮದ ಗೌಡರ ವೈಯಕ್ತಿಕ ವಿಷಯಕ್ಕೆ ದೇವಾಲಯಕ್ಕೆ ಬೀಗ ಹಾಕಿದ್ದು ಗ್ರಾಮಸ್ಥರು ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಜಾತ್ರೆ ನಡೆಸುವಂತೆ ಪಟ್ಟು ಹಿಡಿದಿದ್ದು, ಈ ಪ್ರಕರಣ ಕೊರಟಗೆರೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ತಾಲೂಕಿನ ಸಿ.ಎನ್.ದುರ್ಗಾ ಹೋಬಳಿಯ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರತಿ ವರ್ಷ ಗ್ರಾಮದ ಆಂಜನೇಯ ಸ್ವಾಮಿ ಜಾತ್ರೆಯನ್ನು ಗ್ರಾಮಸ್ಥರೆಲ್ಲಾ ಒಟ್ಟು ಗೂಡಿ ನಡೆಸಿಕೊಂಡು ಬರುತ್ತಿದ್ದೇವು, ಆದರೆ ಊರಿನ ಗೌಡರ ವೈಯಕ್ತಿಕ ವಿಚಾರಕ್ಕೆ ದೇವಾಲಯಕ್ಕೆ ಬೀಗ ಹಾಕಲಾಗಿದ್ದು ಜಾತ್ರೆ ನಡೆಸುವಂತೆ ಪಟ್ಟು ಹಿಡಿದು ಗ್ರಾಮದ ಮಹಿಳೆಯರು ಮತ್ತು ಹಿರಿಯರು, ಯುವಕರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಜಾತ್ರೆಯ ವಿಚಾರದಲ್ಲಿ ವೈಯಕ್ತಿಕ ವಿಚಾರ ಬೇಡ: ವೈಯಕ್ತಿಕ ವಿಚಾರಗಳಿಂದ ಗ್ರಾಮ ದೇವರ ಜಾತ್ರಾ ನಡೆಸುವಲ್ಲಿ ಊರಿನಲ್ಲಿ ಗೊಂದಲ ಸೃಷ್ಟಿಯಾಗುವುದು ಬೇಡ, ಚುನಾವಣಾ ಫಲಿತಾಂಶ ಹತ್ತಿರವಿರುವ ಕಾರಣ ಪೊಲೀಸ್ ಇಲಾಖೆಗೆ ಮತ್ತು ಕಂದಾಯ ಇಲಾಖೆಗೆ ಒತ್ತಡವಿರುತ್ತದೆ, ಚುನಾವಣೆ ಫಲಿತಾಂಶದ ನಂತರದ ದಿನಗಳಲ್ಲಿ ಜಾತ್ರೆ ನಡೆಸಿಕೊಳ್ಳಿ, ಈಗಾಗಲೇ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಕೇಸ್ ನ್ನು ವಾಪಸ್ ತೆಗೆದುಕೊಳ್ಳಿ, ಮುಂದೆಂದು ಈ ರೀತಿಯ ಸಮಸ್ಯೆ ಆಗುವುದಿಲ್ಲ ಎಂದು ತಹಶೀಲ್ದಾರ್ ಮಂಜುನಾಥ್ ಗ್ರಾಮಸ್ಥರಿಗೆ ಪ್ರತಿಕ್ರಿಯಿಸಿದರು.
ತಾಲೂಕಿನ ಸಿ.ಎನ್.ದುರ್ಗಾ ಹೋಬಳಿಯ ಕುರುಂಕೋಟೆ ಗ್ರಾಪಂ ವ್ಯಾಪ್ತಿಯ ಕುರುಬರಹಳ್ಳಿ ಗ್ರಾಮದಲ್ಲಿ ಜಾತ್ರೆ ವಿಚಾರಕ್ಕೆ ಸಂಬಂಧಪಟ್ಟಂಟೆ ಗೊಂದಲ ಸೃಷ್ಟಿಯಾಗಿ ಗ್ರಾಮಸ್ಥರೆಲ್ಲರೂ ಈ ವಿಚಾರಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಕೇಸ್ ದಾಖಲಿಸಿದ್ದಾರೆ, ಲೋಕಸಭಾ ಚುನಾವಣಾ ಫಲಿತಾಂಶದ ದಿನಗಳೂ ಹತ್ತಿರವೇ ಇದ್ದು ಕಂದಾಯ ಇಲಾಖೆಗೆ ಮತ್ತು ಪೊಲೀಸ್ ಇಲಾಖೆಗೆ ಸಾಕಷ್ಟು ಒತ್ತಡವಿದೆ, ಹಾಗಾಗಿ ಫಲಿತಾಂಶದ ನಂತರದ ದಿನಗಳಲ್ಲಿ ಪೊಲೀಸ್ ಬಂದೋಬಸ್ತ್ನೊಂದಿಗೆ ವಿಜೃಂಭಣೆಯಿಂದ ಜಾತ್ರೆ ನಡೆಸಿಕೊಡಲಾಗುವುದು.
-ಮಂಜುನಾಥ್, ತಹಶೀಲ್ದಾರ್, ಕೊರಟಗೆರೆ.
ಪ್ರತಿ ವರ್ಷ ನಮ್ಮ ಗ್ರಾಮದಲ್ಲಿ ಆಂಜನೇಯ ಸ್ವಾಮಿಯ ಜಾತ್ರೆ ಅದ್ದೂರಿಯಾಗಿ ನಡೆಯುತ್ತಿತ್ತು, ಆದರೆ ಈ ವರ್ಷ ಊರಿನ ಕೆಲ ವ್ಯಕ್ತಿಗಳು ಜಾತ್ರೆ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿ ದೇವಾಲಯಕ್ಕೆ ಬೀಗ ಹಾಕಿಸಿದ್ದಾರೆ, ನಮ್ಮ ಬೇಡಿಕೆ ಇಷ್ಟೇ ವೈಯಕ್ತಿಕ ವಿಷಯ ಸಾವಿರ ಇರಲಿ, ಜಾತ್ರೆ ವಿಚಾರಕ್ಕೆ ಮಧ್ಯೆ ತರುವುದು ಸರಿಯಲ್ಲ, ಅವರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿ ಜಾತ್ರೆ ನಡೆಸಲು ಅನುವು ಮಾಡಿಕೊಡುವಂತೆ ಅಧಿಕಾರಿಗಳ ಬಳಿ ಒತ್ತಾಯ ಮಾಡಲಾಗಿದ್ದು ಜಾತ್ರೆ ನಡೆಯದಿದ್ದರೆ ತಾಲೂಕು ಕಚೇರಿ ಎದುರು ಧರಣಿ ಕೂರಲಾಗುವುದು.
-ಸುಧಾ, ಬುರುಗನಹಳ್ಳಿ.
Comments are closed.